ಬೆಳಗಾವಿ : ಲಿಂ. ಶ್ರೀ ರಾಮಪ್ಪ ಬಸಪ್ಪ ಅಜೂರ ಮತ್ತು ಲಿಂ. ಶ್ರೀಮತಿ ಗಂಗಮ್ಮ ರಾಮಪ್ಪ ಅಜೂರ ಇವರ ಗಂಗಾರಾಮೋತ್ಸವ 35 ಹಾಗೂ ಅಜೂರ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 26 ಜನವರಿ 2025ರಂದು ಮುಂಜಾನೆ 10-00 ಗಂಟೆಗೆ ಬೆಳಗಾವಿಯ ಅಜೂರ ತೋಟದ ಮಹಾಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಮುಗಳಖೋಡ ಜಿಡಗಾ ಶ್ರೀ ಶ್ರೀ ಶ್ರೀ ಷ.ಶಿ. ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಇವರ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಯಬಾಗ ಹಂದಿಗುಂದ ಆಡಿ ಪೂಜ್ಯಶ್ರೀ ಶಿವಾನಂದ ಮಹಾಸ್ವಾಮಿಗಳು ವಹಿಸಲಿರುವರು. ಕಾರವಾರದ ಶ್ರೀ ಎ.ಎನ್. ರಮೇಶ ಗುಬ್ಬಿ, ಮಡಿಕೇರಿಯ ಶ್ರೀಮತಿ ಕೃಪಾ ದೇವರಾಜ್, ಬಳ್ಳಾರಿಯ ಶ್ರೀಮತಿ ಎ.ಎಂ. ಜಯಶ್ರೀ, ಹುನಗುಂದದ ಡಾ. ತಿಪ್ಪೆಸ್ವಾಮಿ ಡಿ.ಎಸ್., ಮಹಾಲಿಂಗಪೂರದ ಡಾ. ಅಶೋಕ ನರೋಡೆ, ಇಟಗಿ ಬೆಳಗಾವಿಯ ಶ್ರೀ ವಿಜಯ ಬಡಿಗೇರ, ಗದಗ ಜಂತಲಿ-ಶಿರೂರು ಶ್ರೀಮತಿ ಭಾಗ್ಯಶ್ರೀ ಗವಿಶಿದ್ದಯ್ಯಾ ಹಳ್ಳಿಕೇರಿಮಠ, ಹಿಡಕಲ್ಲ ಶ್ರೀ ಟಿ.ಎಸ್. ವಂಟಗುಡಿ ಮತ್ತು ಜಮಖಂಡಿ ಡಾ. ಮಂಜುನಾಥ ಎಸ್. ಪಾಟೀಲ ಇವರುಗಳಿಗೆ ಅಜೂರ ಪ್ರತಿಷ್ಠಾನದ ರಾಜ್ಯಮಟ್ಟದ ಪ್ರಶಸ್ತಿ ಮತ್ತು ಚನ್ನಮ್ಮನ ಕಿತ್ತೂರು ಶ್ರೀ ಮಂಜುನಾಥ ಕಳಸಣ್ಣವರ, ಬೆಳಗಾವಿಯ ಡಾ. ಹೇಮಾವತಿ ಸೊನೊಳ್ಳಿ (ಅಲ್ಲಣ್ಣವರ), ಬೆಳವಡಿ ಶ್ರೀ ಸಂತೋಷ ಶಂ. ಯಕ್ಕುಂಡಿ, ಯಕ್ಸಂಬಾ ಶ್ರೀಮತಿ ಶೃತಿ ಮಹಾದೇವ ಹೆಗ್ಗೆ, ಹಿಡಕಲ್ಲ ಶ್ರೀ ಶ್ರೀಕಾಂತ ದತ್ತು ರಾಯಮಾನೆ ಮತ್ತು ಹಾರೂಗೇರಿ ಶ್ರೀ ವಿಠ್ಠಲ ಜೋಡಟ್ಟಿ ಇವರುಗಳಿಗೆ ಬೆಳಗಾವಿ ಜಿಲ್ಲಾ ಪ್ರಶಸ್ತಿ ಪ್ರದಾನ ಮಾಡಲಾಗುವುದು.