ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆಶ್ರಯದಲ್ಲಿ ದಿವಂಗತ ಸುಬ್ರಾಯ ಶಾಸ್ತ್ರಿಗಳ ತಾಯಿ ತಂದೆಯರ ಸ್ಮರಣಾರ್ಥವಾಗಿ ಆಯೋಜಿಸಲಾದ ಬಾರ್ಕೂರು ಮೂಡುಕೇರಿ ಗಂಗಮ್ಮ ರಾಮಚಂದ್ರ ಶಾಸ್ತ್ರಿ ಸ್ಮರಣಾರ್ಥ ಚಿತ್ರಕಲಾ ಸ್ಪರ್ಧೆ ದಿನಾಂಕ 18-11-2023ರ ಶನಿವಾರದಂದು ಎಂ.ಜಿ.ಎಂ ಕಾಲೇಜಿನ ಆವರಣದಲ್ಲಿರುವ ಗೀತಾಂಜಲಿ ಸಭಾಭವನದಲ್ಲಿ ನಡೆಯಿತು.
ಸ್ಪರ್ಧೆಯಲ್ಲಿ ಪೂರ್ವಪ್ರಾಥಮಿಕ, ಪ್ರಾಥಮಿಕ, ಪ್ರೌಢ ಹಾಗೂ ಪ.ಪೂ ವಿದ್ಯಾಲಯಗಳ ವಿದ್ಯಾರ್ಥಿಳಿಗಾಗಿ ಆಯೋಜಿಸಿದ ಈ ಸ್ಪರ್ಧೆಯಲ್ಲಿ, ಡಾ. ಜನಾರ್ದನ ಹಾವಂಜೆ, ಶ್ರೀ ಪ್ರಸಾದ್ ರಾವ್ ಮತ್ತು ಶ್ರೀ ರಮೇಶ್ ಅಂಬಾಡಿ, ನಿರ್ಣಾಯಕರಾಗಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಮತ್ತು ಪ್ರಮಾಣಪತ್ರಗಳನ್ನು ವಿತರಿಸಿದರು. ಶ್ರೀಮತಿ ಸುಲೋಚನ ರಾಘವೇಂದ್ರ ವಿಜೇತರ ವಿಜೇತರ ಪಟ್ಟಿ ವಾಚಿಸಿದರು. ಡಾ. ಜನಾರ್ದನ ಹಾವಂಜೆ ಕಾರ್ಯಕ್ರಮ ನಿರ್ವಹಿಸಿ, ಆರ್.ಜಿ.ಪೈ ಹಾಗೂ ಆರ್.ಆರ್.ಸಿ.ಯ ಸಿಬ್ಬಂದಿಗಳು ಕಾರ್ಯಕ್ರಮ ಆಯೋಜಿಸಿದ್ದರು.
ಪ್ರಶಸ್ತಿ ವಿಜೇತರು
ಪೂರ್ವಪ್ರಾಥಮಿಕ: 1 ರಿಂದ 4ನೇ ತರಗತಿ,
ಪ್ರಥಮ: ನಿಹಾರ್ ಜೆ.ಎಸ್. 4ನೇ ತರಗತಿ ಜಿ.ಎಂ. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ದ್ವಿತೀಯ: ನಿಧಿಶ್, 4ನೇ ತರಗತಿ, ಜಿ.ಎಂ. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಹಾಗೂ ತೃತೀಯ: ತೇಜಸ್ವಿ ಯು. ರಾವ್ 3ನೇ ತರಗತಿ, ಮುಕುಂದಕೃಪಾ ಆಂಗ್ಲಮಾಧ್ಯಮ ಶಾಲೆ, ಉಡುಪಿ
ಪ್ರಾಥಮಿಕ ವಿಭಾಗ: 5 ರಿಂದ 7ನೇ ತರಗತಿ
ಪ್ರಥಮ: ವಿನೀಶ್ ಆಚಾರ್ಯ 6ನೇ ತರಗತಿ ಎಸ್.ಆರ್.ಪಬ್ಲಿಕ್ ಸ್ಕೂಲ್ ಹೆಬ್ರಿ, ದ್ವಿತೀಯ: ವಿಶ್ರುತ್ ಸಾಮಗ 7ನೇ ತರಗತಿ, ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ, ತೃತೀಯ: ಅವನಿ ಎ. ಶೆಟ್ಟಿಗಾರ್ 6ನೇ ತರಗತಿ, ಹೆಚ್.ಎಂ.ಎಂ. ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆ, ಕುಂದಾಪುರ ಹಾಗೂ ಸಮಾಧಾನಕರ: ಪ್ರೇರಿತ 6ನೇ ತರಗತಿ, ಮುಕುಂದಕೃಪಾ ಆಂಗ್ಲಮಾಧ್ಯಮ ಶಾಲೆ, ಉಡುಪಿ.
