ಬೆಂಗಳೂರು : ಕರ್ನಾಟಕ ಸುಗಮ ಸಂಗೀತ ಪರಿಷತ್ತು (ರಿ.) ಬೆಂಗಳೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ವತಿಯಿಂದ ‘ಗೀತೋತ್ಸವ -2025’ 19ನೇ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನವನ್ನು ದಿನಾಂಕ 02 ಮತ್ತು 03 ಆಗಸ್ಟ್ 2025ರಂದು ಮೈಸೂರಿನ ಕಲಾ ಮಂದಿರದಲ್ಲಿ ಆಯೋಜಿಸಲಾಗಿದೆ.
ದಿನಾಂಕ 02 ಆಗಸ್ಟ್ 2025ರಂದು ಬೆಳಗ್ಗೆ 9-30 ಗಂಟೆಗೆ ಕಾವ್ಯ ದಿಬ್ಬಣದಲ್ಲಿ ಸಮ್ಮೇಳನಾಧ್ಯಕ್ಷರು ಹಾಗೂ ಸಾಹಿತಿ ಕಲಾವಿದರ ಮೆರವಣಿಗೆ ನಡೆಯಲಿದೆ. 10-00 ಗಂಟೆಗೆ ಮಾನ್ಯ ಸಚಿವರಾದ ಡಾ. ಹೆಚ್.ಪಿ. ಮಹದೇವಪ್ಪ ಇವರಿಂದ ಈ ಸಮ್ಮೇಳನ ಉದ್ಘಾಟನೆಗೊಳ್ಳಲಿದ್ದು, ವೈ.ಕೆ. ಮುದ್ದುಕೃಷ್ಣ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀಯುತ ನಗರ ಶ್ರೀನಿವಾಸ ಉಡುಪ ಇವರು ಸಮ್ಮೇಳನಾಧ್ಯಕ್ಷರ ಅಧಿಕಾರ ಸ್ವೀಕಾರ ಮಾಡಲಿದ್ದು, ಎನ್.ಎಸ್. ಪ್ರಸಾದ್ ಇವರು ಧ್ವಜ ಹಸ್ತಾಂತರ ಮಾಡಲಿದ್ದಾರೆ. ಹಿರಿಯ ಕವಿ ಗೀತ ಸಂಗಮ ಕೃತಿ ಬಿಡುಗಡೆ ಮಾಡಲಿದ್ದು, ಇದೇ ಸಂದರ್ಭದಲ್ಲಿ ‘ಕಾವ್ಯಶ್ರೀ ಪ್ರಶಸ್ತಿ’ ಮತ್ತು ‘ಭಾವಶ್ರೀ ಪ್ರಶಸ್ತಿ’ಗಳನ್ನು ಪ್ರದಾನ ಮಾಡಲಾಗುವುದು. 12-00 ಗಂಟೆಯಿಂದ ‘ಭಾವ ಕುಸುಮ’ ಮತ್ತು ‘ಭಾವಾಂಜಲಿ’ ಸಮೂಹ ಗಾಯನ, ತತ್ವಪದಗಳು, ಕವಿಯ ನೋಡಿ – ಕವಿತೆ ಹೇಳಿ, ಕವಿ ಚಿತ್ರಗೀತೆಗಳು, ಗೀತ ಸಂಗೀತ ಪ್ರಸ್ತುತಗೊಳ್ಳಲಿದೆ. ದಿನಾಂಕ 03 ಆಗಸ್ಟ್ 2025ರಂದು ಬೆಳಗ್ಗೆ 10-00 ಗಂಟೆಗೆ ನವ ಅನ್ವೇಷಣೆ, ನವ್ಯ – ನವೋದಯ ಕವಿಗೀತೆಗಳು, ರಾಗಾಧಾರಿತ ಗೀತೆಗಳು, ಗೀತ ನೃತ್ಯ, ಕವಿಯ ನೋಡಿ – ಕವಿತೆ ಹೇಳಿ, ಸಂಸ್ಮರಣೆ, ಸಮಾರೋಪ ಸಮಾರಂಭ, ಒಂದು ಸಾಲಿನ ಕವಿತೆ ಮತ್ತು ಗೀತ ಸಂಗೀತ ಕಾರ್ಯಕ್ರಮ ನಡೆಯಲಿದೆ.