12 ಏಪ್ರಿಲ್ 2023, ಮಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಮಂಡಲಿ ಬೆಂಗಳೂರು ನಡೆಸುವ ವಿಶೇಷ ಸಂಗೀತ ನೃತ್ಯ 22-23ನೇ ಸಾಲಿನ ಪರೀಕ್ಷೆಗಳಲ್ಲಿ ಮಂಗಳೂರಿನ ಗಾನ-ನೃತ್ಯ ಅಕಾಡೆಮಿಯ ನಿರ್ದೇಶಕಿ ಗುರು ವಿದ್ಯಾಶ್ರೀ ರಾಧಾಕೃಷ್ಣ ಅವರ ಶಿಷ್ಯೆಯರು ಉತ್ತಮ ಸಾಧನೆ ತೋರಿದ್ದಾರೆ.
ನಿರ್ದೇಶಕಿ ಗುರು ವಿದ್ಯಾಶ್ರೀ ರಾಧಾಕೃಷ್ಣ
ಕು. ಅನೌಶ್ಕ – ಭರತನಾಟ್ಯ ಕಿರಿಯರ ವಿಭಾಗದಲ್ಲಿ (ಜೂನಿಯರ್ ಗ್ರೇಡ್) 99% ಅಂಕಗಳನ್ನು ಪಡೆದು ಮಂಗಳೂರು ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದು ತೇರ್ಗಡೆ ಹೊಂದಿದ್ದಾರೆ. ಇವರು ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ನ 9ನೇ ತರಗತಿಯ ವಿದ್ಯಾರ್ಥಿನಿ. ಒಳಾಂಗಣ ವಿನ್ಯಾಸಕಿ ಭಾವನಾ ಕರ್ಕೇರಾ ಅವರ ಪುತ್ರಿ.
ಕು. ಮಹತಿ ಪಾವನಾಸ್ಕರ್ – ಹಿರಿಯರ ವಿಭಾಗ (ಸೀನಿಯರ್ ಗ್ರೇಡ್)ದಲ್ಲಿ 91.8% ಅಂಕಗಳನ್ನು ಪಡೆದು, ತೇರ್ಗಡೆ ಹೊಂದಿ ಕೇಂದ್ರಕ್ಕೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಇವರು ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ನಲ್ಲಿ 10ನೇ ತರಗತಿಯ ಅಧ್ಯಯನ ಮುಗಿಸಿಕೊಂಡಿದ್ದಾರೆ. ಶ್ರೀಮತಿ ಮಾಲಿನಿ ಹಾಗೂ ಆಟೋ ಮೊಬೈಲ್ ತಂತ್ರಜ್ಞ ಶ್ರೀ ಹರೀಶ್ ಪಾವನಾಸ್ಕರ್ ಇವರ ಪುತ್ರಿ.
ಕು. ಪೂರ್ವೀಕೃಷ್ಣಾ – ಹಿರಿಯರ ವಿಭಾಗ (ಸೀನಿಯರ್ ಗ್ರೇಡ್)ದಲ್ಲಿ 91.5% ಅಂಕಗಳನ್ನು ಪಡೆದು ಉತ್ತೀರ್ಣರಾಗಿ ಮಂಗಳೂರು ಕೇಂದ್ರಕ್ಕೆ ತ್ರತೀಯ ಸ್ಥಾನ ಪಡೆದಿದ್ದಾರೆ. ಇವರು ಕೆನರಾ ಪ್ರೌಢ ಶಾಲೆ (ಸಿ. ಬಿ. ಎಸ್. ಸಿ.)ಯ 10ನೇ ತರಗತಿ ವಿದ್ಯಾರ್ಥಿನಿ ಹಾಗೂ ಗಾನ-ನೃತ್ಯ ಅಕಾಡೆಮಿಯ ನಿರ್ದೇಶಕಿ ವಿದ್ಯಾಶ್ರೀ ರಾಧಾಕೃಷ್ಣ ಹಾಗೂ (ಔಷಧಿ ತಂತ್ರಜ್ಞ) pharmacist ಶ್ರೀ ರಾಧಾಕೃಷ್ಣ ಭಟ್ ಇವರ ಪುತ್ರಿ.
