Subscribe to Updates

    Get the latest creative news from FooBar about art, design and business.

    What's Hot

    ಕಟೀಲಿನಲ್ಲಿ ಐನ್‌ಕೈ ಅಜ್ಜಿಕತೆ ಕೃತಿ ಲೋಕಾರ್ಪಣೆ | ಸೆಪ್ಟೆಂಬರ್ 20

    September 18, 2025

    ದಸರಾ ಬಹುಭಾಷಾ ಕವಿಗೋಷ್ಠಿ | ಸೆಪ್ಟೆಂಬರ್ 20

    September 18, 2025

    ಬೇಳ ಸಂತ ಬರ್ತಲೋಮೆಯ ಹಿರಿಯ ಬುನಾದಿ ಶಾಲೆಯಲ್ಲಿ ಕನ್ನಡ ಸಾಹಿತ್ಯ ಅಭಿಯಾನ -6 | ಸೆಪ್ಟೆಂಬರ್ 20

    September 18, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಭರತಾಂಜಲಿಯಿಂದ ‘ಗುರು ನಮನ ಮತ್ತು ಮಾತಾಪಿತರ ಚರಣ ಪೂಜನ’ ಕಾರ್ಯಕ್ರಮ
    Bharathanatya

    ಭರತಾಂಜಲಿಯಿಂದ ‘ಗುರು ನಮನ ಮತ್ತು ಮಾತಾಪಿತರ ಚರಣ ಪೂಜನ’ ಕಾರ್ಯಕ್ರಮ

    July 26, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಭರತಾಂಜಲಿ ಕೊಟ್ಟಾರ ಮಂಗಳೂರು ಇದರ ವತಿಯಿಂದ ಶ್ರೀ ಮಹಾಗಣಪತಿ ದೇವಸ್ಥಾನ ಗಣೇಶಪುರದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ‘ಗುರು ನಮನ ಮತ್ತು ಮಾತಾಪಿತರ ಚರಣ ಪೂಜನ’ ಕಾರ್ಯಕ್ರಮ ದಿನಾಂಕ 23-07-2023ರಂದು ನಡೆಯಿತು. ಶಕ್ತಿನಗರದ ಶಕ್ತಿ ರೆಸಿಡೆನ್ಸಿಯಲ್ ಶಾಲೆ ಇಲ್ಲಿನ ಪ್ರಾಂಶುಪಾಲರಾದ ವಿದ್ವಾನ್ ರವಿಶಂಕರ್ ಹೆಗಡೆಯವರು ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಾ “ಭಾರತದ ಎಲ್ಲಾ ಕಲಾಪ್ರಕಾರಗಳಲ್ಲಿಯೂ ಗುರು ಪರಂಪರೆ ನಡೆದುಕೊಂಡು ಬಂದಿರುವುದರಿಂದ ಇಲ್ಲಿನ ಸಂಸ್ಕೃತಿ ಭದ್ರವಾಗಿದೆ. ನಮ್ಮ ದೇಶದ ಪರಂಪರೆ ಅತ್ಯಂತ ಶ್ರೇಷ್ಠವಾದದ್ದು ಎಂದು ಅಭಿಪ್ರಾಯಪಟ್ಟರು. ಆಚಾರ್ಯ ಎಂದರೆ ವಿದ್ಯೆಯನ್ನು ತಾನು ಆಳವಾಗಿ ಅಭ್ಯಾಸ ಮಾಡಿ ಅದನ್ನು ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ಪಾಠ ಮಾಡುವುದಷ್ಟೇ ಅಲ್ಲ ಅದನ್ನು ತಾನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡವನಾಗಿರಬೇಕು. ಆಗ ಮಾತ್ರ ಆತ ಆಚಾರ್ಯ ಅಥವಾ ಗುರು ಎಂದು ಕರೆಸಿಕೊಳ್ಳುತ್ತಾನೆ. ಒಬ್ಬ ಶಿಕ್ಷಕ ಕೇವಲ ಜ್ಞಾನವನ್ನು ನೀಡುತ್ತಾನೆ, ಆದರೆ ಗುರುವು ನಮ್ಮ ಆಧ್ಯಾತ್ಮಿಕ ಬೆಳವಣಿಗೆಗೆ ಜವಾಬ್ದಾರನಾಗಿರುತ್ತಾನೆ. ನಮ್ಮೊಳಗಿನ ಬುದ್ಧಿವಂತಿಕೆಯನ್ನು ಜಾಗೃತಗೊಳಿಸಿ ನಮ್ಮನ್ನು ಒಳಕ್ಕೆ ತಿರುಗಿಸಲು ಪ್ರೋತ್ಸಾಹಿಸುತ್ತಾನೆ. ಕರೋನ ನಂತರದ ಕಾಲಘಟ್ಟದಲ್ಲಿ ಯುಟ್ಯೂಬ್, ಫೇಸ್ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳ ಸಹಾಯದಿಂದ ವಿದ್ಯೆಯನ್ನು ಕಲಿಯುವ ಪದ್ಧತಿ ಆರಂಭವಾಗಿದೆ. ಈ ಸಾಮಾಜಿಕ ಜಾಲತಾಣಗಳು ಉತ್ತಮವಾದ ಜ್ಞಾನವನ್ನು ನೀಡುತ್ತವೆಯಾದರೂ, ತಪ್ಪನ್ನು ತಿದ್ದಿ ಕಲಿಸುವ ಗುರು ಸ್ಥಾನಕ್ಕೆ ನಿಲ್ಲಲಾರವು. ಕಳೆದ ಹಲವಾರು ವರ್ಷಗಳಿಂದ ಸಮಾಜಕ್ಕೆ ಮಾದರಿಯಾದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿರುವ ಭರತಾಂಜಲಿಯ ಕಾರ್ಯ ಶ್ಲಾಘನೀಯ” ಎಂದರು.

