ಮಂಗಳೂರು : ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ಜಿಲ್ಲಾ ಘಟಕ ದ.ಕ. ಆಶ್ರಯದಲ್ಲಿ ಜಾನಪದ ಕಡಲೋತ್ಸವ, ಜಾನಪದ ಪ್ರದರ್ಶನ, ಆಹಾರ ಮೇಳ ಇದರ ಪ್ರಯುಕ್ತ ಕರಾವಳಿ ಕರ್ನಾಟಕದ ಜಾನಪದ ಸಂಸ್ಕೃತಿ, ಬದುಕು, ಕಲೆ, ಅಚಾರ, ವಿಚಾರ ಪ್ರತಿಬಿಂಬಿಸುವ ವಿಷಯಾಧಾರಿತ ‘ಜಾನಪದ ಸ್ಪರ್ಧಾಕೂಟ’ವು ದಿನಾಂಕ 11-12-2023ರಂದು ಬೆಳಿಗ್ಗೆ 8ರಿಂದ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
ಸ್ಪರ್ಧಾ ವಿಷಯ : ಕರಾವಳಿ ಕರ್ನಾಟಕದ ಜಾನಪದ ಸಂಸ್ಕೃತಿ, ಬದುಕು, ಕಲೆ, ಅಚಾರ, ವಿಚಾರ ಪ್ರತಿಬಿಂಬಿಸುವ ವಿಷಯಾಧಾರಿತ. ನೋಂದಾವಣೆ ಕಡೇ ದಿನಾಂಕ 06-12-2023ರಂದು
ನಿಯಮಗಳು :
1. ಈ ಸ್ಪರ್ಧೆಯು ನಿಗದಿತ ತಂಡಗಳ ನಡುವೆ ನಡೆಯಲಿದೆ.
2. ಮೊದಲು ನೊಂದಾಯಿಸಿದವರಿಗೆ ಮೊದಲ ಪ್ರಾಶಸ್ತ್ಯ.
3. ಪ್ರತಿಯೊಂದು ತಂಡಕ್ಕೆ ನಿರೂಪಣೆ ಸೇರಿ 20 ನಿಮಿಷಗಳ ಕಾಲಾವಕಾಶಗಳನ್ನು ನೀಡಲಾಗುವುದು.
4. 18 ನಿಮಿಷದ ಪ್ರದರ್ಶನ ಆದ ಕೂಡಲೇ ತಂಡಕ್ಕೆ ಸೂಚನೆ ನೀಡಲಾಗುವುದು.
5. ಕರಾವಳಿ ಕರ್ನಾಟಕದ ಸಂಸ್ಕೃತಿಯನ್ನುಒಳಗೊಂಡಿರುವ ಒಂದು ಹಾಡು, ಒಂದು ನೃತ್ಯ ಕಡ್ಡಾಯವಾಗಿರಬೇಕು.
6. ತಂಡದಲ್ಲಿ ಕನಿಷ್ಠ 10 ಜನ, ಗರಿಷ್ಠ ಮಿತಿ ಇರುವುದಿಲ್ಲ.
7. ನಿಮ್ಮ ತಂಡದ ಸ್ಪರ್ಧೆ ಆರಂಭವಾಗಿ ಮುಕ್ತಾಯದವರೆಗೆ ವೇದಿಕೆಯ ಜವಾಬ್ದಾರಿ ನಿಮ್ಮದಾಗಿರುತ್ತದೆ.
9. ತಂಡಗಳು ನಿಮಗೆ ನಿಗದಿ ಪಡಿಸಿದ ಸಮಯದಲ್ಲಿಯೇ ಪ್ರದರ್ಶನ ನೀಡಬೇಕು. ಯಾವುದೇ ಕಾರಣಕ್ಕೂ ಬದಲಾವಣೆಗೆ ಅವಕಾಶ ಇರುವುದಿಲ್ಲ.
10. ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ.
11. ಸ್ಪರ್ಧೆಯಲ್ಲಿ ಬೆಂಕಿ ಮತ್ತು ಸ್ಫೋಟಕ ಬಳಕೆ ನಿಷೇಧಿಸಲಾಗಿದೆ.
12. ಅಶ್ಲೀಲ ಅಸಂಬದ್ಧ ಅಥವಾ ಜಾತಿ ಧರ್ಮಗಳ ಅವಹೇಳನಕ್ಕೆ ಅವಕಾಶವಿಲ್ಲ. ಕಡ್ಡಾಯವಾಗಿ ದೈವಗಳ ಪಾತ್ರಕ್ಕೆ ಅವಕಾಶವಿಲ್ಲ.
13, ಕನಿಷ್ಟ ಬೆಳಕು, ಧ್ವನಿವರ್ಧಕ ಒದಗಿಸಲಾಗುವುದು.
14. ಒಬ್ಬರು ಪ್ರಾಯೋಜಕರೊಂದಿಗೆ ಸಹಕರಿಸತಕ್ಕದ್ದು.
15. ಯಾವುದೇ ನ್ಯೂನತೆ ಕಂಡಲ್ಲಿ ಪ್ರಾಯೋಜಕರಿಗೆ ತಿಳಿಸುವುದು ಉತ್ತಮ.
16. ಎರಡು ದಿವಸ ಮುಂಚಿತವಾಗಿ ಸಿ.ಡಿ. ಹಾಗೂ ಪೆನ್ ಡ್ರೈವ್ ಕೊಡತಕ್ಕದ್ದು.
17. ಮುಕ್ತ ವಿಭಾಗ ಸ್ಪರ್ಧೆ.
ಸ್ಪರ್ಧೆಗೆ ಬಹುಮಾನ :
ಪ್ರಥಮ : ನಗದು, ಶಾಶ್ವತ ಫಲಕ, ಪ್ರಶಸ್ತಿ
ದ್ವಿತೀಯ : ನಗದು, ಶಾಶ್ವತ ಫಲಕ, ಪ್ರಶಸ್ತಿ
ತೃತೀಯ : ನಗದು, ಶಾಶ್ವತ ಫಲಕ, ಪ್ರಶಸ್ತಿ ಮತ್ತು ಶ್ರೇಷ್ಠ ಪ್ರದರ್ಶನ ನೀಡಿದ 10 ತಂಡಗಳಿಗೆ ಶಾಶ್ವತ ಫಲಕ, ಪ್ರಶಸ್ತಿ
ಪ್ರಥಮ, ದ್ವಿತೀಯ ಮತ್ತು ತೃತೀಯ ವಿಜೇತ ತಂಡಗಳು ಜನವರಿಯಲ್ಲಿ ನಡೆಯುವ ಜಾನಪದ ಕಡಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಸ್ಪರ್ಧಾ ಬಹುಮಾನವನ್ನು ಕಡಲೋತ್ಸವದ ಸಮಾರೋಪ ವೇದಿಕೆಯಲ್ಲಿ ರಾಜ್ಯಪಾಲರು, ಮುಖ್ಯ ಮಂತ್ರಿಗಳು, ಸಚಿವರುಗಳ ಉಪಸ್ಥಿತಿಯಲ್ಲಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ : ಅವಿನಾಶ್ : 91 9980358774, ಶಿವಪ್ರಸಾದ್ ಕೊಕ್ಕಡ (+91 9880176555) ವಿಜಯ್ ಕುಮಾರ್ ಜೈನ್ (+91 6362686372)