ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ನಡೆಯುವ ಪಾಕ್ಷಿಕ ತಾಳಮದ್ದಳೆ ‘ಸುದರ್ಶನ ವಿಜಯ’ ಪ್ರಸಂಗದೊಂದಿಗೆ ದಿನಾಂಕ 10 ಜನವರಿ 2026ರಂದು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ನಡೆಯಿತು.
ಹಿಮ್ಮೇಳದಲ್ಲಿ ಸತೀಶ್ ಇರ್ದೆ, ಆನಂದ ಸವಣೂರು, ಮುರಳೀಧರ ಕಲ್ಲೂರಾಯ, ಶರಣ್ಯ ನೆತ್ತರಕೆರೆ, ಸಮರ್ಥ ವಿಷ್ಣು ಕಡಂಬಳಿಕೆ ಮೊದಲಾದವರು ಸಹಕರಿಸಿದರು. ಮುಮ್ಮೇಳದಲ್ಲಿ ವಿ.ಕೆ. ಶರ್ಮ ಅಳಿಕೆ (ವಿಷ್ಣು), ಭಾರತಿ ರೈ ಅರಿಯಡ್ಕ (ಲಕ್ಷ್ಮಿ), ಶುಭ ಅಡಿಗ (ಸುದರ್ಶನ), ಹರಿಣಾಕ್ಷಿ ಜೆ. ಶೆಟ್ಟಿ (ಶತ್ರು ಪ್ರಸೂದನ), ಲಕ್ಷ್ಮೀಕಾಂತ ಹೆಗ್ಡೆ ಪರ್ಲಡ್ಕ (ದೇವೇಂದ್ರ) ಸಹಕರಿಸಿದರು. ಸಂಘದ ಅಧ್ಯಕ್ಷರಾದ ಭಾಸ್ಕರ್ ಬಾರ್ಯ ಸ್ವಾಗತಿಸಿ, ವಂದಿಸಿದರು.
