ದಕ್ಷಿಣ ಕೊರಿಯಾ: ಮಂಗಳೂರಿನ ಗಾನ ನೃತ್ಯ ಅಕಾಡೆಮಿಯ ನಿರ್ದೇಶಕಿ ಗುರು ವಿದ್ಯಾಶ್ರೀ ರಾಧಾಕೃಷ್ಣ ಮತ್ತು ತಂಡದವರು ದಕ್ಷಿಣ ಕೊರಿಯಾದಲ್ಲಿ ದಿನಾಂಕ 06-10-2023ರಿಂದ 12-10-2023ರವರೆಗೆ ನಡೆಯಲಿರುವ ‘ಸಾರಂಗ ಫೆಸ್ಟಿವಲ್’ನಲ್ಲಿ ನೃತ್ಯ ಪ್ರದರ್ಶನ ನೀಡುವ ಮೂಲಕ ಭಾರತವನ್ನು ಪ್ರತಿನಿಧಿಸಲಿರುವರು.
ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಐಸಿಸಿಆರ್ ದಾಖಲಿತ ಪ್ರತಿನಿಧಿಯಾಗಿರುವ ಇವರು ದಕ್ಷಿಣ ಕೊರಿಯಾದ ‘ಸಾರಂಗ’ ಉತ್ಸವದಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ನೃತ್ಯ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಯನ್ನು ನೀಡಲಿದ್ದಾರೆ. ಇವರೊಂದಿಗೆ ಸಹಕಲಾವಿದರಾಗಿ ರಶ್ಮಿ ಉಡುಪ, ಅಂಕಿತ ರೈ, ಮೇಘ ಮಲರ್ ಪ್ರಭಾಕರ್, ತ್ವಿಶಾ ಶೆಟ್ಟಿ, ದಿಶಾ ಗಿರೀಶ್, ಪೂರ್ವಿ ಕೃಷ್ಣ ಹಾಗೂ ತಾಂತ್ರಿಕ ಸಹಕಾರಕ್ಕಾಗಿ ರಾಧಾಕೃಷ್ಣ ಭಟ್ ಇವರುಗಳು ಭಾಗವಹಿಸಲಿದ್ದಾರೆ.