ಮಣಿಪಾಲ : ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್ (ರಿ.) ಸರಳೇಬೆಟ್ಟು ಮಣಿಪಾಲ ಹಾಗೂ ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮವನ್ನು ದಿನಾಂಕ 30-06-2024ರಂದು ಅಪರಾಹ್ನ 3-30 ಗಂಟೆಗೆ ಮಣಿಪಾಲದ ಸರಳೇಬೆಟ್ಟು ರತ್ನ ಸಂಜೀವ ಕಲಾಮಂಡಲದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯದ ‘ಆತ್ಮ ವಿಕ್ರಯ’ ಎಂಬ ಭಾಗವನ್ನು ಮಂಚಿಯ ಗಮಕಿ ಶ್ರೀಮತಿ ಮಂಜುಳಾ ಸುಬ್ರಹ್ಮಣ್ಯ ಭಟ್ ಇವರು ವಾಚನ ಮತ್ತು ಡಾ. ರಾಘವೇಂದ್ರ ರಾವ್ ಇವರು ವ್ಯಾಖ್ಯಾನ ನೀಡಲಿರುವರು.