ಬೆಳ್ತಂಗಡಿ : ಕರ್ನಾಟಕ ಗಮಕ ಕಲಾ ಪರಿಷತ್ತು, ಗಮಕ ಕಲಾಪರಿಷತ್ತು ದ.ಕ.ಜಿಲ್ಲೆ, ಗಮಕ ಕಲಾ ಪರಿಷತ್ತು ತಾಲೂಕು ಘಟಕದ ವತಿಯಿಂದ ಕ.ಸಾ.ಪ. ಬೆಳ್ತಂಗಡಿ ತಾಲೂಕು ಘಟಕ, ಶ್ರೀ ಧ.ಮಂ. ಪ್ರೌಢಶಾಲೆಯ ಶಿಕ್ಷಕ-ರಕ್ಷಕ ಸಂಘ ಮತ್ತು ಹಳೇ ವಿದ್ಯಾರ್ಥಿ ಸಂಘಗಳ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು 2ನೇ ಗಮಕ ಸಮ್ಮೇಳನವು ದಿನಾಂಕ 20-01-2024 ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಸರ್ವಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹಿರಿಯ ಗಮಕಿ ಜಯರಾಮ ಕುದ್ರೆತ್ತಾಯ ಧರ್ಮಸ್ಥಳ “ಗ್ರಂಥಗಳ ಪ್ರಕಾರ 64 ವಿದ್ಯೆಯಲ್ಲಿ ಗಮಕ ಕಲೆಯು ಒಂದು ವಿದ್ಯೆ. ಇದೆಲ್ಲದರ ಅರಿವಿಗೆ ಪ್ರಮುಖವಾಗಿ ಬೇಕಾದುದು ಆಯಾಯ ಕಲಾ ಪ್ರಕಾರದ ಮೇಲಿನ ಆಸಕ್ತಿ ಮತ್ತು ಅಭಿಮಾನವಾಗಿದೆ.” ಎಂದು ಹೇಳಿದರು.
ಸಮ್ಮೇಳನ ಉದ್ಘಾಟಿಸಿದ ಎಸ್. ಡಿ. ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿಯಾದ ಡಾ. ಎಸ್. ಸತೀಶ್ಚಂದ್ರ ಮಾತನಾಡಿ “ಕಲಾಪ್ರಕಾರಗಳು ವೀಕ್ಷಕ ಶೋತ್ರುಗಳನ್ನು ತನ್ನೆಡೆಗೆ ಸೆಳೆಯುವಂತಾಗಬೇಕು.” ಎಂದರು.
ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಕೆ. ಪ್ರತಾಪಸಿಂಹ ನಾಯಕ್, ಕಸಪಾ ಜಿಲ್ಲಾಧ್ಯಕ್ಷ ಡಾ| ಎಂ. ಪಿ. ಶ್ರೀನಾಥ್, ಬೆಳಾಲು ಗ್ರಾ. ಪಂ. ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ ಶುಭಹಾರೈಸಿದರು.
ಗಮಕ ಕಲಾ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ರಾಮಕೃಷ್ಣ ಭಟ್, ಕಲಾ ಪೋಷಕ ಬಿ.ಭುಜಬಲಿ, ಬೆಳಾಲು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ತಾರಾಕೇಸರಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶೇಖರ ಗೌಡ ಕೊಲ್ಲಿಮಾರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಕನಿಕ್ಕಿಲ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಯರಾಮ ಕುದ್ರೆತ್ತಾಯ ಧರ್ಮಸ್ಥಳ ದಂಪತಿಯನ್ನು ‘ಗಮಕ ಕಲಾವಿಶಾರದ’ ಬಿರುದು ನೀಡಿ ಹಾಗೂ ಮನೋರಮಾ ತೋಳ್ಪಡಿತ್ತಾಯ ಮತ್ತು ಪ್ರವಚನಕಾರ ಪಿ.ಲಕ್ಷ್ಮಣ ಗೌಡ ಬೆಳಾಲು ಅವರನ್ನು ಗೌರವಿಸಲಾಯಿತು.
ಬೆಳಾಲು ಎಸ್.ಡಿ.ಎಂ. ಪೌಢಶಾಲೆ ಮುಖ್ಯ ಶಿಕ್ಷಕ ರಾಮಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಕಾರ್ಯದರ್ಶಿ ಮೇಧಾ ಉಜಿರೆ ಕಾರ್ಯಕ್ರಮ ನಿರ್ವಹಿಸಿ, ಸುವರ್ಣ ಕುಮಾರಿ ಗೇರುಕಟ್ಟೆ ವಂದಿಸಿದರು.


