ಬೆಂಗಳೂರು : ಸಂಜೋಗ್ ಬಾನ್ಸುರಿ ಮಹಾವಿದ್ಯಾಲಯ ಪ್ರಸ್ತುತ ಪಡಿಸುವ ‘ಗುರುವಂದನಾ 2025’ ಕಾರ್ಯಕ್ರಮವನ್ನು ದಿನಾಂಕ 02 ಆಗಸ್ಟ್ 2025ರಂದು ಸಂಜೆ 3-00 ಗಂಟೆಗೆ ಬೆಂಗಳೂರು ಮಲ್ಲೇಶ್ವರಂನಲ್ಲಿರುವ ಚೌಡಯ್ಯ ಮೆಮೋರಿಯಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಹಾಡುಗಾರಿಕೆ ಮತ್ತು ಬಾನ್ಸುರಿ ಜುಗಲ್ಬಂದಿಯಲ್ಲಿ ಶಾದಜ್ ಗಾಡ್ಖಿಂಡಿ ಬಾನ್ಸುರಿ, ಅನಿರುದ್ಧ ಐತಾಳ್ ಹಾಡುಗಾರಿಕೆ, ರೂಪಕ್ ಕಲ್ಲೂರ್ಕರ್ ತಬಲಾ ಮತ್ತು ಪ್ರಸಾದ್ ಕಾಮತ್ ಹಾರ್ಮೋನಿಯಂನಲ್ಲಿ ಹಾಗೂ ವಿಶಿಷ್ಟ ಹಿಂದೂಸ್ತಾನಿ ಮತ್ತು ಕರ್ನಾಟಿಕ್ ಕೊಳಲು ಜುಗಲ್ಬಂದಿಯಲ್ಲಿ ಡಾ. ಪಂಡಿತ್ ಪ್ರವೀಣ್ ಗಾಡ್ಖಿಂಡಿ ಇವರಿಂದ ಬಾನ್ಸುರಿ, ವಿದ್ವಾನ್ ಶಶಾಂಕ್ ಸುಬ್ರಮಣ್ಯಂ ಕರ್ನಾಟಿಕ್ ಕೊಳಲು, ವಿದ್ವಾನ್ ತುಮಕೂರು ಬಿ. ರವಿಶಂಕರ್ ಇವರು ಮೃದಂಗ ಮತ್ತು ವಿದ್ವಾನ್ ಕಿರಣ್ ಗಾಡ್ಖಿಂಡಿ ತಬಲಾದಲ್ಲಿ ಸಹಕರಿಸಲಿದ್ದಾರೆ.