ಮೂಡುಬಿದಿರೆ : ಆಮ್ನಾಯಃ – ಯಕ್ಷಸಂಸ್ಕೃತಿ ಬಳಗ ಗಾಳಿಮನೆ ಇದರ ವತಿಯಿಂದ ಪಾಕ್ಷಿಕ ತಾಳಮದ್ದಲೆ ಸರಣಿ – ವಿಶ್ವಾವಸು 5127 ದಿನಾಂಕ 10 ಜುಲೈ 2025ರಂದು ಸಂಜೆ 6-00 ಗಂಟೆಗೆ ಮೂಡುಬಿದಿರೆಯ ಶ್ರೀಜೈನ ಮಠದ ಭಟ್ಟಾರಕ ಸಭಾಂಗಣದಲ್ಲಿ ನಡೆಯಲಿದೆ.
ಕವಿ ಪಾರ್ತಿಸುಬ್ಬ ವಿರಚಿತ ‘ಶ್ರೀರಾಮಪಟ್ಟಾಭಿಷೇಕ’ ಎಂಬ ಆಖ್ಯಾನದ ತಾಳಮದ್ದಲೆಯಲ್ಲಿ ಹಿಮ್ಮೇಳದಲ್ಲಿ ಶಿವಪ್ರಸಾದ ಭಟ್ಟ ಕಾಂತಾವರ ಭಾಗವತರಾಗಿ, ಚೆಂಡೆ ಮದ್ದಳೆಯಲ್ಲಿ ರವಿಪ್ರಸಾದ ಶೆಟ್ಟಿ ಲಾಡಿ, ಪುರುಷೋತ್ತಮ ತುಳುಪುಳೆ, ವಿವಿಜೇಶ ಡಿ. ಭಟ್ಟ ಬೆಳುವಾಯಿ ಮತ್ತು ಪ್ರಮುಖ ತುಳುಪುಳೆ ಹಾಗೂ ಮುಮ್ಮೇಳದಲ್ಲಿ ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ, ವಿನಾಯಕ ಚಂದ್ರಶೇಖರ ಭಟ್ಟ ಗಾಳಿಮನೆ, ಸದಾಶಿವ ರಾವ್ ನೆಲ್ಲಿಮಾರ್, ಪುರಂದರ ಪುರೋಹಿತ ಮುನಿಯಾಲು ಮತ್ತು ಶಾಲಿನೀ ಪ್ರಸಾದ ಇವರುಗಳು ಸಹಕರಿಸಲಿದ್ದಾರೆ.