ಸಾಲಿಗ್ರಾಮ : ಕಳೆದ ಐವತ್ತೆರಡು ವರ್ಷಗಳಿಂದ ಯಕ್ಷಗಾನಕ್ಕೆ ಗಣನೀಯ ಪ್ರಮಾಣದಲ್ಲಿ ಕಲಾವಿದರನ್ನು ನೀಡಿದ ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾಕೇಂದ್ರ ಇದರ ವತಿಯಿಂದ ಈ ವರ್ಷದ ಹಿಮ್ಮೇಳ (ಮದ್ದಲೆ, ಚೆಂಡೆ, ಭಾಗವತಿಗೆ) ಮತ್ತು ಮುಮ್ಮೇಳ (ಯಕ್ಷಗಾನ ಹೆಜ್ಜೆ, ಅಭಿನಯ) ತರಗತಿಯನ್ನು ದಿನಾಂಕ 14 ಜೂನ್ 2025ರಂದು ಸಂಜೆ ಗಂಟೆ 4-30ಕ್ಕೆ ಪ್ರಾರಂಬಿಸುತ್ತಿದೆ.
ಪ್ರಾಚಾರ್ಯ ಸದಾನಂದ ಐತಾಳ ನಿರ್ದೇಶನದಲ್ಲಿ ಸದಾನಂದ ರಂಗ ಮಂಟಪ, ಗುಂಡ್ಮಿ, ಸಾಲಿಗ್ರಾಮದಲ್ಲಿ ನಡೆಯುವ ಈ ತರಗತಿಗೆ ಸೇರಲಿಚ್ಚಿಸುವವರು ಹೆಚ್ಚಿನ ವಿಚಾರಗಳಿಗೆ ಕಾರ್ಯದರ್ಶಿ 9880605610 ಮುಖಾಂತರ ಸಂಪರ್ಕಿಸಲು ಕೋರಲಾಗಿದೆ.