ಹೆಬ್ರಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ಘಟಕವು ಚೈತನ್ಯ ಯುವ ವೃಂದ ಮತ್ತು ಚೈತನ್ಯ ಮಹಿಳಾ ವೃಂದದ ಸಹಯೋಗದಲ್ಲಿ ಗಾಂಧಿ ಜಯಂತಿಯ ಅಂಗವಾಗಿ ಆಯೋಜಿಸಿದ ಗಾಂಧಿ ಸ್ಮೃತಿ ಕಾರ್ಯಕ್ರಮ ದಿನಾಂಕ 02-10-2023ರಂದು ಅಪರಾಹ್ನ ಹೆಬ್ರಿ ಚೈತನ್ಯ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗಾಂಧಿ ಭಾವ ಚಿತ್ರಕ್ಕೆ ಪುಷ್ಪ ನಮನ ಹಾಗೂ ಮಹಾತ್ಮಗಾಂಧಿ ಕುರಿತ ಕವನಗೋಷ್ಠಿ – ಚಿಂತನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ನಿವೃತ್ತ ಅಧ್ಯಾಪಕರು ಮತ್ತು ರಾಜ್ಯ ಅತ್ತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ದಿನೇಶ ಶೆಟ್ಟಿಗಾರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕ.ಸಾ.ಪ ಹೆಬ್ರಿ ಇದರ ಅಧ್ಯಕ್ಷರಾದ ಶ್ರೀನಿವಾಸ ಭಂಡಾರಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಚೈತನ್ಯ ಯುವ ವೃಂದದ ಗೌರವ ಅಧ್ಯಕ್ಷರಾದ ಜನಾರ್ದನ ಹೆಚ್, ಚೈತನ್ಯ ಮಹಿಳಾ ವೃಂದದ ಅಧ್ಯಕ್ಷರಾದ ವಿದ್ಯಾ ಜನಾರ್ದನ್, ಚೈತನ್ಯ ಮಹಿಳಾ ವೃಂದದ ಕಾರ್ಯದರ್ಶಿ ಸುಮನಾ ಜಿ. ನಾಯಕ್, ಕ. ಸಾ.ಪ ಗೌರವ ಕಾರ್ಯದರ್ಶಿ ಡಾ.ಪ್ರವೀಣ್ ಕುಮಾರ್ ಅವರು ಗಾಂಧಿ ಕುರಿತು ಚಿಂತನ ಪ್ರಸ್ತುತ ಪಡಿಸಿದರು. ಕ. ಸಾ.ಪ ಇದರ ಮತ್ತೊರ್ವ ಗೌರವ ಕಾರ್ಯದರ್ಶಿ ಮಂಜುನಾಥ ಕೆ.ಶಿವಪುರ ಗಾಂಧಿ ಸ್ಮೃತಿ ಕವನಗೋಷ್ಠಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ದಿನೇಶ ಶೆಟ್ಟಿಗಾರ್ “ವಿಶ್ವಕ್ಕೆ ಸತ್ಯ ಶಾಂತಿಯ ಮಹತ್ವವನ್ನು ತಿಳಿಸಿದವರು ಮಹಾತ್ಮ ಗಾಂಧಿ. ಅವರ ಜನ್ಮದಿನದಂದು ಎಲೆಯ ಮರೆಯ ಪ್ರತಿಭೆಗಳನ್ನು ಗುರುತಿಸುವುದು ಮತ್ತು ಅವರನ್ನು ಪ್ರೋತ್ಸಾಹಿಸುತ್ತಾ ಗಾಂಧಿ ತತ್ವ ಚಿಂತನೆಗಳನ್ನು ಕವನಗಳ ಮೂಲಕ ಹರಡುವ ಸಾಹಿತ್ಯ ಪರಿಷತ್ತಿನ ಕಾರ್ಯ ಅಭಿನಂದನೀಯ” ಎಂದರು.
ಕ.ಸಾ.ಪ ಪದಾಧಿಕಾರಿಗಳಾದ ಪುಷ್ಪಾವತಿ ಹೆಬ್ರಿ ಪ್ರಾರ್ಥಿಸಿ, ಸುರೇಶ ಭಂಡಾರಿ ಸ್ವಾಗತಿಸಿ, ಸಂತೋಷ ಮುದ್ರಾಡಿ ಅವರು ಕಾರ್ಯಕ್ರಮ ನಿರೂಪಿಸಿ, ಮಹೇಶ ಹೈಕಾಡಿ ಧನ್ಯವಾದವಿತ್ತರು. ಹೆಬ್ರಿ ತಾಲೂಕು ಮಟ್ಟದ ಗಾಂಧಿ ಕುರಿತ ಕವನ ರಚನಾ ಸ್ಪರ್ಧೆಯಲ್ಲಿ ವಿಜೇತರಾದ ಅರುಣಾ ಹೆಬ್ರಿ (ಪ್ರಥಮ) ದಿನೇಶ ಶೆಟ್ಟಿಗಾರ (ದ್ವಿತೀಯ) ಚೈತ್ರಾ ಕಬ್ಬಿನಾಲೆ (ತೃತೀಯ) ಇವರಿಗೆ ಪ್ರಶಸ್ತಿ ಫಲಕ ಮತ್ತು ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ನಂತರ ನಡೆದ ಕವಿಗೋಷ್ಠಿಯಲ್ಲಿ ಪೂರ್ಣೆಶ್ ಹೆಬ್ರಿ, ಪ್ರೇಮಾ ಬಸನಗೌಡ ಬಿರಾದರ, ನಮಿತಾ ಪೂಜಾರಿ, ವಿಜಯಲಕ್ಷ್ಮಿ ಆರ್ ಕಾಮತ್ ಮುನಿಯಾಲು, ಧೀರಜ್ ಕನ್ಯಾನ, ಮಂಜುಳಾ ಗಂಜಿ, ಭವ್ಯಾಕರುಣಾಕರ್ ಸೋಮೇಶ್ವರ, ಅಭಿಷೇಕ್ ಸೋಮೇಶ್ವರ, ಪ್ರಿಯಾಂಕ ಸೀತಾನದಿ, ಸವಿತಾ ರತ್ನಾಕರ ಪೂಜಾರಿ ಮಾತಿಬೆಟ್ಟು, ಡಾ.ಪ್ರವೀಣ ಕುಮಾರ್ , ಮಂಜುನಾಥ ಕೆ.ಶಿವಪುರ, ಪುಷ್ಪಾವತಿ ಶೆಟ್ಟಿ ಹೆಬ್ರಿ, ಮಹೇಶ ಹೈಕಾಡಿ, ಪ್ರೀತೇಶ ಕುಮಾರ್ ಗಾಂಧಿ ಕುರಿತ ಸ್ವರಚಿತ ಕವನಗಳನ್ನು ವಾಚಿಸಿದರು.