9 ಮಾರ್ಚ್ 2023, ಮಂಗಳೂರು: ಸಂತ ಆಲೋಶಿಯಶ್ ಕಾಲೇಜು (ಸ್ವಾಯತ್ತ) ಮಂಗಳೂರು, ಯುಜಿಸಿ ಸ್ಟ್ರೈಡ್ ಯೋಜನೆ, ಸಂತ ಆಲೋಶಿಯಶ್ ರಂಗ ಅಧ್ಯಯನ ಕೇಂದ್ರ, ಸಂತ ಆಲೋಶಿಯಶ್ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಸಹಯೋಗದಲ್ಲಿ ಪ್ರೊ. ಅಮೃತ ಸೋಮೇಶ್ವರ ವಿರಚಿತ, ವಿದ್ದು ಉಚ್ಚಿಲ್ ನಿರ್ದೇಶನದಲ್ಲಿ, ಜರ್ನಿ ಥೇಟರ್ ಗ್ರೂಪ್ (ರಿ.) ಮಂಗಳೂರು ಅಭಿನಯಿಸುವ “ಗೋಂದೊಳು” ತುಳು ಭಾಷಾ ಸೊಗಡಿನ ಜಾನಪದ ನಾಟಕ ದಿನಾಂಕ :10-03-2023ರಂದು ಸಂತ ಆಲೋಶಿಯಶ್ ಕಾಲೇಜ್ ನ ಎಲ್.ಸಿ.ಆರ್.ಐ. ಸಭಾಭವನದಲ್ಲಿ ಮಧ್ಯಾಹ್ನ ಗಂಟೆ 3-15 (ವಿದ್ಯಾರ್ಥಿಗಳಿಗೆ) ಸಂಜೆ ಗಂಟೆ 6-15 (ಸಾರ್ವಜನಿಕರಿಗೆ) ಹೀಗೆ ಎರಡು ಪ್ರದರ್ಶನಗಳು ನಡೆಯಲಿವೆ.
ನಾಟಕದ ಕುರಿತು : ತುಳುನಾಡಿನ ಸತ್ಯ-ಸತ್ವಗಳೆರಡನ್ನೂ ಚಿತ್ರಿಸುವ ಗೋಂದೊಳು ನಾಟಕ ತುಳುವಿನ ಜಾನಪದ ಕಥೆಯನ್ನು ವಸ್ತುವನ್ನಾಗಿಸಿಕೊಂಡಿದೆ. ದೇಬೆ ಎನ್ನುವ ಸಾಮಾನ್ಯ ಹೆಣ್ಣೊಬ್ಬಳು ಊರಿನ ಪ್ರಮುಖ ಗುರಿಕಾರನಿಂದ ಅನ್ಯಾಯಕ್ಕೆ ಒಳಗಾಗಿ ಪ್ರತಿಭಟಿಸುವ, ಕಡೆಗೆ ಮಾಸ್ತಿಯಮ್ಮನಾಗಿ ದೈವತ್ವಕ್ಕೇರುವ ಕಥೆಯೇ ಗೋಂದೊಳು ನಾಟಕ. ತುಳುಮಣ್ಣಿನ ಸೊಬಗನ್ನು ಭಾಷೆಯ ಸೌಂದರ್ಯವನ್ನು ದೈವ ದೇವರ ಇತಿಹಾಸದೊಳಗೆ ಮಣ್ಣಾದ ಅನ್ಯಾಯದ ಕಥೆಯನ್ನು ತೆರೆದಿಡುವ ಗೋಂದೊಳು ಇಂದಿನ ಕಾಲದಲ್ಲೂ ಅತೀ ಪ್ರಸ್ತುತ. ತುಳುವರ ಸಂಪ್ರದಾಯ, ಆಚರಣೆ, ತುಳು ಭಾಷೆಯ ವೈಶಿಷ್ಟ, ಗಾದೆ, ನುಡಿಗಟ್ಟು, ಕಾಂತು ಮತ್ತು ದೇಬೆಯ ಪ್ರೇಮ ಎಲ್ಲವನ್ನೂ ಕಟ್ಟಿಕೊಡುತ್ತದೆ ಗೋಂದೊಳು. ಭೂತ, ದೈವ ಎನ್ನುವ ಬಣ್ಣದ ಸಂಭ್ರಮದ ಇಂದಿನ ಆಚರಣೆಗಳೊಳಗೂ ಅಂದಿನ ನೋವಿನ ಕಥೆಗಳಿರುತ್ತವೆ. ಪೂಜೆ ಪುನಸ್ಕರವೆಷ್ಟೇಗೈದರೂ ಅನ್ಯಾಕೊಳಗಾದ ಜೀವಕ್ಕೆ ನ್ಯಾಯ ಓದಗಿಸಲಾದೀತೆ ? ಎಂಬ ಪ್ರಶ್ನೆ ಚಿಂತನೆಗೆ ಹಚ್ಚುತ್ತದೆ.
