ಮಂಗಳೂರು : ಧ್ಯಾನ ಸಂಗೀತ ಅಕಾಡೆಮಿ ಕಲಾ ಟ್ರಸ್ಟ್ (ರಿ) ಉರ್ವಸ್ಟೋರ್ ಮಂಗಳೂರು ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಬೆಂಗಳೂರು ಇದರ ಸಹಯೋಗದೊಂದಿಗೆ ಆಯೋಜಿಸುವ ‘ಗಾನಯೋಗಿ ಪಂಚಾಕ್ಷರಿ ಪುಟ್ಟರಾಜ ಗವಾಯಿ ಸಂಗೀತೋತ್ಸವ’ ಕಾರ್ಯಕ್ರಮವು ದಿನಾಂಕ 16 ಫೆಬ್ರವರಿ 2025ರ ರವಿವಾರದಂದು ಸಂಜೆ 4.30ರಿಂದ ಮಂಗಳೂರಿನ ವಿ. ಟಿ. ರಸ್ತೆ ಯಲ್ಲಿರುವ ಶ್ರೀ ಕೃಷ್ಣಮ೦ದಿರ ಸಭಾ೦ಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಖ್ಯಾತ ಬಾನ್ಸುರಿ ವಾದಕ ಶ್ರೀ ಸಮೀರ್ ರಾವ್ ಮೈಸೂರು ಇವರಿಂದ ಬಾನ್ಸುರಿ ವಾದನ, ಮೈಸೂರಿನ ಶ್ರೀ ಭೀಮಾಶಂಕರ್ ಬಿದನೂರು ಮತ್ತು ಕು. ಪಂಚಮಿ ಬಿದನೂರು ಇವರಿಂದ ತಬ್ಲಾ, ಮೈಸೂರಿನ ಪಂಡಿತ್ ವೀರಭದ್ರಯ್ಯ ಹಿರೇಮಠ ಇವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ ನಡೆಯಲಿದೆ. ಗಾಯನ ಕಾರ್ಯಕ್ರಮಕ್ಕೆ ಸಹ ಕಲಾವಿದರಾಗಿ ತಬಲದಲ್ಲಿ ಶ್ರೀ ಆದರ್ಶ ಶೆಣೈ ಹಾಗೂ ಹಾರ್ಮೋನಿಯಂನಲ್ಲಿ ಶ್ರೀ ಶ್ರೀರಾಮ ಭಟ್ ಸಹಕರಿಸಲಿದ್ದಾರೆ.