ಮೈಸೂರು : ಬೆಂಗಳೂರು ಪ್ಲೇಯರ್ಸ್ ಥಿಯೇಟರ್ ಕಂಪನಿ ದಿನಾಂಕ 14 ಸೆಪ್ಟೆಂಬರ್ 2024ರಂದು ಸಂಜೆ 6-30 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ದಾಶರಥಿ ದೀಕ್ಷಿತ್ ರಚಿಸಿರುವ ಹಾಗೂ ಶ್ರೀಪಾದ ಎಸ್. ನಿರ್ದೇಶನದಲ್ಲಿ ‘ಗಾಂಪರ ಗುಂಪು’ ನಾಟಕವನ್ನು ಪ್ರದರ್ಶಿಸುತ್ತಿದೆ.
ಗಾಂಪರ ಗುಂಪು ನಾಟಕದ ಬಗ್ಗೆ :
ಹುಟ್ಟಿದಾರಭ್ಯ ಪಾಶ್ಚಾತ್ಯ ಸಂಸ್ಕೃತಿ ಬಗ್ಗೆ ಹೆಚ್ಚುತ್ತಿರುವ ಅನಗತ್ಯ ಅಭಿಮಾನ, ಅನುಕರಣೆ ಮಕ್ಕಳ ತಲೆಯಲ್ಲಿ ಹೇರುತ್ತ, ಪರದೇಶಕ್ಕೆ ಹಾರುವುದೇ ಒಂದು ಘನೂದ್ದೇಶವಾಗಬೇಕ್ವೆಂದು, ಅದನ್ನು ಜಂಬದಿಂದ ಮನೆ ಮಂದಿ ಹತ್ರ ಹೇಳುಕೊಳ್ಳುವುದೇ ದೊಡ್ಡಸ್ತಿಕೆ ಎಂದು ಬೀಗುವ, ಅರೆ ಬರೆ ಬೆಂದ ಕಾಳಿನ ಜನಗಳ ಮದ್ಯ… ನಮ್ಮ ನಾಡಿನ ಮೌಲ್ಯಾಧಾರಿತ ಸಂಸ್ಕೃತಿಯನ್ನು ಹೆಚ್ಚಿಸುವಂತೆ ಮಾಡಿ ಅವರಿಗೆ ತಿಳುವಳಿಕೆ ನೀಡಿ, ತಪ್ಪು ಕಲ್ಪನೆಗಳಿಂದ ಆಗುವ ಅಪಾಯಗಳನ್ನು ತಪ್ಪಿಸಿ ಅವರನ್ನು ನಮ್ಮ ನಾಡಿನ ಸಂಸ್ಕೃತಿಯ ಕುರಿತು ಗೌರವವನ್ನು ಹೆಚ್ಚಿಸಿಕೊಳ್ಳುವಂತೆ ಮಾಡುವ ಸಂದೇಶಗಳನ್ನು ಸಾರುವ ಹಲವಾರು ಅಂಶಗಳನ್ನು ಹೊಂದಿರುವ, ಹಾಸ್ಯ ರೂಪಕದ ನಾಟಕ ‘ಗಾಂಪಾರ ಗುಂಪು’.
‘ಗಾಂಪ’ ಪದಕ್ಕೆ ಒಂದು ವಿಶಿಷ್ಟ ರೂಪವನ್ನು ಕೊಟ್ಟಿದ್ದಾರೆ ಲೇಖಕ ದಾಶರಥಿ ದೀಕ್ಷಿತ. ಗುರು – ಶಿಷ್ಯ, ಪ್ರೀತಿ – ಕಾಮ, ಮಠ – ಮದುವೆ ಇದೆಲ್ಲದರ ಹಾಸ್ಯ ಮಿಶ್ರಣವೇ ಈ ‘ಗಾಂಪರ ಗುಂಪು’. ನೆರದಿರುವ ಪ್ರತಿಯೊಬ್ಬರಿಗೂ ಜಾಗೃತಿಯೊಂದಿಗೆ ರಸದೌತಣವನ್ನು ನೀಡುವ ಸಣ್ಣ ಪ್ರಯತ್ನ ನಮ್ಮ ನಾಟಕ ‘ಗಾಂಪರ ಗುಂಪು’.