ಬೆಂಗಳೂರು : ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಇದರ ವತಿಯಿಂದ ದಿನಾಂಕ 15 ಡಿಸೆಂಬರ್ 2024ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ‘ಮಹಿಳೆಯರಿಗಾಗಿ ಜಾನಪದ ಗೀತೆ ಸ್ಪರ್ಧೆ, ಭಾವಗೀತೆ ಸ್ಪರ್ಧೆ, ಭಕ್ತಿಗೀತೆ ಸ್ಪರ್ಧೆ’ ಹೀಗೆ ಮೂರು ವಿಭಾಗಗಳಲ್ಲಿ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಪಡೆದವರಿಗೆ ಪಾರಿತೋಷಕದೊಂದಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತರು ಬಿ. ಶೃಂಗೇಶ್ವರ ಇವರ ವಾಟ್ಸಾಪ್ ನಲ್ಲಿ (99008 45757) ತಮ್ಮ ಹೆಸರು, ವಯಸ್ಸು, ಊರು, ಸ್ಪರ್ಧಾ ವಿಭಾಗ ಮತ್ತು ವಾಟ್ಸಾಪ್ ಸಂಖ್ಯೆಯನ್ನು ನಮೂದು ಮಾಡುವುದರ ಮೂಲಕ ಹೆಸರನ್ನು ನೋಂದಾಯಿಸಿಕೊಳ್ಳುವುದು.
ನಿಯಮಗಳು :-
1) ಸ್ಪರ್ಧೆಯು 20ರಿಂದ 45 ವಯಸ್ಸಿನೊಳಗಿನ ಮಹಿಳೆಯರಿಗೆ ಮಾತ್ರ ತೆರೆದಿದೆ.
2) ಮೂರು ವಿಭಾಗಗಳಲ್ಲಿ ಸ್ಪರ್ಧೆ ಇರುವುದಾದರೂ ಸ್ಪರ್ಧಾರ್ಥಿಗಳು ಮೂರರಲ್ಲಿ ಒಂದು ವಿಭಾಗದಲ್ಲಿ ಮಾತ್ರ ಸ್ಪರ್ಧಿಸಬಹುದಾಗಿದೆ.
3) ದಿನಾಂಕ 15 ಡಿಸೆಂಬರ್ 2024ರಂದು ಬೆಳಗ್ಗೆ 10-00 ಗಂಟೆಗೆ ಸರಿಯಾಗಿ ಸ್ಪರ್ಧೆ ಪ್ರಾರಂಭವಾಗುವ ವೇಳೆಗೆ ಸ್ಪರ್ಧಿಗಳು ಹಾಜರಿರಬೇಕು.
4) ಗಾಯಕರು ವೇದಿಕೆಯಲ್ಲಿ ಕೃತಿಕಾರರ ಹೆಸರನ್ನು ತಿಳಿಸಬೇಕು. (ಜಾನಪದ ಗೀತೆಗಳ ಹೊರತು)
5) ಜಾನಪದ ಗೀತೆಯ ಸ್ಪರ್ಧೆಯಲ್ಲಿ ನಿಮ್ಮ ಆಯ್ಕೆ ಮೂಲ ಜಾನಪದ ಗೀತೆಯಾಗಿರಲಿ, ಜಾನಪದ ಶೈಲಿಯ ಗೀತೆಗಳು ಸ್ವೀಕಾರಾರ್ಹವಲ್ಲ.
6) ಪ್ರಯಾಣ ಮತ್ತು ಊಟದ ವ್ಯವಸ್ಥೆ ಸ್ಪರ್ಧಿಗಳದೇ ಆಗಿರುತ್ತದೆ.
7) ಎಲ್ಲಾ ಸ್ಪರ್ಧೆಗಳು ಮುಗಿದ ನಂತರ ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯ ತೀರ್ಪುನ್ನು ಪ್ರಕಟಿಸಿ ವಿಜೇತರನ್ನು ಗೌರವಿಸಲಾಗುವುದು.
8) ಸ್ಪರ್ಧೆಯಲ್ಲಿ ಭಾಗವಹಿಸಿದವರೆಲ್ಲರಿಗೂ ಪ್ರಶಂಸನಾ ಪತ್ರವನ್ನು ನೀಡಲಾಗುವುದು.
9) ತೀರ್ಪುಗಾರರಾಗಿ ಶ್ರೀಮತಿ ವಾಣಿ ನಾಗೇಂದ್ರ (ಹಾಸನ), ಶ್ರೀಮತಿ ಗೌರವ ಸುಧಾಮುರಳಿ (ಮೈಸೂರು), ಶ್ರೀಮತಿ ಗಿರಿಜಾ ನವೀನ್ (ಗಂಗಾವತಿ) ಕಾರ್ಯ ನಿರ್ವಹಿಸಲಿದ್ದಾರೆ.
೧0) ಮೂರೂ ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕ ವಿರುವುದಿಲ್ಲ.
೧೧) ಸ್ಪರ್ಧೆಗೆ ಹೆಸರು ನೋಂದಾಯಿಸಿಕೊಳ್ಳಲು 5 ಡಿಸೆಂಬರ್ 2024 ಕೊನೆಯ ದಿನವಾಗಿದೆ.
೧೨) ಸ್ಪರ್ಧೆಯ ನೀತಿ ನಿಯಮಗಳಲ್ಲಿ ಯಾವುದೇ ಬದಲಾವಣೆಯ ಹಕ್ಕನ್ನು ಸಂಸ್ಥೆಯ ಅಧ್ಯಕ್ಷರು ಹೊಂದಿರುತ್ತಾರೆ.
೧೩) ಈ ಗಾಯನ ಸ್ಪರ್ಧೆಯು ಕೇವಲ ನಿರ್ದಿಷ್ಟ ಪಡಿಸಿದ ವಯಸ್ಸಿನ ಮಹಿಳೆಯರಿಗೆ ಮಾತ್ರ ಮೀಸಲಾಗಿದೆ.
೧೪) ಒಬ್ಬರು ಒಂದು ವಿಭಾಗದ ಹೊರತು ಮೂರೂ ವಿಭಾಗಗಳಲ್ಲಿ ಸ್ಪರ್ಧಿಸುವಂತಿಲ್ಲ ! ಆಯ್ಕೆ ನಿಮ್ಮದು.
೧೫) ತೀರ್ಪುಗಾರರ ತೀರ್ಮಾನವೇ ಅಂತಿಮ.