ಉಡುಪಿ : ಯಕ್ಷಗಾನ ಗುರು, ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರನ್ನು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾರಂಗ ವಡ್ಡರ್ಸೆ ಇವರು ದಿನಾಂಕ 10 ಜುಲೈ 2025ರ ಗುರುಪೂರ್ಣಿಮೆಯಂದು ಗುರುವಂದನೆಯ ಮೂಲಕ ಗೌರವಿಸಿದರು.
ವಡ್ಡರ್ಸೆ ಕಲಾರಂಗ ದ ನೂತನ ಅಧ್ಯಕ್ಷರಾದ ಗುರುಪ್ರಸಾದ ಐತಾಳ್, ಕಾರ್ಯದರ್ಶಿ ಪದ್ಮನಾಭ ಆಚಾರ್ಯ ಇವರು ಗುರುಪೂರ್ಣಿಮೆಯ ಈ ಗುರುವಂದನೆಯ ಕಾರ್ಯಕ್ರಮ ಸಂಯೋಜಿಸಿ ಮೊಗೆಬೆಟ್ಟು ಅವರ ಸ್ವಗೃಹದಲ್ಲಿ ತಮ್ಮ ತಂಡದ ಮೂಲಕ ಗೌರವಿಸಿದರು.
ವಡ್ಡರ್ಸೆ ಕಲಾರಂಗದ ನಿಕಟಪೂರ್ವ ಅಧ್ಯಕ್ಷ ಸಚಿನ್ ಶೆಟ್ಟಿ ಹಾಗೂ ಶ್ರೀಕಾಂತ್ ಭಟ್, ಸತೀಶ್ ವಡ್ಡರ್ಸೆ, ಮೋಹಿತ್, ಶಿವರಂಜನ್ ಮೊದಲಾದವರು ಉಪಸ್ಥಿತರಿದ್ದರು.