Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಸಂಗೀತ ನೃತ್ಯೋತ್ಸವ’ | ಜುಲೈ 04

    July 2, 2025

    ಸಾಹಿತ್ಯಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದ ಕ.ಚು.ಸಾ.ಪ. ಅಂತರ ರಾಜ್ಯಮಟ್ಟದ ಸಮ್ಮೇಳನ

    July 2, 2025

    ಧಾರವಾಡದ ಸೃಜನಾ ರಂಗಮಂದಿರದಲ್ಲಿ ‘ಸ್ತ್ರೀ ನಾಟಕೋತ್ಸವ’ | ಜುಲೈ 06 ಮತ್ತು 07

    July 1, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುತ್ತೂರಿನ ಹಿರೇಬಂಡಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ‘ಗ್ರಾಮ ಸಾಹಿತ್ಯ ಸಂಭ್ರಮ’
    Cultural

    ಪುತ್ತೂರಿನ ಹಿರೇಬಂಡಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ‘ಗ್ರಾಮ ಸಾಹಿತ್ಯ ಸಂಭ್ರಮ’

    January 9, 2024No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪುತ್ತೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮ ಪಂಚಾಯತ್ ಹಿರೇಬಂಡಾಡಿ ಹಾಗೂ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಹಕಾರದಲ್ಲಿ ಮಿತ್ರಂಪಾಡಿ ಜಯರಾಮ ರೈ ಅವರ ಮಹಾ ಪೋಷಕತ್ವದಲ್ಲಿ ‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ’ ಎಂಬ ಘೋಷವಾಕ್ಯದಲ್ಲಿ ದಿನಾಂಕ 23-12-2023ರಂದು ‘ಗ್ರಾಮ ಸಾಹಿತ್ಯ ಸಂಭ್ರಮ’ದ 11ನೇ ಸರಣಿ ಕಾರ್ಯಕ್ರಮವು ಹಿರೇಬಂಡಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

    ಈ ಕಾರ್ಯಕ್ರಮದಲ್ಲಿ ಸಾಧಕರನ್ನು ಅಭಿನಂದಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದ ಗ್ರಾಮ ಸಾಹಿತ್ಯ ಸಂಭ್ರಮದ ಮಹಾ ಪೋಷಕರಾಗಿರುವ ಮಿತ್ರಂಪಾಡಿ ಜಯರಾಮ್ ರೈ ಅಬುದಾಬಿಯವರು “ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಸಲ್ಪಡುವ ಗ್ರಾಮ ಸಾಹಿತ್ಯ ಸಂಭ್ರಮವು ಅಂತರ್ಜಾಲಗಳ ಮೂಲಕ ವಿದೇಶಗಳಲ್ಲೂ ವ್ಯಾಪಕ ಪ್ರಚಾರವನ್ನು ಪಡೆಯುತ್ತಿದೆ ಹಾಗೂ ಹೊರನಾಡ ಕನ್ನಡಿಗರಿಂದ ಮುಕ್ತ ಕಂಠದ ಪ್ರಶಂಸನೆಗೆ ಪಾತ್ರವಾಗುತ್ತಿದೆ’ ಎಂದು ಹೇಳಿದರು.

    ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ಪಂಚಾಯತ್ ಅಧ್ಯಕ್ಷರಾದ ಸದಾನಂದ ಶೆಟ್ಟಿ ಅವರು “ಇಂದು ಸಾಹಿತ್ಯದ ಮೂಲಕ ಮತ್ತೊಮ್ಮೆ ಮಕ್ಕಳನ್ನ ಸಮಾಜದ ಸತ್ಪ್ರಜೆಗಳನ್ನಾಗಿ ರೂಪಿಸಲು ಹೊರಟ ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮ ಅಭಿನಂದನೀಯ” ಎಂದು ಶುಭ ಹಾರೈಸಿದರು. ಮಾಜಿ ಶಾಸಕರಾದ ಶ್ರೀ ಸಂಜೀವ ಮಠಂದೂರು ಸಮ್ಮೇಳನಾಧ್ಯಕ್ಷರಿಗೆ ಕನ್ನಡ ಪೇಟ ತೊಡಿಸಿ ಮೆರವಣಿಗೆಗೆ ಚಾಲನೆ ನೀಡಿ, “ಯುವ ಜನತೆಗೆ ಸಾಹಿತ್ಯ ಪರಿಷತ್ ಜವಾಬ್ದಾರಿ ನೀಡಿರುವ ಕಾರಣ ಅದಕ್ಕೊಂದು ಹೊಸ ಆಯಾಮವನ್ನೇ ನೀಡಿರುತ್ತಾರೆ” ಎಂದು ಪ್ರಶಂಸನಾ ನುಡಿಗಳನ್ನಾಡಿ ಶುಭ ಹಾರೈಸಿದರು.

    ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ಶ್ರೀ ಗಣರಾಜ ಕುಂಬ್ಳೆ, ನಿವೃತ್ತ ಶಿಕ್ಷಕರಾದ ಉಮೇಶ್ ಗೌಡ ಬಂಡಾಡಿ, ಪಾಡ್ದನ ಕಲಾವಿದರಾದ ಶ್ರೀಮತಿ ಕಲ್ಯಾಣಿ, ಕ್ರೀಡಾ ಕ್ಷೇತ್ರದ ವಿಶೇಷ ಸಾಧಕರಾದ ಕು. ಮಾನ್ಯ, ನಾಟಿ ವೈದ್ಯರಾದ ಶ್ರೀ ಕೃಷ್ಣಪ್ಪ ಕಜೆ, ಕಟೀಲು ಮೇಳದ ಯಕ್ಷಗಾನ ಕಲಾವಿದರಾದ ಶ್ರೀ ಶೇಖರ್ ಕೊರಂಬಾಡಿಯವರನ್ನು ಮಿತ್ರಂಪಾಡಿ ಜಯರಾಮ್ ರೈ ಅಭಿನಂದಿಸಿದರು. ಅಭಿನಂದನೆ ಸ್ವೀಕರಿಸಿ ಶ್ರೀ ಗಣರಾಜ್ ಕುಂಬ್ಳೆ ಅವರು “ಸಾಹಿತ್ಯವು ಗ್ರಾಮದಿಂದಲೇ ಪೇಟೆಗೆ ಪಯಣ ಬೆಳೆಸಿದ್ದು, ಮತ್ತೆ ಗ್ರಾಮ ಗ್ರಾಮದ ಕಡೆಯಲ್ಲಿ ಮಕ್ಕಳು ಮತ್ತು ಗ್ರಾಮದ ಜನರಿಗೆ ವೇದಿಕೆ ಕಲ್ಪಿಸಿ ರಾಜ್ಯದಲ್ಲೇ ಜನ ಮೆಚ್ಚುವಂತಹ ಕಾರ್ಯಕ್ರಮ ಹಮ್ಮಿಕೊಂಡ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಧಕರ ಪರವಾಗಿ ಕೃತಜ್ಞತೆ ಸಲ್ಲಿಸಿದರು”.

    ಗ್ರಾಮ ಸಾಹಿತ್ಯ ಸಂಭ್ರಮಕ್ಕೆ ಸಾಹಿತ್ಯ ಸಮ್ಮೇಳನದ ಸ್ವರೂಪ ನೀಡುವ ನಿಟ್ಟಿನಲ್ಲಿ ಹಿರಿಯ ಸಾಹಿತಿಗಳಾದ ಶ್ರೀ ಎಸ್.ಜಿ. ಕೃಷ್ಣ ಅವರು ನೀಡಿದ ಸಲಹೆ ಮೇರೆಗೆ ಈ ಕಾರ್ಯಕ್ರಮದಲ್ಲಿ ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಪ್ರಿಯಾಂಕ ಅವರು ಸರ್ವಾಧ್ಯಕ್ಷೆಯಾಗಿ ಹಾಗೂ ಅದೇ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಸಾಜಿದ ಅವರು ಸಮಾರೋಪ ಭಾಷಣಗಾರ್ತಿಯಾಗಿ ಜನರ ಗಮನ ಸೆಳೆದರು.

    ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರು “ಗ್ರಾಮೀಣ ಮಟ್ಟದಲ್ಲಿ ಮಕ್ಕಳನ್ನ ಸಾಹಿತ್ಯ ಮತ್ತು ಪುಸ್ತಕದ ಓದಿನ ಕಡೆಗೆ ಕೊಂಡೊಯ್ಯುವ ಹಾಗೂ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ ಅವರ ಆಶಯದಂತೆ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುವ ಪ್ರಯತ್ನ ಇದಾಗಿದೆ” ಎಂದು ಸರ್ವ ರೀತಿಯಲ್ಲಿ ಸಹಕಾರ ನೀಡಿದ ಹಿರೇಬಂಡಾಡಿ ಗ್ರಾಮದ ಮಹಾ ಜನತೆಗೆ ಧನ್ಯವಾದ ಸಮರ್ಪಿಸಿದರು.

    ಈ ಕಾರ್ಯಕ್ರಮದಲ್ಲಿ ಸರ್ವಾಧ್ಯಕ್ಷರನ್ನು ಹಾಗೂ ಅತಿಥಿ ಗಣ್ಯರನ್ನು ವಾದ್ಯ ಘೋಷದೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರುವ ವಿಶೇಷತೆ ಹಾಗೂ ಸಭಾಂಗಣವನ್ನು ಕನ್ನಡದ ಬಾವುಟ-ಕನ್ನಡ ತಳಿರು-ತೋರಣಗಳಿಂದ ಅಲಂಕರಿಸಲಾಗಿತ್ತು. ಸಭಾ ಕಾರ್ಯಕ್ರಮದಲ್ಲಿ ಸರಕಾರಿ ಪ್ರೌಢಶಾಲೆ ಹಿರೇಬಂಡಾಡಿ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಸರಕಾರಿ ಪ್ರೌಢಶಾಲೆ ಹಿರೇಬಂಡಾಡಿ ಮುಖ್ಯಗುರುಗಳಾದ ಶ್ರೀ ಹರಿಕಿರಣ್ ಕೆ. ಸ್ವಾಗತಿಸಿದರು. ಗ್ರಾಮ ಪಂಚಾಯತ್ ಸಂಚಾಲಕರಾದ ಶ್ರೀ ನಾರಾಯಣ ಕುಂಬ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸ್ಥಾಪಕಾಧ್ಯಕ್ಷರಾದ ಶ್ರೀ ಚಂದ್ರಮೌಳಿ ಕಡಂದೇಲು ವಂದಿಸಿ, ಸರಕಾರಿ ಪ್ರೌಢಶಾಲೆ ಹಿರೇಬಂಡಾಡಿ ಶಿಕ್ಷಕಿ ಶ್ರೀಮತಿ ಮಲ್ಲಿಕಾ ಐ. ಕಾರ್ಯಕ್ರಮ ನಿರೂಪಿಸಿದರು.

    ಸಭಾ ಕಾರ್ಯಕ್ರಮದ ನಂತರ ಬಾಲ ಕವಿಗೋಷ್ಠಿ, ಬಾಲ ಕಥಾಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಅಲ್ಲದೇ ಸಾರ್ವಜನಿಕ ವಿಭಾಗದಲ್ಲಿ ಕವಿಗೋಷ್ಠಿ ನಡೆಯಿತು. ಅಡೆಕಲ್ ಶಾಲಾ ಶಿಕ್ಷಕಿ ಕು.ಶ್ರೇಯ ಶೆಟ್ಟಿ ಬಾಲ ಕವಿಗೋಷ್ಠಿ ಅಧ್ಯಕ್ಷತೆ, ಸ. ಪ್ರೌಢ ಶಾಲೆ ಹಿರೇಬಂಡಾಡಿ ಶಿಕ್ಷಕಿ ಶ್ರೀಮತಿ ಲಲಿತಾ. ಕೆ. ಬಾಲ ಕಥಾ ಗೋಷ್ಠಿ ಅಧ್ಯಕ್ಷತೆ ಅಲ್ಲದೇ ಸಾರ್ವಜನಿಕ ವಿಭಾಗದ ಕವಿಗೋಷ್ಠಿ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಶ್ರೀ ಪ್ರಕಾಶ್ ರೈ ಬೆಳ್ಳಿಪ್ಪಾಡಿ ವಹಿಸಿದ್ದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಶಾಂಭವಿ ,ಹಾಗೂ ಗ್ರಾಮ ಪಂಚಾಯತ್ ಸರ್ವ ಸದಸ್ಯರು ಉಪಸ್ಥಿತರಿದ್ದರು.

