ಮಂಗಳೂರು : ಮಂಗಳೂರು ಬೆಸೆಂಟ್ ನ್ಯಾಷನಲ್ ಪದವಿ ಪೂರ್ವ ಕಾಲೇಜು ನಲ್ಲಿ ಆಯೋಸಿದ್ದ ಗಿಳಿವಿಂಡು ಯಾನ…. ಮರಳಿ ಮನೆಗೆ…. ಬಾರಿಸು ಕನ್ನಡ ಡಿಂಡಿಮವ…. ಅರಿವಿನ ವಿಸ್ತರಣೆ ಸಮಾರಂಭವು ದಿನಾಂಕ 15 ಸೆಪ್ಟೆಂಬರ್ 2025ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲು ಆಗಮಿಸಿದ ಮಂಗಳೂರು ವಿಶ್ವವಿದ್ಯಾಲಯದ ಎಸ್. ವಿ. ಪಿ. ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಅಧ್ಯಕ್ಷರು ಮತ್ತು ಗಿಳಿವಿಂಡು ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗಳ ಒಕ್ಕೂಟ ) ಅಧ್ಯಕ್ಷರಾದ ಪ್ರೊ. ಶಿವರಾಮ ಶೆಟ್ಟಿ ಬಿ. ಮಾತನಾಡಿ “ಬಾಳಿನಲ್ಲಿ ಭರವಸೆಯೊಂದಿಗೆ ನಿರ್ದಿಷ್ಟ ಗುರಿಯನ್ನು ಇರಿಸಿಕೊಂಡು ಮುನ್ನಡೆಯಬೇಕು. ಸಂಪಾದನೆಗಿಂತ ಸಾಧನೆ ಮುಖ್ಯವಾಗಿದ್ದು, ಸಾಹಿತ್ಯ ನಮ್ಮ ಜೀವನಕ್ಕೆ ಅಗತ್ಯವಾದ ಮಾನವೀಯ ಮೌಲ್ಯಗಳನ್ನು ತಿಳಿಸಿ ಕೊಡುತ್ತವೆ. ಅಸಮಾನತೆಯ ಸಮಾಜದಿಂದ ಸಮಾನತೆಯ ಸಮಾಜದತ್ತ ಸಾಗ ಬೇಕೆಂಬ ಎಚ್ಚರವನ್ನು ಸಾಹಿತ್ಯಲೋಕ ನೀಡುತ್ತಾ ಬಂದಿದೆ” ಎಂದರು.
ಗಿಳಿವಿಂಡು ಸದಸ್ಯ ಮತ್ತು ಗೋವಿಂದದಾಸ ಕಾಲೇಜು ಸುರತ್ಕಲ್ ಇಲ್ಲಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಕೃಷ್ಣ ಮೂರ್ತಿ ಮಾತನಾಡಿ “ಗಿಳಿವಿಂಡು ಯಾನ ಹಿರಿಯ ತಲೆಮಾರಿನ ಜ್ಞಾನ ಪರಂಪರೆಯನ್ನು ಹೊಸ ತಲೆಮಾರಿಗೆ ವಿಸ್ತರಿಸುವ ಕಾಯಕವಾಗಿದ್ದು ಕನ್ನಡ ಭಾಷೆ, ಸಾಹಿತ್ಯ ಮತ್ತು ಮಾನವಿಕ ವಿಭಾಗಗಳ ಸಾಧ್ಯತೆ ಹಾಗೂ ಅವಕಾಶಗಳನ್ನು ಇದು ತೆರೆದಿಡುತ್ತದೆ” ಎಂದರು.
ಮಂಗಳೂರು ವಿಶ್ವ ವಿದ್ಯಾಲಯ ದ ಎಸ್ ವಿ ಪಿ ಕನ್ನಡ ಅಧ್ಯಯ ನ ಸಂಸ್ಥೆ ಯ ಅಧ್ಯಕ್ಷರು ಮತ್ತು ಗಿಳಿ ವಿಂಡಿನ ಕಾರ್ಯ ದರ್ಶಿ ಪ್ರೊ. ನಾಗಪ್ಪ ಗೌಡ ಮಾತನಾಡಿ ಕನ್ನಡ ಭಾಷೆ ಹಿರಿಯ ಸಾಹಿತ್ಯ ಪರಂಪರೆ ಯನ್ನು ಹೊಂದಿದ್ದು, ಮಾನವೀಯತೆ, ಸೌಹಾರ್ದ ಮತ್ತು ಸಮಾನತೆಯ ಸಮಾಜ ನಿರ್ಮಾಣ ದ ಅವಶ್ಯಕತೆ ಗಳನ್ನು ಪ್ರತಿ ಪಾದಿಸು ತ್ತ ಬಂದಿದೆ. ಕನ್ನಡ ದ ವಿದ್ಯಾರ್ಥಿಗಳು ವಿವಿಧ ಕ್ಷೇ ತ್ರ ಗಳ ಲ್ಲಿ ಉನ್ನತ ಸ್ಥಾ ನ ಗಳನ್ನು ಪಡೆದಿದ್ದಾರೆ ಎಂದರು.ಕಾಲೇಜಿನ ಪ್ರಾಂಶುಪಾಲರಾದ ಡಾ. ನಾಯಕ್ ರೂಪ ಸಿಂಗ್ ಸ್ವಾಗತಿಸಿ “ಶ್ರೇಷ್ಠ ಮೌಲ್ಯಗಳ ಅರಿವಿಗೆ ಭಾಷಾ ಅಧ್ಯಯನದ ಅವಶ್ಯಕತೆ ಪ್ರಸ್ತುತ ಸಂದರ್ಭದಲ್ಲಿ ಅತಿ ಮುಖ್ಯವಾಗಿದ್ದು ಗಿಳಿ ವಿಂಡು ಯಾನ ಉತ್ತಮ ಯೋಜನೆಯಾಗಿದೆ” ಎಂದರು.
ವಿದ್ಯಾರ್ಥಿನಿಯರಾದ ಅನನ್ಯ, ರಶ್ಮಿತಾ ಮತ್ತು ಅಮೃತ ಪ್ರಾರ್ಥನಾ ಗೀತೆ ಹಾಡಿ, ಪ್ರಾಧ್ಯಾಪಕಿ ಮತ್ತು ಗಿಳಿ ವಿಂಡು ಸದಸ್ಯೆ ಸುಶೀಲ ಕಾರ್ಯಕ್ರಮ ನಿರೂಪಿಸಿ, ಕನ್ನಡ ಪ್ರಾಧ್ಯಾಪಕ ಮತ್ತು ಗಿಳಿವಿಂಡಿ ಇದರ ಸದಸ್ಯ ರಘು ಇಡ್ಕಿದು ವಂದಿಸಿದರು.