ಕೊಡಗು : ಕಾಸರಗೋಡು ಕನ್ನಡ ಭವನ ಮತ್ತು ಕೇರಳ ರಾಜ್ಯ – ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸಂಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್ ಸಂಧ್ಯಾರಾಣಿ ದಂಪತಿಗೆ ಕೊಡಗು ಜಿಲ್ಲೆಯ ಕೊಡಗು ಕನ್ನಡ ಭವನ ಮತ್ತು ಕೊಡಗು ಕನ್ನಡ ಚುಟುಕು ಸಾಹಿತ್ಯ ಪರಿಷತ್ತು
‘ಗಡಿನಾಡ ಚೇತನ ವಿಶೇಷ ಗೌರವ ಪ್ರಶಸ್ತಿ 2025’ ನೀಡಿ ಗೌರವಿಸಿತು.
ಕೊಡಗು ಕನ್ನಡ ಭವನ ಅಧ್ಯಕ್ಷರಾದ ಬೊಳ್ಳಜಿರ ಬಿ. ಅಯ್ಯಪ್ಪ ಹಾಗೂ ಕೊಡಗು ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷೆ ರುಬೀನ ಎಂ.ಎ. ಜಂಟಿಯಾಗಿ ಈ ಪ್ರಶಸ್ತಿ ನೀಡಿದರು. ಕೊಡಗಿನ ಮಡಿಕೇರಿಯ ಪತ್ರಿಕಾ ಭವನದಲ್ಲಿ ದಿನಾಂಕ 23 ಮಾರ್ಚ್ 2025ರಂದು ನಡೆದ ಕೊಡಗು ಜಿಲ್ಲಾ ಘಟಕದ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು. ಕೊಡಗು ಕನ್ನಡ ಭವನ ಅಧ್ಯಕ್ಷರಾದ ಬೊಳ್ಳಜಿರ ಬಿ. ಅಯ್ಯಪ್ಪ ಅಧ್ಯಕ್ಷತೆ ವಹಿಸಿದ್ದರು. ಕೊಡಗಿನ ಹಿರಿಯ ಸಾಹಿತಿ ಭಾರಧ್ವಾಜ್ ಕೆ. ಆನಂದತೀರ್ಥ, ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರೂ, ಕೊಡಗಿನ ಜನಪ್ರಿಯ ಶಕ್ತಿ ದಿನಪತ್ರಿಕೆಯ ಬಿ.ವಿ. ಅನಂತಶಯನ, ಹಿರಿಯ ಕವಿ ನಾಗೇಶ್ ಕಾಲೂರು, ಕೇರಳ ರಾಜ್ಯ ಕನ್ನಡ ಚು.ಸಾ.ಪ. ಜಿಲ್ಲಾಧ್ಯಕ್ಷ ವಿರಾಜ್ ಅಡೂರ್, ಕನ್ನಡ ಭವನ ಕೇಂದ್ರ ಸಮಿತಿ ಉಪಾಧ್ಯಕ್ಷ ಪ್ರಾಂಶುಪಾಲ ರಾಜೇಶ್ ಚಂದ್ರ ಕೆ.ಪಿ., ಕೊಡಗು ಕನ್ನಡ ಭವನ ಪ್ರದಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು, ಉಪಾಧ್ಯಕ್ಷೆ ತೆನ್ನೀರ ಟೀನಾ ಚಂಗಪ್ಪ, ಕೊಡಗು ಕನ್ನಡ ಚು.ಸಾ.ಪ. ಕಾರ್ಯದರ್ಶಿ ಬೊಟ್ಟೋಳಂಡ ನಿವ್ಯ ದೇವಯ್ಯ ಹಾಗೂ ಕೊಡಗು ಉಭಯ ಜಿಲ್ಲಾ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.