ಕೋಟ : ಪ್ರತಿಷ್ಠಿತ ಯಕ್ಷ ಕಲಾಸಂಸ್ಥೆಯಾದ ಕೋಟ ಯಕ್ಷ ಸೌರಭ ಶ್ರೀ ಹಿರೇ ಮಹಾಲಿಂಗೇಶ್ವರ ಕಲಾರಂಗ ಇದರ ನೂತನ ಅಧ್ಯಕ್ಷರಾಗಿ ಗಿರೀಶ್ ಗಾಣಿಗ ಬೆಟ್ಲಕ್ಕಿ ಇವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶ್ರೀನಾಥ ಉರಾಳ, ಕಾರ್ಯದರ್ಶಿಯಾಗಿ ವಿಘ್ನೇಶ್ ದೇವಾಡಿಗ, ಜೊತೆ ಕಾರ್ಯದರ್ಶಿಯಾಗಿ ಅನೂಪ ಉರಾಳ, ಕಾರ್ಯಾಧ್ಯಕ್ಷರಾಗಿ ಹರೀಶ್ ದೇವಾಡಿಗ, ಕೋಶಾಧಿಕಾರಿಯಾಗಿ ಕಾರ್ತಿಕ ಆಚಾರ್ಯ ಇವರುಗಳು ಆಯ್ಕೆಯಾದರು.
ಈ ನೂತನ ಆಡಳಿತ ಮಂಡಳಿಯ ಸಮಿತಿ ರಚನಾ ಪ್ರಕ್ರಿಯೆಯಲ್ಲಿ ಸ್ಥಾಪಕಾಧ್ಯಕ್ಷ ಹರೀಶ್ ಭಂಡಾರಿ, ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ಕರ್ಕೇರ ಕೋಡಿ ಹಾಗೂ ಹಿರಿ, ಕಿರಿಯ ಸದಸ್ಯರು ಉಪಸ್ಥಿತರಿದ್ದರು.