ಮಂಗಳೂರು : ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲಾ ಶಾಸ್ತ್ರೀಯ ನೃತ್ಯ ಕಲಾವಿದರ ಸಂಘಟನೆ ‘ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ (ರಿ.) ಮಂಗಳೂರು’ ಪ್ರಸ್ತುತ ಪಡಿಸುವ ‘ಸಮೂಹ ನೃತ್ಯ’ ಪ್ರದರ್ಶನವನ್ನು ದಿನಾಂಕ 21 ಡಿಸೆಂಬರ್ 2025ರಂದು ಅಪರಾಹ್ನ 3-00 ಗಂಟೆಗೆ ಮಂಗಳೂರಿನ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಇದರ ಅಧ್ಯಕ್ಷರಾದ ವಿದುಷಿ ರಾಜಶ್ರೀ ಉಳ್ಳಾಲ್ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಅರುಣ್ ಐತಾಳ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಾಟ್ಯನಿಕೇತನ ಕೊಲ್ಕ ಮ೦ಗಳೂರು, ಸನಾತನ ನಾಟ್ಯಾಲಯ ಬಲ್ಲಾಳಭಾಗ್, ಗಾನ ನೃತ್ಯ ಅಕಾಡೆಮಿ ಮ೦ಗಳೂರು, ಶಿವಪ್ರಣಾಮ್ ಸ್ಕೂಲ್ ಆಫ್ ಡ್ಯಾನ್ಸ್ ಕಿನ್ನಿಗೋಳಿ, ನಾದ ನೃತ್ಯ ಸ್ಕೂಲ್ ಆಫ್ ಡಾನ್ಸ್ ಅಂಡ್ ಕಲ್ಬರಲ್ ಟ್ರಸ್ಟ್ ಮ೦ಗಳೂರು, ಶ್ರೀ ಶಾರದಾ ನಾಟ್ಯಾಲಯ ಕುಳಾಯಿ ಹೊಸಬೆಟ್ಟು, ಸವಿಜೀವನಂ ನೃತ್ಯ ಕಲಾಕ್ಷೇತ್ರ ಉಪ್ಪಳ, ಭಾರತಿ ನೃತ್ಯಾಲಯ ಮುಡಿಪು, ನೃತ್ಯ ವಿದ್ಯಾನಿಲಯ ಕದ್ರಿ ಮ೦ಗಳೂರು ಇವರುಗಳು ಈ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ.

