ಪುತ್ತೂರು : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲೂಕು ಘಟಕದ ವತಿಯಿಂದ ದಿನಾಂಕ 22 ಆಗಸ್ಟ್ 2024ರಂದು ‘ಗಮಕ ವಾಚನ- ವ್ಯಾಖ್ಯಾನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶ್ರೀಯುತ ಭಾಸ್ಕರ ಬಾರ್ಯರ ಸ್ವಗೃಹ, ಪುತ್ತೂರಿನ ಶಿವಪೇಟೆಯ ‘ಅಗಸ್ತ್ಯ’ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಭಾರತ ಇದರಿಂದ ‘ಕರ್ಣ – ಕುಂತಿ ಸಂವಾದ’ ಎಂಬ ಕಥಾ ಭಾಗವನ್ನು ಆಯ್ದುಕೊಳ್ಳಲಾಯಿತು.
ಅಂಬಿಕಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀಯುತ ಸತೀಶ್ ಇರ್ದೆ ಇವರು ಗಮಕ ವಾಚನಗೈದರು. ನಿವೃತ್ತ ಅಧ್ಯಾಪಕರಾದ ಶ್ರೀಯುತ ಭಾಸ್ಕರ ಶೆಟ್ಟಿ ಸಾಲ್ಮರ ಇವರು ಗಮಕ ವ್ಯಾಖ್ಯಾನಗೈದರು. ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮವು ನೆರೆದ ಕಲಾಪ್ರಿಯರ ಮನಸ್ಸನ್ನು ಗೆದ್ದಿತು. ಗೌರವಾಧ್ಯಕ್ಷರಾದ ಭಾಸ್ಕರ ಬಾರ್ಯರು ಸರ್ವರನ್ನು ಸ್ವಾಗತಿಸಿ, ಅಧ್ಯಕ್ಷರಾದ ನಿವೃತ್ತ ಪ್ರಾಂಶುಪಾಲ ಪ್ರೊ. ವೇದವ್ಯಾಸ ರಾಮಕುಂಜ ಧನ್ಯವಾದ ಸಮರ್ಪಿಸಿದರು. ಕಿರುಕಾಣಿಕೆ ನೀಡಿ, ಶಾಲು ಹೊದಿಸಿ ಕಲಾವಿದರನ್ನು ಗೌರವಿಸಲಾಯಿತು. ಕಾರ್ಯದರ್ಶಿ ಶಂಕರಿ ಶರ್ಮ, ಸದಸ್ಯರಾದ ಪ್ರೇಮಾ ನೂರಿತ್ತಾಯ, ಮಹಾಲಿಂಗ ಭಟ್, ಜಯಂತಿ ಹೆಬ್ಬಾರ್, ಜಯಲಕ್ಷ್ಮಿ ವಿ. ಭಟ್, ಭಾರತಿ ರೈ ಅರಿಯಡ್ಕ ಹಾಗೂ ಮನೆ ಮಂದಿಯ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವು ಸಂಪನ್ನಗೊಂಡಿತು.