ಮಂಗಲ್ಪಾಡಿ : ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆ ದಾವಣಗೆರೆ ಇವರು ದಸರಾ ಉತ್ಸವದ ಪ್ರಯುಕ್ತ ಆಯೋಜಿಸಿದ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮವು ದಿನಾಂಕ 10 ಅಕ್ಟೋಬರ್ 2024ರಂದು ಮಂಗಲ್ಪಾಡಿ ಏಕಾಹ ಭಜನಾ ಮಂದಿರದಲ್ಲಿ ನಡೆಯಿತು.
ಇದೇ ಮೊದಲ ಬಾರಿಗೆ ಆಗರಿ ಶ್ರೀನಿವಾಸ ಭಾಗವತ ವಿರಚಿತ ಶ್ರೀ ದೇವಿ ಮಹಾತ್ಮೆ ಯಕ್ಷಗಾನದ ‘ಮೇದಿನಿ ನಿರ್ಮಾಣ’ ಪ್ರಸಂಗದ ಹಾಡುಗಳ ವಾಚನ ವ್ಯಾಖ್ಯಾನ ಸಭಿಕರನ್ನು ರಂಜಿಸಿತು. ಶ್ರೀಮತಿ ಶ್ರದ್ಧಾ ಹಾಗೂ ಕುಮಾರಿ ಮೇಧಾ ಸಹೋದರಿಯರು ಗಮಕ ವಾಚನ ವ್ಯಾಖ್ಯಾನ ನಡೆಸಿಕೊಟ್ಟರು.
Subscribe to Updates
Get the latest creative news from FooBar about art, design and business.
Related Posts
Comments are closed.