ಸಂಗೀತ : ಮೇಘನಾ ಕುಂದಾಪುರ, ಅರ್ಜುನ್ ಆಚಾರ್ಯ, ಸಾಂಗತ್ಯ : ಅರ್ಲ್ ಬ್ರ್ಯಾನ್, ಶಶಾಂಕ್ ಐತಾಳ್ , ಚಿನ್ಮಯ ವಿ. ಭಟ್, ಪ್ರಸಾದನ/ರಂಗ ಪರಿಕರ : ಶಿವರಾಮ ಕಲ್ಮಡ್ಕ, ರಂಗ ಸಜ್ಜಿಕೆ : ಬೃಚೇಶ್ ಉಚ್ಚಿಲ್, ಕಿರಣ್ ಕುಮಾರ್, ಬೆಳಕಿನ ವಿನ್ಯಾಸ : ಪ್ರವೀಣ್ ಕೊಡವೂರು, ನಿಖಿಲ್ ಕುಮಾರ್.
ಜರ್ನಿ ಥೇಟರ್ ಗ್ರೂಪ್ (ರಿ.) ಮಂಗಳೂರು
ರಂಗಭೂಮಿಯ ಪ್ರೀತಿ ಹಾಗೂ ಸಾಮಾಜಿಕ ಕಳಕಳಿಯ ಚಿಂತನೆಯೊಂದಿಗೆ ಸಮಾನ ಮನಸ್ಕ ಸ್ನೇಹಿತರು ಸೇರಿ ಕಟ್ಟಿಕೊಂಡಿರುವ ಸಂಸ್ಥೆ ಜರ್ನಿ ಥೇಟರ್ ಗ್ರೂಪ್ (ರಿ.) ಮಂಗಳೂರು. ಹಲವಾರು ವರುಷಗಳಿಂದ ನಿರಂತರವಾಗಿ ರಂಗ ಭೂಮಿಯ ವಿವಿಧ ಆಯಾಮಗಳಲ್ಲಿ ತಂಡ ಕಾರ್ಯನಿರ್ವಹಿಸುತ್ತಿದೆ. ರಂಗಪ್ರಾತ್ಯಕ್ಷಿಕೆಗಳು, ನಾಟಕ ತಯಾರಿ, ರಂಗ ಶಿಬಿರ, ನಾಟಕೋತ್ಸವದ ಆಯೋಜನೆ ಮುಂತಾದ ರಂಗಭೂಮಿ ಸಂಬಂಧಿತ ಕಾರ್ಯದಲ್ಲಿ ನಮ್ಮ ತಂಡ ಹೆಜ್ಜೆಯಿಡುತ್ತಾ ಸಾಗಿದೆ. ಇವಾಳಜ್ಜಿಯೂ ಆದಮಜ್ಜನೂ, ಊರ್ಮಿಳಾ, ಕಾವ್ಯ-ಕಥಾರಂಗ, ಮ್ಯಾಕ್ಬೆತ್ ಮುಂತಾದ ನಾಟಕವನ್ನು ರಂಗಕ್ಕಿಳಿಸಿ ಯಶಸ್ವಿಯಾಗಿ ಪ್ರದರ್ಶಿಸಿದೆ. ಹಾಗೆಯೇ ತಂಡದ ಸದಸ್ಯರು ಹಲವಾರು ಕಾಲೇಜುಗಳಿಗೆ, ಸಂಘ ಸಂಸ್ಥೆಗಳಿಗೆ ನಾಟಕವನ್ನು ನಿರ್ದೇಶಿಸುವ ಮೂಲಕ ತಮ್ಮನ್ನು ತಾವು ರಂಗಭೂಮಿಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬೇರೆ ಬೇರೆ ತಂಡಗಳನ್ನು ರಂಗಭೂಮಿಯತ್ತ ಸೆಳೆಯುವಲ್ಲಿ ಸಹಕಾರಿಯಾಗಿದ್ದಾರೆ. ಕಾಲೇಜು ರಂಗಭೂಮಿ ಮತ್ತು ಮಕ್ಕಳ ರಂಗಭೂಮಿ ಬೆಳವಣಿಗೆಯಾದರೆ ರಂಗಭೂಮಿ ಚಲನಾಶೀಲವಾಗಿರಲು ಸಾಧ್ಯ ಮತ್ತು ಸಾಮಾಜಿಕ ಬದ್ಧತೆ ಮೂಡಲು ಸಾಧ್ಯ ಎನ್ನುವ ನಂಬಿಕೆ ನಮ್ಮದು. ಮುಂದಿನ ದಿನಗಳಲ್ಲಿ ಈ ಉದ್ದೇಶವನ್ನು ಇಟ್ಟು ರಂಗ ಚಟುವಟಿಕೆಯನ್ನು ಇನ್ನಷ್ಟು ಬೆಳೆಸಲು ಮುಂದಾಗುತ್ತಿದ್ದೇವೆ. ನಮ್ಮ ಮುಂದೆ ಹಲವಾರು ಯೋಜನೆಗಳು ಇವೆ. ದಿಟ್ಟ ಗುರಿಯತ್ತ ಸಾಗುವ ಉತ್ಸಾಹಿ ಯುವ ಬಳಗ ಇದೆ. ಹಾಗಾಗಿ ನಮ್ಮೆಲ್ಲಾ ರಂಗ ಕನಸುಗಳನ್ನು ನನಸುಗೊಳಿಸುವ ನಿಮ್ಮೆಲ್ಲರ ಸಹಕಾರ ನಮಗೆ ಬಹಳ ಮುಖ್ಯ. ನಮ್ಮ ಕಾರ್ಯಕ್ರಮದ ಪ್ರೇಕ್ಷಕರಾಗಿ, ಹಿತೈಷಿಗಳಾಗಿ ನಮ್ಮೊಂದಿಗೆ ತನು-ಮನ-ಧನದೊಂದಿಗೆ ಸಹಕರಿಸಿ ನಮ್ಮ ಬೆಳವಣಿಗೆಯಲ್ಲಿ ನೀವು ಸಾಕ್ಷಿಗಳಾಗಿ, ನಿಮ್ಮೆಲ್ಲರ ಪ್ರೋತ್ಸಾಹ ನಮ್ಮ ಮೇಲಿರಲಿ.
ಸಂತ ಆಲೋಶಿಯಶ್ ಕಾಲೇಜು (ಸ್ವಾಯತ್ತ) ಮಂಗಳೂರು ಇದರ ಪ್ರಾಂಶುಪಾಲರಾದ ರೆ.ಡಾ. ಪ್ರವೀಣ್ ಮಾರ್ಟಿಸ್ ಹಾಗೂ ನಿರ್ದೇಶಕರು, ಯುಜಿಸಿ ಸ್ಟ್ರೈಡ್ ಯೋಜನೆ ಮತ್ತು ಕುಲಸಚಿವರು ಇವರು ಸರ್ವರನ್ನು ಪ್ರೀತಿ ಪೂರ್ವಕವಾಗಿ ಸ್ವಾಗತಿಸುತ್ತಾರೆ.