ತೆಕ್ಕಟ್ಟೆ: ತೆಕ್ಕಟ್ಟೆಯ ಯಶಸ್ವೀ ಕಲಾವೃಂದ ಯಕ್ಷಗಾನ ಕೇಂದ್ರದ ವತಿಯಿಂದ ಗುರುಪೂರ್ಣಿಮೆ – ಗುರುವಂದನೆ ಕಾರ್ಯಕ್ರಮವು ದಿನಾಂಕ 11 ಜುಲೈ 2025ರಂದು ಹಯಗ್ರೀವದಲ್ಲಿ ನಡೆಯಿತು.
ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹಾಗೂ ಅಧ್ಯಾಪಕರಾದ ಹೆರಿಯ ಮಾಸ್ಟರ್ ಮಾತನಾಡಿ “ಗುರುಗಳು ಜ್ಞಾನದ ದಾರಿದೀಪ. ಶಿಷ್ಯನ ಜೀವನದಲ್ಲಿ ಬೆಳಕು ಚೆಲ್ಲಿ, ಅಜ್ಞಾನವನ್ನು ದೂರ ಮಾಡಿ, ಸರಿಯಾದ ಮಾರ್ಗವನ್ನು ತೋರುವವನು ಗುರು. ಕಲಾ ವಿಭಾಗದಲ್ಲಿನ ಮೌಢ್ಯವನ್ನು ಅಳಿಸಿ, ತಾಳ-ರಾಗ-ಲಯಗಳ ಬಗೆಗೆ ತಿಳುವಳಿಕೆ ನೀಡಿ, ರಂಗದಲ್ಲಿ ಬೆಳಗಿಸುವ ಕಾರ್ಯ ಮಾಡುತ್ತಿರುವವರು ಗುರುಗಳು. ಗುರುವಿನ ದಿನವನ್ನು ಸಂಭ್ರಮವಾಗಿಸಬೇಕಾದುದು ಪ್ರತೀ ಶಿಷ್ಯನ ಕರ್ತವ್ಯ” ಎಂದರು.
ಸಮಾರಂಭದಲ್ಲಿ ಯಕ್ಷಗಾನ ಕೇಂದ್ರದ ಗುರುಗಳಾದ ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಲಂಬೋದರ ಹೆಗಡೆ ನಿಟ್ಟೂರು, ಕೃಷ್ಣಯ್ಯ ಆಚಾರ್ ಬಿದ್ಕಲ್‌ಕಟ್ಟೆ ಇವರನ್ನು ಶಿಷ್ಯರನೇಕರು ವಂದಿಸಿ, ಅಭಿನಂದಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಸೀತಾರಾಮ ಶೆಟ್ಟಿ ಮಲ್ಯಾಡಿ, ಡಾ. ಗಣೇಶ್ ಯು., ಸುಧಾ ಮಣೂರು, ಪಾರ್ವತಿ ಮೈಯ್ಯ, ಭಾಗ್ಯಲಕ್ಷ್ಮೀ, ಗೋಪಾಲ್ ಪೂಜಾರಿ, ಇನ್ನಿತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Previous Articleಬೆಂಗಳೂರಿನ ಬಂಟರ ಸಂಘದಲ್ಲಿ ‘ಸಂಕಲ್ಪ’ | ಜುಲೈ 17
Next Article ಯಶಸ್ವಿಯಾಗಿ ನಡೆದ ಮುಂಗಾರು ಕವಿಗೋಷ್ಠಿ – 2025