ಪ್ರೌಢಶಾಲೆ: 8 ರಿಂದ 10ನೇ ತರಗತಿ
ಪ್ರಥಮ: ದೃತಿ. ಎಸ್ 8ನೇ ತರಗತಿ, ಲಿಟ್ಸ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ, ದ್ವಿತೀಯ: ಪರೀಕ್ಷಿತ್ ಆಚಾರ್ 9ನೇ ತರಗತಿ, ಎಸ್.ಆರ್. ಪಬ್ಲಿಕ್ ಸ್ಕೂಲ್, ಹೆಬ್ರಿ, ತೃತೀಯ: ಅಪೇಕ್ಷಾ ಭಟ್ ಕೆ. 9ನೇ ತರಗತಿ, ಟಿ.ಎ. ಪೈ ಆಂಗ್ಲಮಾಧ್ಯಮ ಪ್ರೌಢಶಾಲೆ, ಕುಂಜಿಬೆಟ್ಟು ಹಾಗೂ ಸಮಾಧಾನಕರ: ಚಿರಾಗ್ ವಿ. ಶೆಟ್ಟಿ 8ನೇ ತರಗತಿ, ಟಿ.ಎ ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕುಂಜಿಬೆಟ್ಟು.
ಪ್ರಥಮ ಮತ್ತು ದ್ವಿತೀಯ ಪಿ. ಯು. ಸಿ
ಪ್ರಥಮ: ಪ್ರಮೋದ್ ವಾರಂಬಳ್ಳಿ ದ್ವಿತೀಯ ಪಿಯುಸಿ, ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು, ಉಡುಪಿ, ದ್ವಿತೀಯ: ನಿಧೀಶ್ ಪ್ರಥಮ ಪಿಯುಸಿ, ಕೆ.ಪಿ.ಎಸ್. ಹಿರಿಯಡ್ಕ, ತೃತೀಯ: ಸಹನಾ, ಪ್ರಥಮ ಪಿಯುಸಿ, ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು ಉಡುಪಿ ಹಾಗೂ ಸಮಾಧಾನಕರ: ಅಥರ್ವಾ, ಪ್ರಥಮ ಪಿಯುಸಿ, ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು, ಉಡುಪಿ.
ಪದವಿ ವಿದ್ಯಾರ್ಥಿಗಳಿಗೆ
ಪ್ರಥಮ: ರೋಹಿತ್ ಆಚಾರ್ಯ ದ್ವಿತೀಯ ಬಿ.ಕಾಂ, ಕರ್ನಾಟಕ ಸ್ಟೇಟ್ ಓಪನ್ ಯೂನಿವರ್ಸಿಟಿ, ದ್ವಿತೀಯ: ಆದರ್ಶ ಭಟ್ ಪ್ರಥಮ ವರ್ಷ ಇಂಜಿನಿಯರಿಂಗ್ ಕಾಲೇಜು ನಿಟ್ಟೆ ಕಾರ್ಕಳ ಹಾಗೂ ತೃತೀಯ: ಮೇಘನಾ ಶಂಕರ್ ಶೆಟ್ಟಿಗಾರ್, IV ನೇ ವರ್ಷ ಬಿ.ಎ.ಎಂ.ಎಸ್, ಮುನಿಯಾಲ್ ಆಯುರ್ವೇದ ಕಾಲೇಜು ಮಣಿಪಾಲ.