ಕಾಸರಗೋಡು : ಜೋನ್ ಡಿ ಸೋಜಾ ಅವರ ಸಂಪಾದಕೀಯದ ಪೊಸಡಿಗುಂಪೆ ಮಾಸ ಪತ್ರಿಕೆಯ ಐದನೇ ವಾರ್ಷಿಕೋತ್ಸವದ ಪ್ರಯುಕ್ತ ಗಡಿನಾಡ ಕನ್ನಡಿಗರ ದರ್ಪಣ ಕಾರ್ಯಕ್ರಮವು ದಿನಾಂಕ 20-05-2023ರಂದು ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕದಲ್ಲಿ ಬಹಳ ಅರ್ಥಪೂರ್ಣವಾಗಿ ನಡೆಯಿತು. ಶ್ರೀ ಸದಾಶಿವ ಮುಖ್ಯೋಪಾಧ್ಯಾಯರು ಬಿ ಪಿ ಪಿ ಎ ಎಲ್ ಪಿ ಶಾಲೆ ಪೆರ್ಮುದೆ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ರಾಮಚಂದ್ರ ಭಟ್ ಪ್ರಾಂಶುಪಾಲರು ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆ ಧರ್ಮತ್ತಡ್ಕ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಡಾ. ವಾಣಿಶ್ರೀ ಕಾಸರಗೋಡು (ವೈದ್ಯರು, ಸಾಹಿತಿಗಳು, ಸಂಘಟಕರು), ಶ್ರೀ ಮಹಾಲಿಂಗ ಭಟ್ ಮುಖ್ಯೋಪಾಧ್ಯಾಯರು ಎ.ಯು.ಪಿ. ಶಾಲೆ ಧರ್ಮತ್ತಡ್ಕ, ಶ್ರೀ ಶಾರದಾ ತನಯ ಬಾಯಾರು ಭಾಗವಹಿಸಿದ್ದರು. ಎಡ್ವಕೇಟ್ ಥಾಮಸ್ ಡಿಸೋಜಾ ಸೀತಾಂಗೋಳಿ, ಶ್ರೀ ಪಿ. ರಾಮಚಂದ್ರ ಭಟ್ ಧರ್ಮತ್ತಡ್ಕ, ಶುಭಾಶಾಂಸನೆಗೈದರು.
ಈ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯಿಂದ ಸಾಹಿತ್ಯ ಗಾನ ನೃತ್ಯ ವೈಭವವು ಸುಮಾರು ಮೂರು ಘಂಟೆಗಳ ಕಾಲ ವೈವಿಧ್ಯಮಯವಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ. ವಾಣಿಶ್ರೀ ಕಾಸರಗೋಡು ಅವರು ಕಾವ್ಯ ವಾಚನದ ಜೊತೆಗೆ ಸಮಗ್ರ ಕಾರ್ಯಕ್ರಮದ ನಿರೂಪಣೆ ಮಾಡಿದರು. ಗುರುರಾಜ್ ಕಾಸರಗೋಡು, ತನ್ವಿ ಶೆಟ್ಟಿ ಪಾಣಾಜೆ, ಸನುಷಾ ಸುನಿಲ್, ಚುಕ್ಕಿ ವಿಟ್ಲ, ಅವನಿ ಎಂ.ಎಸ್. ಸುಳ್ಯ, ಪ್ರಥಮ್ಯ ಯು.ವೈ. ನೆಲ್ಯಾಡಿ, ಸನುಷಾ ಸುಧಾಕರನ್, ಐಶ್ವರ್ಯ ಆರ್. ಪೂಜಾರಿ, ಹವೀಶ್ ಆರ್. ಪೂಜಾರಿ, ಶ್ವೇತಾ ಯು.ವೈ. ನೆಲ್ಯಾಡಿ, ಅಹನಾ ಎಸ್. ರಾವ್, ಸಿ.ಕೆ. ಮಾಸ್ಟರ್ ಸುಳ್ಯ, ಆಸ್ತಾ ಶೆಟ್ಟಿ ಕಾಸರಗೋಡು, ಹೃತಿಕಾ, ಇಶಾನ್, ಆಧ್ಯಾ, ಕೌಶಿಕಾ, ಆರಾದ್ಯ, ಸುವಿನ್ಯ ಎಡನೀರು, ವರ್ಷಾ ಶೆಟ್ಟಿ ಬಂಬ್ರಾಣ, ಸಾನ್ವಿತಾ ಎ.ಎನ್., ಧನ್ವಿ ಬಿ.ಕೆ, ಜೀಕ್ಷಾ, ವಿಷ್ಣು ಸುಧಾಕರನ್, ಉಷಾ ಸುಧಾಕರನ್, ಕೃಪೇಶ್ ಎಂ.ಆರ್, ಭಾನ್ವಿ ಕುಲಾಲ್ ಮುಂತಾದ ಸಂಸ್ಥೆಯ ಸುಮಾರು 35ಕ್ಕೂ ಅಧಿಕ ಕಲಾವಿದರು ತಮ್ಮ ಪ್ರತಿಭೆಯಿಂದ ನೆರೆದಿರುವ ಪ್ರೇಕ್ಷಕರನ್ನು ರಂಜಿಸಿದರು.
ಪೊಸಡಿಗುಂಪೆ ಮಾಸಪತ್ರಿಕೆಯ ವತಿಯಿಂದ ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಗೌರವ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. ಸಂಸ್ಥೆಯ ಅಧ್ಯಕ್ಷರು ಡಾ.ವಾಣಿಶ್ರೀ ಕಾಸರಗೋಡು ಹಾಗೂ ಕಾರ್ಯದರ್ಶಿ ಗುರುರಾಜ್ ಕಾಸರಗೋಡು ಇವರನ್ನು ಜೋನ್ ಡಿಸೋಜಾ ಅವರು ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಿದರು. ವಿ.ಬಿ.ಕುಲಮರ್ವ ಖ್ಯಾತ ಕವಿಗಳು ಇವರ ಸಾರಥ್ಯದಲ್ಲಿ ಸುಮಾರು 20 ಕವಿಗಳ ಕವನ ವಾಚನದ ಕವಿಗೋಷ್ಠಿ ಜರುಗಿತು. ಈ ಶುಭ ಸಮಾರಂಭದಲ್ಲಿ ಹಲವಾರು ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಆಸಕ್ತ ಗಾಯಕರಿಂದ ಕರೋಕೆ ಗಾಯನ ನಡೆಯಿತು.