ಧಾರವಾಡ : ಬೆಂಗಳೂರಿನ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ವತಿಯಿಂದ ಬೆಳಗಾವಿಯ ಮಲ್ಲಿಕಾರ್ಜುನ ಗ. ಭೃಂಗಿಮಠ ಸರ್ವಾಧ್ಯಕ್ಷತೆಯಲ್ಲಿ ಧಾರವಾಡದ ಸೃಜನಾ ರಂಗಮಂದಿರದಲ್ಲಿ ದಿನಾಂಕ 24 ನವೆಂಬರ್ 2024ರಂದು ಪ್ರಥಮ ರಾಜ್ಯಮಟ್ಟದ ಕವಿಪೀಠ ಮಹಾಸಮ್ಮೇಳನ ಕನ್ನಡ ರಾಜ್ಯೋತ್ಸವ ನುಡಿ ಸಂಭ್ರಮ 2024 ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಸಮ್ಮೇಳನವನ್ನು ಉದ್ಘಾಟಿಸಿದ ಕ್ಲಾಸಿಕ್ ಸಮೂಹ ಸಂಸ್ಥೆಗಳ ನಿರ್ದೇಶಕ ಲಕ್ಷ್ಮಣ ಎಸ್. ಉಪ್ಪಾರ ಮಾತನಾಡಿ “ಕನ್ನಡ ನಾಡು, ನುಡಿ, ನೆಲ-ಜಲ, ಭಾಷೆ ಸಾಹಿತ್ಯ ಸಂಸ್ಕೃತಿ ಕಲೆಗಳು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿ. ಇದು ನಮಗೆ ಹೆಮ್ಮೆಯ ವಿಷಯ. ಇಂತಹ ಕಾರ್ಯಕ್ರಮಗಳು ಆಗಾಗ ನಡೆಯಬೇಕು” ಎಂದರು.
ಅತಿಥಿಯಾಗಿದ್ದ ಬಸವರಾಜ ಗುರಿಕಾರ ಮಾತನಾಡಿ “ಶಿಕ್ಷಕರು ಸಮಾಜ ತಿದ್ದುವ ಕೆಲಸ ಮಾಡುತ್ತಾ ನಾಡು-ನುಡಿ ದೇಶ ಸೇವೆ ಮಾಡಬೇಕು” ಎಂದರು. ಮುಂಡಗೋಡ ಟಿಬೆಟಿಯನ್ ಕ್ಯಾಂಪ್ ನ ಜಂಪಾ ಲಾಮಾ ಗುರುಜಿ ಸಾನಿಧ್ಯ ವಹಿಸಿದ್ದರು. ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ಸಂಸ್ಥಾಪಕ ರಾಜ್ಯಾಧ್ಯಕ್ಷ ಮನೋಹರ ನಾಯಕ ಅಧ್ಯಕ್ಷತೆ ವಹಿಸಿದ್ದರು. ಬಾಲ ಪ್ರತಿಭೆ ಕೆ.ಎಸ್. ವಿಂದ್ಯಾ ಉಪನ್ಯಾಸ ನೀಡಿದರು.
ಜಿ.ಎಸ್. ಬಿರಾದಾರ, ಆನಂದ ಹಕ್ಕಿನ್ನವರ, ರತ್ನಾ ಬದಿ, ಜಗನ್ನಾಥ ರಾವ್ ಕಠಾರೆ, ರಾಜಶೇಖರ ಮಮ್ಮಾಡ, ರಮೇಶ್ ವರೀಟ್, ಬಸವರಾಜ ಹಡಪದ, ಎಸ್.ಡಿ. ಮುಡೆನ್ನವರ, ಉಷಾ ನಾಯಕ, ಶಶಿರೇಖಾ ರಾಗಿ, ಪಂಚಾಕ್ಷರಯ್ಯ ಹಿರೇಮಠ ಶಾಂತಕುಮಾರ ಭಜಂತ್ರಿ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿ ನೀಡಿ ಗೌರವಿಸಿ, ಹಾರೈಸಲಾಯಿತು. ಸಮ್ಮೇಳನದ ಸರ್ವಾಧ್ಯಕ್ಷ ಮಲ್ಲಿಕಾರ್ಜುನ ಗ. ಭೃಂಗಿಮಠ ಇವರಿಗೆ ಪುಸ್ತಕ ತುಲಾಭಾರ ಸೇವೆ ಮಾಡಲಾಯಿತು.