ಕು. ಶಮಿತಾ ಕಾರಂತ್ – ವಿದ್ವತ್ ಪೂರ್ವ (Pre-Vidwath) ಹಂತದಲ್ಲಿ 92% ಅಂಕಗಳನ್ನು ಪಡೆದು ತೇರ್ಗಡೆ ಹೊಂದಿ ಮಂಗಳೂರು ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿನಿಯಾದ ಇವರು ಪ್ರೌಢ ಶಾಲಾ ಶಿಕ್ಷಕಿ ಶ್ರೀಮತಿ ವರಮಹಾಲಕ್ಷ್ಮಿ ಹಾಗೂ ನಿವೃತ್ತ ಶಿಕ್ಷಕ ಶ್ರೀ ರಮೇಶ್ ಎನ್. ಕಲ್ಲಡ್ಕ ಇವರ ಪುತ್ರಿ.
ಕು. ಚಿರಶ್ರೀ ಉದಯಶಂಕರ್ – ವಿದ್ವತ್ ಪೂರ್ವ ಹಂತದಲ್ಲಿ 91% ಅಂಕಗಳನ್ನು ಪಡೆದು ಮಂಗಳೂರು ಕೇಂದ್ರಕ್ಕೆ ತ್ರತೀಯ ಸ್ಥಾನ ಪಡೆದು ತೇರ್ಗಡೆ ಹೊಂದಿದ ಇವರು ಸಿ.ಎ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ. ಶ್ರೀಮತಿ ಮಮತಾ ಹಾಗೂ ಎಂ.ಸಿ.ಎಫ್. ಉದ್ಯೋಗಿ ಶ್ರೀ ಉದಯಶಂಕರ್ ಇವರ ಪುತ್ರಿ.
ಶ್ರೀಮತಿ ಅಕ್ಷತಾ ನಿಶಾಂತ್, M.Sc. ಪದವೀಧರೆ. ವಿವಾಹ ನಂತರ ಗುಜರಾತ್ ನ ಸೂರತ್ ನಲ್ಲಿ ನೆಲೆಸಿದ್ದಾರೆ. ‘ಸಂಗೀತರಂಗ’ ಎನ್ನುವ ಸಂಗೀತ ಹಾಗೂ ನೃತ್ಯ ತರಬೇತಿ ಕೇಂದ್ರವನ್ನು ಸ್ಥಾಪಿಸಿ, ನೂರಾರು ವಿದ್ಯಾರ್ಥಿಗಳಿಗೆ ಕಲಾಭ್ಯಾಸ ನೀಡುತ್ತಿದ್ದಾರೆ. ಪುತ್ತೂರಿನ ನಿವಾಸಿಗಳಾದ ಶ್ರೀಮತಿ ಕುಸುಮಾ ಹಾಗೂ ನಿವೃತ್ತ ಶಿಕ್ಷಕ ಶ್ರೀ ಕಾಂತಿಲ ಶಂಕರ ನಾರಾಯಣ ಭಟ್ ಇವರ ಪುತ್ರಿ. L & T ಕಂಪನಿಯ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಶ್ರೀ ನಿಶಾಂತ್ ನೀರಬಿದಿರೆ ಇವರ ಪತ್ನಿ. ಇವರು ವಿದ್ವತ್ ಅಂತಿಮ ಹಂತದಲ್ಲಿ (Final Vidwath) 85.2% ಅಂಕಗಳೊಂದಿಗೆ ಉತ್ತೀರ್ಣರಾಗಿ ಮಂಗಳೂರು ಕೇಂದ್ರಕ್ಕೆ ತ್ರತೀಯ ಸ್ಥಾನ ಗಳಿಸಿದ್ದಾರೆ.
ಅಕಾಡೆಮಿಯ ಸಹ ಶಿಕ್ಷಕಿಯರಾಗಿ ವಿದುಷಿ ಅಂಕಿತಾ ರೈ ಹಾಗೂ ವಿದುಷಿ ಮಂಜು ಶ್ರೀ ರಾಘವ್ ಸಹಕರಿಸಿದ್ದಾರೆ.