ಸಾಗರ : ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಸಾಗರ ಘಟಕ ಶಿವಮೊಗ್ಗ ಜಿಲ್ಲೆ ಇವರ ವತಿಯಿಂದ ದಿನಾಂಕ 01 ಫೆಬ್ರುವರಿ 2026ರಂದು ಸಂಜೆ 4-30 ಗಂಟೆಗೆ ಸಾಗರ ವಿಜಯನಗರ ಕಂಬಳಿಕೊಪ್ಪ ಕ್ರಾಸ್ ಎದುರು ಭೀಮನ ಕೋಣೆ ರಸ್ತೆ, ಆಶೀರ್ವಾದ ಲೇಔಟ್ ಡಾ. ಅನ್ನಪೂರ್ಣ ಶ್ರೀ ಲೋಕೇಶ್ ಬಿ.ಎನ್. ಇವರ ‘ಅನಂತ ವಿಜಯ ನಿಲಯ’ದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಾನ್ಯ ಉಪ ವಿಭಾಗಾಧಿಕಾರಿಗಳಾದ ವೀರೇಶ್ ಕುಮಾರ್ ಕೆ.ಎ.ಎಸ್. ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಸಾಗರ ಘಟಕದ ಅಧ್ಯಕ್ಷರಾದ ಸತ್ಯನಾರಾಯಣ ಸಿರಿವಂತೆ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಕ. ಸಾ. ಪ. ಮತ್ತು ಕ. ಜಾ. ಪ. ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಡಿ. ಮಂಜುನಾಥ ಇವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕರ್ನಾಟಕ ಜಾನಪದ ಪರಿಷತ್ತು ಕಲಾವಿದರಿಂದ ಜಾನಪದ ಗಾಯನ ಪ್ರಸ್ತುತಿ ನಡೆಯಲಿದೆ.

