ಕಾಸರಗೋಡು : ಶ್ರೀ ಗುರು ರಾಘವೇಂದ್ರ ಸ್ವಾಮಿ ಆರಾಧನ ಪ್ರಯುಕ್ತ ಕಾಸರಗೋಡು ಪೇಟೆ ವೆಂಕಟ್ರಮಣ ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಉಳಿಯ ದನ್ವ0ತರಿ ಯಕ್ಷಗಾನ ಕಲಾಸಂಘದ ವತಿಯಿಂದ “ಗುರುದಕ್ಷಿಣೆ” ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 11 ಆಗಸ್ಟ್ 2025ರ ಸೋಮವಾರದಂದು ನಡೆಯಿತು.
ಕಾರ್ಯಕ್ರಮದ ಹಿಮ್ಮೆಳದಲ್ಲಿ ಭಾಗವತರಾಗಿ ಶ್ರೀ ರವಿಶಂಕರ ಮಧೂರು, ಚೆಂಡೆ ಹಾಗೂ ಮದ್ದಳೆಯಲ್ಲಿ ಶ್ರೀ ಮುರಳಿಮಾಧವ ಮಧೂರು, ಗೋಪಾಲ ಕೃಷ್ಣ ನಾವಡ ಮಧೂರು ಸಹಕರಿಸಿದರು. ಮುಮ್ಮೆಳದಲ್ಲಿ ದ್ರೋಣನಾಗಿ ಶ್ರೀ. ವಿಷ್ಣು ಭಟ್ ಕಕ್ಕೆಪ್ಪಾಡಿ, ಮಧೂರು, ಭ್ರಹ್ಮಶ್ರೀ ಉಳಿಯತಾಯ ವಿಷ್ಣು ಆಸ್ರ, ಏಕಲವ್ಯನಾಗಿ ಶ್ರೀ. ಗೋಪಾಲ ಅಡಿಗ ಕೂಡ್ಲು, ಧ್ರುಪದ ರಾಜನಾಗಿ ಶ್ರೀ ನರಸಿಂಹ ಬಲ್ಲಾಳ್ ಹಾಗೂ ಶ್ರೀ ಸುಂದರ ಕೃಷ್ಣ ಗಟ್ಟಿ, ಕಾಸರಗೋಡು, ಅರ್ಜುನನಾಗಿ ಶ್ರೀ. ಮುರಳಿ ಮಾಧವ ಮಧೂರು, ಕೌಸವಿಯಾಗಿ ಶ್ರೀಮತಿ ಸರಸ್ವತಿ ಟೀಚರ್ ಕೂಡ್ಲು ಪತ್ರ ನಿರ್ವಹಿಸಿದರು.