    ಕವಿಗೋಷ್ಠಿಯಲ್ಲಿ ಶ್ರೀಮತಿ ಸುನೀತಾ ಶ್ರೀರಾಮ್, ಶ್ರೀಮತಿ ಮಲ್ಲಿಕಾ ಐ., ಶ್ರೀಮತಿ ಲಲಿತಾ ಕೆ., ಶ್ರೀಮತಿ ಪೂರ್ಣಿಮಾ ಪೆರ್ಲಂಪಾಡಿ, ಸುಪ್ರೀತಾ ಚರಣ್ ಪಾಲಪ್ಪೆ ಕಡಬ, ಸುರೇಶ ಚಾರ್ವಾಕ, ಚಂದ್ರಹಾಸ ಕುಂಬಾರ ಬಂದಾರು, ಪ್ರಿಯಾ ಸುಳ್ಯ, ಶ್ರೇಯ ಮಿಂಚಿನಡ್ಕ, ಶ್ರೇಯ ಶೆಟ್ಟಿ ಭಾಗವಹಿಸಿದ್ದರು. ವಿವಿಧ ಗೋಷ್ಠಿಗಳ ನಿರ್ವಹಣೆಯನ್ನು ಕು. ಚೈತ್ರಾ ಮಾಯಿಲಕೊಚ್ಚಿ, ನವ್ಯ ಪ್ರಸಾದ್ ನೆಲ್ಯಾಡಿ, ಪ್ರಿಯಾ ಸುಳ್ಯ, ಶ್ರೇಯಾ ಮಿಂಚಿನಡ್ಕ ನಿರ್ವಹಿಸಿ ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ನಯನ ಸಭಾಂಗಣದಲ್ಲಿ ರಂಗಸಂಗೀತ, ಅಭಿನಂದನೆ, ನಾಟಕಗಳ ಪ್ರದರ್ಶನ | ಜನವರಿ 11ರಂದು
    Next Article ಶಿರಸಿಯ ನಯನ ಸಭಾಂಗಣದಲ್ಲಿ ‘ಸಂಗಮ’ ಕಾದಂಬರಿ ಲೋಕಾರ್ಪಣೆ | ಜನವರಿ 14ರಂದು
    roovari

    Add Comment Cancel Reply


    Related Posts

    ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ.) ಕಾಸರಗೋಡು ಇದರ ಗೌರವ ಸಲಹೆಗಾರರಾಗಿ ದೀಪಕ್ ಪೆರ್ಮುದೆ ಆಯ್ಕೆ

    June 17, 2025

    ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ‘ಕೆ.ಎಂ.ಎ. ದಫ್ ಮುಟ್ಟ್’ ತಂಡ ಹಾಗೂ ಪ್ರದರ್ಶನ

    June 17, 2025

    ಲಕ್ಷ್ಮೀನಾರಾಯಣ ಕಾರಂತರಿಗೆ ತುಳುಕೂಟದ ವತಿಯಿಂದ ಅಭಿನಂದನೆ

    June 13, 2025

    ಮಂಗಳೂರು ವಿಶ್ವವಿದ್ಯಾನಿಲಯದ ‘ಸಂಭ್ರಮ 2025’ ಸಾಂಸ್ಕ್ರತಿಕ ಸ್ವರ್ಧೆ

    June 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.