ಗೋಣಿಕೊಪ್ಪಲು : ಗೋಣಿಕೊಪ್ಪಲಿನ ಶ್ರೀ ಕಾವೇರಿ ದಸರಾ ಸಮಿತಿ ಮತ್ತು ಪೊನ್ನಂಪೇಟೆ ತಾಲೂಕು ಕ.ಸಾ.ಪ. ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಗೋಣಿಕೊಪ್ಪಲು ಶ್ರೀ ಕಾವೇರಿ ದಸರಾ ಬಹುಭಾಷಾ ಕವಿಗೋಷ್ಠಿಯನ್ನು ದಿನಾಂಕ 11 ಅಕ್ಟೋಬರ್ 2024ರಂದು ಬೆಳಗ್ಗೆ 10-00 ಗಂಟೆಗೆ ಗೋಣಿಕೊಪ್ಪಲು ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿರ್ಮಿಸಲಾಗುವ ಶ್ರೀ ಕಾವೇರಿ ದಸರಾ ಕಲಾ ವೇದಿಕೆಯಲ್ಲಿ ಆಯೋಜಿಸಲಾಗಿದೆ.
ಗೋಣಿಕೊಪ್ಪಲು ಬಹುಭಾಷಾ ಕವಿಗೋಷ್ಠಿ ಆಯೋಜನ ಸಮಿತಿಯ ಅಧ್ಯಕ್ಷರಾಗಿರುವ ಕೋಳೆರ ದಯಾ ಚಂಗಪ್ಪರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಕವನಗಳನ್ನು ವಾಚನ ಮಾಡಲು ಆಸಕ್ತರಾಗಿರುವ ಕವಿ, ಕವಿಯಿತ್ರಿಯರಿಂದ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಯಾವುದೇ ಒಂದು ಭಾಷೆಯ ಒಂದು ಕವನವನ್ನು ದಿನಾಂಕ 28 ಸೆಪ್ಟೆಂಬರ್ 2024ರ ಒಳಗಾಗಿ ಕಳಹಿಸಿಕೊಡಬೇಕು. ಆ ನಂತರ ಬರುವ ಕವನಗಳನ್ನು ಪರಿಗಣಿಸಲಾಗುವುದಿಲ್ಲ. ಕನ್ನಡ ಭಾಷೆಯ ಚುಟುಕು ಕವನ (4 ಸಾಲಿನ ಗರಿಷ್ಠ 4 ಕವನಗಳಿಗೆ ಮಾತ್ರ ಅವಕಾಶ)ಗಳು. ಈ ಬಾರಿ ವಿಶೇಷವಾಗಿ ಮಕ್ಕಳ ಕವನ (6ರಿಂದ 13 ವರ್ಷ ಒಳಪಟ್ಟವರು)ಗಳಿಗೂ ಅವಕಾಶ ಕಲ್ಪಿಸಲಾಗಿದೆ.
ಕವನಗಳನ್ನು ಕಳುಹಿಸುವವರು ತಮ್ಮ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ಭಾವಚಿತ್ರವನ್ನು ತಪ್ಪದೆ ಕಳುಹಿಸಿಕೊಡಬೇಕು. ವಾಟ್ಸಾಪ್ ಅಥವಾ ಇಮೇಲ್ ಸೌಲಭ್ಯ ಇಲ್ಲದಿರುವವರು ಅಂಚೆ ಮೂಲಕ ಈ ವಿಳಾಸಕ್ಕೆ ಅಗತ್ಯ ಮಾಹಿತಿಯೊಂದಿಗೆ ಕಳುಹಿಸಿಕೊಡಬಹುದು. ವಿಳಾಸ : ಅಧ್ಯಕ್ಷರು, ಗೋಣಿಕೊಪ್ಪಲು ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ, ಕೇರಾಫ್ ಕಾಮತ್ ನವಮಿ, ಗೋಣಿಕೊಪ್ಪಲು.-571213. (ಕವನಗಳನ್ನು ಅಂಚೆ ಮೂಲಕ ಕಳುಹಿಸುವವರು ಲಕೋಟೆಯ ಮೇಲೆ ದೊಡ್ಡದಾಗಿ ‘ಗೋಣಿಕೊಪ್ಪಲು ದಸರಾ ಬಹುಭಾಷಾ ಕವಿಗೋಷ್ಠಿ ಕವನ’ ಎಂದು ನಮೂದಿಸಬೇಕು).
ಹೆಚ್ಚಿನ ಮಾಹಿತಿಗೆ ಸಮಿತಿಯ ಸಂಚಾಲಕಿ ಶ್ರೀಮತಿ ಎಸ್.ಎಂ. ರಜನಿ -94838 26120, ಕಾರ್ಯದರ್ಶಿ ಶ್ರೀಮತಿ ಶೀಲಾ ಬೋಪಣ್ಣ-9945794414, ಸದಸ್ಯರಾದ ಚಂದನಾ ಮಂಜುನಾಥ್ -9986939357 ಇವರುಗಳನ್ನು ಸಂಪರ್ಕಿಸಬಹುದು.