    ‘ಗುರು ನಮನ’ವನ್ನು ಸ್ವೀಕರಿಸಿದ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ಇದರ ನೃತ್ಯ ನಿರ್ದೇಶಕ ಕರ್ನಾಟಕ ಕಲಾಶ್ರೀ ವಿದ್ವಾನ್ ಚಂದ್ರಶೇಖರ್ ನಾವಡ ಇವರು “ಶಿಷ್ಯರು ಪ್ರಾಮಾಣಿಕವಾಗಿ ಮತ್ತು ನಿಜವಾಗಿ ಗುರುವಿನ ಮಾರ್ಗದರ್ಶನದಂತೆ ನಡೆಯುವುದರಿಂದ ಅವರ ಅಸಹಜ ಪ್ರವೃತ್ತಿಗಳು ಕ್ರಮೇಣ ಕರಗುತ್ತವೆ. ಜ್ಞಾನೋದಯ, ವಿಮೋಚನೆ ಹಾಗೂ ವೈಯುಕ್ತಿಕ ಸನ್ಮಾರ್ಗದ ಹಾದಿಯಲ್ಲಿ ಮುನ್ನಡೆಯಲು ಅನುವು ಮಾಡಿಕೊಡುತ್ತದೆ. ಪ್ರೀತಿ ಅಭಿಮಾನದಿಂದ, ಗೌರವದಿಂದ ಗುರು ನಮನವನ್ನು ಮಾಡಿದ ನೃತ್ಯ ಗುರುಗಳಾದ ಪ್ರತಿಮಾ ಶ್ರೀಧರ್ ಅವರಿಗೆ ಮನ ಪೂರ್ವಕ ಆಶೀರ್ವಾದಗಳನ್ನು ಸಲ್ಲಿಸುತ್ತೇನೆ” ಎಂದರು.

    ವಿದ್ಯಾರ್ಥಿನಿಯರು ಈ ಸಂದರ್ಭ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕಿಯರಾದ ಪ್ರಕ್ಷಿಲಾ ಜೈನ್ ಹಾಗೂ ಮನಸಾ ಕೆ. ಉಪಸ್ಥಿತರಿದ್ದರು. ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ಅಧ್ಯಕ್ಷತೆ ವಹಿಸಿದ್ದರು. ಶ್ರೀಧರ್ ಹೊಳ್ಳ ಸ್ವಾಗತಿಸಿ, ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಮನೆ ಮನಗಳಲ್ಲಿ ಸಾಹಿತ್ಯ ಕಾರ್ಯಕ್ರಮದಲ್ಲಿ ಶ್ರೀ ಕೇಶವ ಕುಡ್ಲ ಅವರ ‘ಸಾಹಿತ್ಯ ಮತ್ತು ಸಂವಾದ’ | ಜುಲೈ 30ರಂದು
    Next Article ರಾಮಕೃಷ್ಣ ಆಶ್ರಮದಲ್ಲಿ ‘ಹರಿದಾಸ ಗಾನ’ | ಜುಲೈ 29ಕ್ಕೆ
    roovari

    Add Comment Cancel Reply


    Related Posts

    ‘ಕಲಾಭವ’ ಸರಣಿಯ ಉದ್ಘಾಟನೆಯಲ್ಲಿ ರಂಜಿಸಿದ ಕಲಾದೀಪ ದಂಪತಿಯರ ಭರತನಾಟ್ಯ

    September 18, 2025

    ಮಂಚಿ ಲಯನ್ಸ್ ಕ್ಲಬ್ ನಲ್ಲಿ ನೃತ್ಯಸರಣಿ ಮಾಲಿಕೆ ‘ಕಲಾಧಾರಾ’

    September 16, 2025

    ಕಲಾಸೂರ್ಯ ನೃತ್ಯಾಲಯ ಪ್ರಸ್ತುತ ಪಡಿಸುವ ‘ಕಲಾಭವ -02’ | ಸೆಪ್ಟೆಂಬರ್ 13

    September 12, 2025

    ನೃತ್ಯ ವಿಮರ್ಶೆ | ಸಾತ್ವಿಕಾಭಿನಯದ ಸೊಗಡು ಸೌಮ್ಯಶ್ರೀ ನೃತ್ಯದ ಸೊಬಗು

    September 12, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.