ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ತಾಳಮದ್ದಳೆಯು ದಿನಾಂಕ 08 ನವೆಂಬರ್ 2025ರಂದು ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ಪಾರ್ತಿಸುಬ್ಬ ವಿರಚಿತ ‘ಶ್ರೀ ರಾಮ ಪಾದುಕಾ ಪ್ರದಾನ’ ಪ್ರಸಂಗದೊಂದಿಗೆ ನಡೆಯಿತು.
ಹಿಮ್ಮೇಳದಲ್ಲಿ ಯಲ್.ಯನ್. ಭಟ್, ಆನಂದ ಸವಣೂರು, ಪದ್ಯಾಣ ಜಯರಾಮ ಭಟ್, ಮುರಳೀಧರ ಕಲ್ಲೂರಾಯ, ಪರೀಕ್ಷಿತ್ ಹಂದ್ರಟ್ಟ, ಅನೀಶ್ ಕೃಷ್ಣ ಪುಣಚ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ರಾಮ (ಭಾಸ್ಕರ್ ಬಾರ್ಯ, ಭಾಸ್ಕರ್ ಶೆಟ್ಟಿ ಸಾಲ್ಮರ ಹಾಗೂ ಹರಿಣಾಕ್ಷಿ ಜೆ. ಶೆಟ್ಟಿ), ಭರತ (ಗುಡ್ಡಪ್ಪ ಬಲ್ಯ ಮತ್ತು ಕಿಶೋರಿ ದುಗ್ಗಪ್ಪ ನಡುಗಲ್ಲು), ವಸಿಷ್ಠ (ದುಗ್ಗಪ್ಪ ನಡುಗಲ್ಲು), ಲಕ್ಷ್ಮಣ (ಲಕ್ಷ್ಮೀಕಾಂತ ಹೆಗ್ಡೆ ಪರ್ಲಡ್ಕ), ಗುಹ (ಪರೀಕ್ಷಿತ್ ಹಂದ್ರಟ್ಟ) ಸಹಕರಿಸಿದರು. ಕಾರ್ಯಕ್ರಮದ ಮೊದಲಿಗೆ ಇತ್ತೀಚೆಗೆ ದೈವಾಧೀನರಾದ ಯಕ್ಷಛಾಂದಸ ಗಣೇಶ್ ಕೊಲೆಕಾಡಿಯವರಿಗೆ ಸಂಘದ ವತಿಯಿಂದ ನುಡಿನಮನ ಸಲ್ಲಿಸಲಾಯಿರು. ಹರ್ಷ ಪುಣಚ ಸ್ವಾಗತಿಸಿ, ಪದ್ಮನಾಭ ಹಂದ್ರಟ್ಟ ವಂದಿಸಿದರು.
