ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಸಂಯುಕ್ತಾಶ್ರಯದಲ್ಲಿ, ಸುಲೋಚನಾ ಡಾ.ಎಂ.ಜಿ.ನಾಗರಾಜ್ ದಂಪತಿಗಳ ದತ್ತಿಯ ಸಹಕಾರದಿಂದ ‘ಜಿಲ್ಲೆಯ ಪುರಾತತ್ವ ಜಾನಪದ ಮತ್ತು ಪರಿಸರ ವಿಚಾರಗೋಷ್ಠಿ-ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ದಿನಾಂಕ 11 ಮಾರ್ಚ್ 2025ರಂದು ಮಡಿಕೇರಿಯ ಎಫ್. ಎಂ. ಕೆ. ಎಂ. ಸಿ. ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ಸಂಶೋಧಕರು ಹಾಗೂ ಸಾಹಿತಿಗಳಾದ ಡಾ. ಎಂ. ಜಿ. ನಾಗರಾಜ್ ಮಾತನಾಡಿ “ಇತಿಹಾಸದ ಊರುಗೋಲನ್ನು ಇರಿಸಿಕೊಂಡು ಇಂದಿನ ಪರಿಸ್ಥಿತಿಗಳ ಅವಲೋಕನ ನಡೆಯಬೇಕಾಗಿದೆ” ಎಂದರು.
ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದ ಮಂಗಳೂರು ವಿಶ್ವ ವಿದ್ಯಾನಿಲಯದ ಇತಿಹಾಸ ವಿಭಾಗದ ಮಾಜಿ ಮುಖ್ಯಸ್ಥರಾದ ಡಾ.ಕೋಡಿರ ಲೋಕೇಶ್ ಮಾತನಾಡಿ “ಜೀವನವೆನ್ನುವುದು ಉಣ್ಣುವುದು ಹಾಗೂ ತಿನ್ನುವುದನ್ನು ಮೀರಿದ ವಿಚಾರವೇ ಆಗಿದೆ. ಬದುಕನ್ನು ಉತ್ತಮಿಕೆಯತ್ತ ಕೊಂಡೊಯ್ಯಲು ಸಾಹಿತ್ಯ ಮತ್ತು ಸಾಂಸ್ಕಂತಿಕ ವಲಯಗಳತ್ತ ವಾಲಿದಾಗಲೆ ಕಥೆ, ಕವನಗಳನ್ನು ಒಳಗೊಂಡ ಸಾಹಿತ್ಯ, ಕಲೆ ಸೃಷ್ಟಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಮತ್ತು ಸಂಸ್ಕಂತಿಯನ್ನು ಹೊರತಾದ ಬದುಕಿಲ್ಲ” ಎಂದರು.
ವಿರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜಿನ ಉಪನ್ಯಾಸಕರಾದ ಪ್ರತಿಮಾ ರೈ ಮಾತನಾಡಿ “ಇತಿಹಾಸದೊಂದಿಗೆ ಪೌರಾಣಿಕವಾದ ಹಿನ್ನೆಲೆ ಮತ್ತು ಧಾರ್ಮಿಕ ನಂಬುಗೆಗಳು ನಮ್ಮ ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿವೆ. ಕೊಡಗಿನಲ್ಲಿ ಪರಿಸರವನ್ನೇ ದೇವರೆಂದು ಪೂಜಿಸುವ ಹಾಗೂ ಅದರೆಡೆಗೆ ಭಯಭಕ್ತಿಯನ್ನು ಹೊಂದಿರುವ ಕಾರಣಗಳಿಂದ ಇಲ್ಲಿನ ಅರಣ್ಯ ಪರಿಸರವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಜಿಲ್ಲೆಯಲ್ಲಿ 1200 ಕ್ಕೂ ಹೆಚ್ಚಿನ ದೇವರ ಕಾಡುಗಳಿದ್ದು, ಇವುಗಳನ್ನು 165ಕ್ಕೂ ಹೆಚ್ಚಿನ ದೇವರುಗಳ ಹೆಸರಿನಲ್ಲಿ ಪೂಜಿಸಿ ಸಂರಕ್ಷಿಸುವ ಕಾರ್ಯವಾಗುತ್ತಿದೆ” ಎಂದು ತಿಳಿಸಿದರು.
ಕ. ಸಾ. ಪ. ಜಿಲ್ಲಾ ಅಧ್ಯಕ್ಷರಾದ ಎಂ. ಪಿ. ಕೇಶವ ಕಾಮತ್ ಇವರ ಸಭಾಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕ. ಸಾ. ಪ. ಮಾಜಿ ಅಧ್ಯಕ್ಷರಾದ ಟಿ. ಪಿ. ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಡಾ. ಬಿ. ರಾಘವ, ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಧರ್ ಹೆಗಡೆ ಮಾತನಾಡಿದರು. ಎಫ್. ಎಂ. ಸಿ. ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಶ್ರೈಲಶ್ರೀ ಸ್ವಾಗತಿಸಿ, ಜಿಲ್ಲಾ ಕ. ಸಾ. ಪ. ಇದರ ಗೌರವ ಕಾರ್ಯದರ್ಶಿ ಎಸ್.ಐ. ಮುನರ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿ, ಸಹ ಪ್ರಾಧ್ಯಾಪಕರಾದ ಡಾ. ರೇಣುಶ್ರೀ ಹೆಚ್.ಕೆ. ವಂದಿಸಿದರು.
Subscribe to Updates
Get the latest creative news from FooBar about art, design and business.
Previous Article‘ಕನ್ನಡ ಪುಸ್ತಕ ಸೊಗಸು ಬಹುಮಾನ’ಗಳಿಗೆ ಅರ್ಜಿ ಆಹ್ವಾನ | ಮಾರ್ಚ್ 29