ಪುತ್ತೂರು : ನಮ್ಮೆಲ್ಲರ ಆರಾಧ್ಯ ಶಕ್ತಿಯಾದ ಶ್ರೀ ದೇಯಿ ಬೈದೆತಿ ಅಮ್ಮನವರ ಬೆಳಕಿನ ಗೆಜ್ಜೆ ಸೇವೆಯ ತೇರು, ಬಲಿಷ್ಠ ಶ್ರೀ ಗೆಜ್ಜೆಗಿರಿ ಮೇಳ ಇದೇ ಬರುವ ದಿನಾಂಕ 16-11-2023ನೇ ಗುರುವಾರದಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಡೆಯುವ ಶ್ರೀ ದೇವರ ಪ್ರಥಮ ಸೇವೆಯಾಟದೊಂದಿಗೆ ಎರಡನೇ ವರ್ಷದ ತಿರುಗಾಟಕ್ಕೆ ಹೊರಡಲಿದೆ.
ಅನೇಕ ವಿಶೇಷತೆಗಳೊಂದಿಗೆ ಎರಡನೇ ವರ್ಷದ ತಿರುಗಾಟಕ್ಕೆ ಸಕಲ ಸಿದ್ದತೆ ನಡೆಸುತ್ತಿದ್ದು, ತೆಂಕುತಿಟ್ಟಿನ ಬಲಿಷ್ಠ ಯಕ್ಷಗಾನ ಮೇಳಗಳಲ್ಲಿ ಒಂದಾಗಿ ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಪ್ರಸಂಗಗಳ ಸಮರ್ಥ ಪ್ರದರ್ಶನ ನೀಡುವರೇ ಗೆಜ್ಜೆಗಿರಿ ಮೇಳ ಸಾಮರ್ಥ್ಯಯುತ ಪ್ರತಿಭಾವಂತ ವೃತ್ತಿಪರ ಯುವ ಕಲಾವಿದರ ದಂಡನ್ನೆ ಹೊಂದಿದೆ. ಮೇಳದ ಕಲಾವಿದರ ಪಾತ್ರಾಭಿನಯ ಸಾಮರ್ಥ್ಯಕ್ಕನುಸಾರ ಎಲ್ಲಾ ಮೂರು ವಿಭಾಗದಲ್ಲೂ ಪ್ರಸಂಗ ರಚಿಸುತ್ತಿದ್ದು, ಅದರಲ್ಲೂ ಈ ಮೇಳ ಪ್ರಸ್ತುತ ಪ್ರಮುಖವಾಗಿ ‘ಗರೋಡಿದ ಸತ್ಯೊಲು’ (ಸಮಗ್ರ ಕೋಟಿ-ಚೆನ್ನಯ) ಎಂಬ ಐತಿಹಾಸಿಕ ಪ್ರಸಂಗವೊಂದು ರಚನೆ ಮಾಡುತ್ತಿದೆ. ಇದರಲ್ಲಿ ತುಳುನಾಡಿನ ಮೂಲಜನಾಂಗದ ಕುಲದೇವರಾದ ಶ್ರೀ ನಾಗಬ್ರಹ್ಮರ ಮೂಲಕಥೆ ಆಧಾರ ಸಹಿತ ಶ್ರೀ ಕ್ಷೇತ್ರ ಕೆಮ್ಮಲೆಯಲ್ಲಿ ನೆಲೆಯಾಗುವ ಕಥೆಯೊಂದಿಗೆ ಪ್ರಾರಂಭಗೊಂಡು, ಎಲ್ಲಾ ಗರಡಿಗಳಲ್ಲಿ ನೆಲೆಯಾಗಿರುವ ಕೋಟಿ-ಚೆನ್ನಯ, ಕುಜುಂಬ ಕಾಜವ, ಮಾಯಂದಾಲ್ ಮುಂತಾದ ಮೂಲಶಕ್ತಿಗಳ ಮೂಲ ಇತಿಹಾಸವನ್ನು ವಿವರಿಸುತ್ತಾ, ತುಳುನಾಡಿನ ಕೆಲವು ಪ್ರಮುಖ ಗರಡಿಗಳು ಹೇಗೆ ನಿರ್ಮಾಣವಾದವು, ಎಲ್ಲಿ ಬ್ರಹ್ಮ ಬೈದ್ಯೆರ್ಕಳ ದರ್ಶನ ಪ್ರಾರಂಭವಾಯಿತು, ಎಲ್ಲಿ ಮತ್ತು ಯಾಕೆ ದೇಯಿ ಬೈದೆತಿಯನ್ನು ನಂಬಿದರು, ಪ್ರಥಮ ದೇಯಿ ಬೈದೆತಿಯ ದರುಶನ ಎಲ್ಲಿ ನಡೆಯಿತು. ಮಾತ್ರವಲ್ಲದೇ ಕೋಟಿ ಚೆನ್ನಯರು ಜೀವಿತಾವಧಿಯಲ್ಲಿ ನಡೆದಾಡಿದ ಕ್ಷೇತ್ರಗಳು ಗರಡಿಗಳಾದ ಸುಂದರ ಐತಿಹಾಸಿಕ ಕಥೆಯನ್ನೊಳಗೊಂಡಿರುತ್ತದೆ. ಅಮ್ಮನವರ ಬೆಳಕಿನ ಗೆಜ್ಜೆ ಸೇವೆಯ ಈ ಯಕ್ಷತೇರನ್ನು ನಿಮ್ಮೂರಿಗೂ ಬರಿಸಿ ಸೇವೆ ನೀಡಿ ಕೃತಾರ್ಥರಾಗುವುದರೊಂದಿಗೆ ಬೆಂಬಲಿಸಬೇಕಾಗಿ ಗೆಜ್ಜೆಗಿರಿ ಮೇಳ ವಿನಂತಿಸಿಕೊಂಡಿದೆ.
ವಿ.ಸೂ.:- ನಿಮ್ಮೂರಿನಲ್ಲಿಯೂ ಇಂತಹ ಐತಿಹ್ಯವುಳ್ಳ ಗರಡಿಗಳಿದ್ದರೆ, ಅಂತಹ ಗರಡಿಗಳ ಇತಿಹಾಸವನ್ನು ನಿಮ್ಮ ಗರಡಿಯ ಆಡಳಿತ ಸಮಿತಿಯವರ ಮಾರ್ಗದರ್ಶನದಂತೆ ನಮಗೆ ಸೂಚಿಸಬಹುದು. ಯತಾನುಸಾಧ್ಯ ನಮ್ಮ ಪ್ರಸಂಗದಲ್ಲಿ ಸೇರಿಸಿಕೊಳ್ಳುವ ಪ್ರಯತ್ನಪಡುವವರಿದ್ದೇವೆ. ಮಾಹಿತಿ ನೀಡುವರೆ ಸಂಪರ್ಕಿಸಿರಿ – ಶ್ರೀ ನಿತಿನ್ ಕುಮಾರ್ ತೆಂಕಕಾರಂದೂರು 9108850097