ಬ್ರಹ್ಮಾವರ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬ್ರಹ್ಮಾವರ ತಾಲೂಕು ಘಟಕ ಪ್ರಸ್ತುತಪಡಿಸುವ ‘ಗ್ರಾಮ ಸಾಹಿತ್ಯ ಸಮ್ಮೇಳನ’ ಕ್ಯಾದಿಗೆ-2024 ಕಾರ್ಯಕ್ರಮವು ದಿನಾಂಕ 30 ನವೆಂಬರ್ 2024ರ ಶನಿವಾರ ಅಪರಾಹ್ನ ಘಂಟೆ 2.30ರಿಂದ ಕಾರ್ಕಡ ಸೀತಾರಾಮ ಸೋಮಯಾಜಯವರ ಮನೆಯಂಗಳದಲ್ಲಿ ನಡೆಯಲಿದೆ.
ಶ್ರೀ ಕೆ. ತಾರನಾಥ ಹೊಳ್ಳ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಾಧಕರಿಗೆ ಗೌರವ ಸಮರ್ಪಣೆ, ಸ್ವರಚಿತ ಕವನ ವಾಚನ, ಗ್ರಾಮೀಣ ಕಂಠಸ್ಥ ಸಾಹಿತ್ಯ, ಕನ್ನಡಗೀತೆ, ಬಹುವಿಧ ಗೋಷ್ಠಿ, ಕಾರ್ತಿಕ ಮಾಸದ ತುಳಸಿ ಭಜನೆ, ಗ್ರಾಮ ಇತಿಹಾಸ ಹಾಗೂ ಸಾಲಿಗ್ರಾಮದ ಆರಾಧನಾ ಮೆಲೋಡಿಸ್ ಇವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ.

