ಶಿಮ್ಲಾ : ಶಿಮ್ಲಾದ ಪುರಾತನ ಗಯ್ಟೀ ರಂಗಮಂದಿರದಲ್ಲಿ ದಿನಾಂಕ 06-06-2024ರಿಂದ 09-06-2024ರವರೆಗೆ ನಡೆದ ‘ರಾಷ್ಟ್ರೀಯ ಹಿಂದಿ ನಾಟಕ ಸ್ಪರ್ಧೆ’ಯಲ್ಲಿ ಶೈಲೀಕೃತ ನಾಟಕ ವಿಭಾಗದಲ್ಲಿ ಪ್ರಥಮ ಬಹುಮಾನ ಬರುವುದರ ಜೊತೆಗೆ ವೈಯಕ್ತಿಕ ವಿಭಾಗದಲ್ಲೂ ನಿರ್ದೇಶನಕ್ಕಾಗಿ ಬಾಲಕೃಷ್ಣ ಕೊಡವೂರು ಇವರಿಗೆ ಪ್ರಥಮ ಬಹುಮಾನ ಹಾಗೂ ಅತ್ಯುತ್ತಮ ನಟಿ ವಿಭಾಗದಲ್ಲಿ ಚಂದ್ರಾವತಿ ಪಿತ್ರೋಡಿಯವರಿಗೆ ಬಹುಮಾನ ಸಿಕ್ಕಿರುವುದರ ಜೊತೆಗೆ ನಾಟಕ ವೀಕ್ಷಕರೆಲ್ಲರೂ ‘ದ್ರೌಣಿ’ಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದುದು ಇಷ್ಟು ದೂರ ತುಳುನಾಡಿನಿಂದ ಬಂದಿರುವ ಇಡೀ ನವಸುಮ ರಂಗಮಂಚ ತಂಡಕ್ಕೂ ಸಾರ್ಥಕ ಕ್ಷಣ.
ನಾಟಕ : ‘ದ್ರೌಣಿ’
ಮೂಲ ರಚನೆ : ಬಾಲಕೃಷ್ಣ ಕೊಡವೂರು
ಹಿಂದಿ ಅನುವಾದ : ಡಾ. ಮಾಧವಿ ಭಂಡಾರಿ
ರಂಗಪಠ್ಯ : ಅಕ್ಷತಾ ರಾಜ್ ಪೆರ್ಲ
ಬೆಳಕು : ಜಯಶೇಖರ ಮಡಪ್ಪಾಡಿ
ಸಂಗೀತ : ರೋಹಿತ್ ಮಲ್ಪೆ
ಪ್ರಸ್ತುತಿ : ನವಸುಮ ರಂಗಮಂಚ (ರಿ) ಕೊಡವೂರು.