ಮಂಗಳೂರು : ಕುಳಾಯಿ ಹೊಸಬೆಟ್ಟು ಇಲ್ಲಿರುವ ಶ್ರೀ ಶಾರದಾ ನಾಟ್ಯಾಲಯದ ವತಿಯಿಂದ ಲಲಿತ ಕಲಾ ಸಂಘ ಗೋವಿಂದ ದಾಸ ಕಾಲೇಜು ಸುರತ್ಕಲ್ ಇವರ ಸಹಯೋಗದೊಂದಿಗೆ ವಿದುಷಿ ಶೀಲಾ ದಿವಾಕರ್ ಇವರಿಗೆ ‘ಗಾನ ಶಾರದೆಗೆ ನಮನ’ ಗುರುವಿ ಗೊಂದು ನಾಟ್ಯ ನಮನ ಕಾರ್ಯಕ್ರಮವನ್ನು ದಿನಾಂಕ 26 ಜನವರಿ 2025ರಂದು ಸಂಜೆ 5-30 ಗಂಟೆಗೆ ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂರ್ತಿ ಪಿ. ಇವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮದಲ್ಲಿ ವಿದ್ವಾನ್ ಶ್ರೀ ಕೆ. ಮುರಳೀಧರ್ ಇವರಿಂದ ನುಡಿ ನಮನ ನಡೆಯಲಿದೆ. ಶ್ರೀಮತಿ ಕಲಾವತಿ ಕೆ., ಶ್ರೀಮತಿ ಸಂಧ್ಯಾ ಗಣೇಶ್, ಕುಮಾರಿ ಪೂಜಾ ಆಚಾರ್ಯ, ಕುಮಾರಿ ದೀಕ್ಷಾ ಮತ್ತು ಕುಮಾರಿ ಲಹರಿ ಇವರ ಗೀತ ನಮನಕ್ಕೆ ಹರೀಶ್ ಮುಲ್ಕಿ ರಿದಂ ಪ್ಯಾಡ್, ವಿಜಯ್ ಕುಳಾಯಿ ಕೀ ಬೋರ್ಡ್ ಮತ್ತು ದರ್ಶನ್ ಮುಲ್ಕಿ ತಬಲಾ ಸಾಥ್ ನೀಡಲಿದ್ದಾರೆ. ವಿದುಷಿ ಶ್ರೀಮತಿ ಪ್ರಣತಿ ಸತೀಶ್, ಶ್ರೀಮತಿ ಅಪೂರ್ವ ರಾವ್, ಮಾಸ್ಟರ್ ತನ್ಮಯ್ ಸುರೇಶ್, ಕುಮಾರಿಯರಾದ ಚಿನ್ಮಯೀ ಸುರೇಶ್, ಚಾರ್ವಿ ಕೆ. ಕುಲಾಲ್, ಸಾಕ್ಷಿ ಆಚಾರ್ಯ, ತ್ರಿಷಾ, ಕಶ್ವಿ ಪಿ. ಅಂಚನ್, ಅವನಿ ರಾವ್, ಚಾರ್ವಿ ಟಿ. ಕೊಟ್ಟಾರಿ, ಯಶಿಕಾ ಅಡ್ಯಾರ್, ಹಿರಣ್ಯ ಭಟ್, ಅಂಕಿತ ಬಿ.ಜಿ., ಅನನ್ಯ ವಿ. ಅಂಚನ್ ಇವರ ನೃತ್ಯ ನಮನಕ್ಕೆ ಹಾಡುಗಾರಿಕೆಯಲ್ಲಿ ಶ್ರೀಮತಿ ರಜನಿ ವರುಣ್ ಗೋರೆ, ಕೊಳಲಿನಲ್ಲಿ ವಿದ್ವಾನ್ ಕೆ. ಮುರಳೀಧರ್, ಮೃದಂಗದಲ್ಲಿ ವಿದ್ವಾನ್ ಕೆ. ಬಾಲಚಂದ್ರ ಭಾಗವತ್ ಮತ್ತು ಪಿಟೀಲಿನಲ್ಲಿ ವಿದ್ವಾನ್ ಪಿ. ಶ್ರೀಧರ್ ಆಚಾರ್ ಇವರುಗಳು ಸಹಕರಿಸಲಿದ್ದಾರೆ.