ಮಂಗಳೂರು : ರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿಯ ಸ್ಮರಣಾರ್ಥ ಆಯೋಜಿಸಿದ ‘ಗಾಂಧಿ ಸ್ಮೃತಿ’ ಕಾರ್ಯಕ್ರಮವು ದಿನಾಂಕ 30 ಜನವರಿ 2025ರ ಗುರುವಾರದಂದು ಬೆಳಿಗ್ಗೆ ಘಂಟೆ 11.00ಕ್ಕೆ ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ನಡೆಯಲಿದೆ.
ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ನಾನಿ ಅಲ್ವಾರಿಸ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಅಕಾಡೆಮಿಯು ಮಹಾತ್ಮ ಗಾಂಧೀಜಿಯ ಬಗ್ಗೆ ಮುದ್ರಿಸಿದ ‘ಮನ್ಯಾಸಂಸ್ರಾಚೊ ಮಹಾನ್ ಉಜ್ವಾಡ್- ಮಹಾತ್ಮ ಗಾಂಧೀಜಿ’ ಪುಸ್ತಕವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಪಿ. ಎಲ್. ಧರ್ಮ ಇವರು ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿಗಳಾದ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಜೆ. ನ., ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೊ- ಅಪರೇಟಿವ್ ಸೊಸೈಟಿ ಕಾರವಾರದ ಅಧ್ಯಕ್ಷರಾದ ಶ್ರೀ ಜೋರ್ಜ್ ಎನ್. ಫರ್ನಾಂಡಿಸ್ ಭಾಗವಹಿಸಲಿರುವರು. ಡಾ. ಅಲ್ವಿನ್ ಡೆಸಾ ಪುಸ್ತಕದ ಬಗ್ಗೆ ಮಾತಾನಾಡಲಿರುವರು.