ಮಂಗಳೂರು : ಕರಾವಳಿ ಸಂಗೀತ ಕಲಾವಿದರ ಒಕ್ಕೂಟ (ರಿ.) ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ವತಿಯಿಂದ ಪೊಂಪೈ ಕಾಲೇಜು ಐಕಳ, ರಾಗ್‌ರಂಗ್ ಇವೆಂಟ್ಸ್ (ರಿ.) ಮೂಲ್ಕಿ, ಕಿನ್ನಿಗೋಳಿಯ ಲಯನ್ಸ್ ಕ್ಲಬ್ ಮತ್ತು ರೋಟರಿ ಕ್ಲಬ್ ಇವುಗಳ ಸಂಯುಕ್ತ ಸಹಯೋಗದಲ್ಲಿ ‘ಜ್ಞಾನಯಾನ’ ಗೀತ ಗಾಯನ ತರಬೇತಿ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಾಗಾರವನ್ನು ದಿನಾಂಕ 11 ಮಾರ್ಚ್ 2025ರಂದು ಬೆಳಿಗ್ಗೆ 9-30 ಗಂಟೆಗೆ ಪೊಂಪೈ ಕಾಲೇಜಿನ ಪ್ರಾವಿಡೆನ್ಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಪೊಂಪೈ ಕಾಲೇಜು ಸಂಚಾಲಕ ವಂದನೀಯ ಒಸ್ವಾಲ್ಡ್ ಮೊಂತೇರೊ ಉದ್ಘಾಟಿಸಲಿದ್ದು, ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಕೇಶವ ಕನಿಲ ಇವರು ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವ ಪ್ರಸಾದ್ ಪುನರೂರು, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಸುಧಾಕರ್ ಶೆಟ್ಟಿ, ರೋಟರಿ ಕ್ಲಬ್ ಅಧ್ಯಕ್ಷ ಧನಂಜಯ ಶೆಟ್ಟಿಗಾರ್, ಕಾಲೇಜು ಪ್ರಾಂಶುಪಾಲ ಡಾ. ಪುರುಷೋತ್ತಮ್ ಕೆ.ವಿ. ಭಾಗವಹಿಸಲಿದ್ದಾರೆ. ಒಕ್ಕೂಟದ ಮಾಜಿ ಅಧ್ಯಕ್ಷ ಗಾಯಕ ರವೀಂದ್ರ ಪ್ರಭು ನೇತೃತ್ವದಲ್ಲಿ ಜರಗುವ ಈ ಕಾರ್ಯಾಗಾರದಲ್ಲಿ ಅವರೊಂದಿಗೆ ತೋನ್ಸೆ ಪುಷ್ಕಳ ಕುಮಾರ್, ಸಂಗೀತ ಬಾಲಚಂದ್ರ ಸಂಪನ್ಮೂಲ ಕಲಾವಿದರಾಗಿ ಭಾಗವಹಿಸಲಿದ್ದಾರೆ.