ತುಮಕೂರು : ಕನ್ನಡ ಸಾಹಿತ್ಯ ಪರಿಷತ್ತು ತುಮಕೂರು ಹಾಗೂ ಜಯಮಂಗಲಿ ಪ್ರಕಾಶನ ತುಮಕೂರು ಆಯೋಜಿಸುವ ದುಗ್ಗೇನಹಳ್ಳಿ ಸಿದ್ದೇಶ ಇವರ ‘ಗುರುವಿನ ಜೋಳಿಗೆ’ ಕವನ ಸಂಕಲನದ ಲೋಕಾರ್ಪಣಾ ಸಮಾರಂಭವು 22 ಜೂನ್ 2025 ರಂದು ಬೆಳಿಗ್ಗೆ ಘಂಟೆ 11.00ಕ್ಕೆ ತುಮಕೂರಿನ ಅಮಾನಿಕೆರೆ ರಸ್ತೆಯಲ್ಲಿರುವ ಕನ್ನಡ ಭವನದಲ್ಲಿ ನಡೆಯಲಿದೆ.
ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಇದರ ಅಧ್ಯಕ್ಷರಾದ ನಾಡೋಜ ಡಾ. ವೂಡೇ ಪಿ.ಕೃಷ್ಣ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ರಾಜ್ಯ ಒಕ್ಕಲಿಗರ ಸಂಘ ತುಮಕೂರು ಇದರ ನಿರ್ದೇಶಕರು ಹಾಗೂ ಸಹಾಯಕ ಕಾರ್ಯದರ್ಶಿಗಳಾದ ಶ್ರೀ ಹನುಮಂತರಾಯಪ್ಪ ಆರ್. ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಹಿರಿಯ ಜಾನಪದ ವಿದ್ವಾಂಸರಾದ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಕೃತಿ ಲೋಕಾರ್ಪಣೆ ಗೊಳಿಸಲಿದ್ದು, ಬೆಂಗಳೂರಿನ ವಿಮರ್ಶಕರು ಮತ್ತು ಲೇಖಕರಾದ ಡಾ. ಜಿ. ಬಿ. ಹರೀಶ ಕೃತಿ ಕುರಿತು ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾ ಕ.ಸಾ.ಪ. ಇದರ ಅಧ್ಯಕ್ಷರಾದ ಶ್ರೀ ಕೆ.ಎಸ್. ಸಿದ್ದಲಿಂಗಪ್ಪ ಹಾಗೂ ತುಮಕೂರು ಜಿಲ್ಲಾ ಕ. ಸಾ. ಪ ಇದರ ಕೋಶಾಧ್ಯಕ್ಷರು ಹಾಗೂ ಲೇಖಕರಾದ ಶ್ರೀ ಎಂ.ಎಚ್. ನಾಗರಾಜು ಮುಖ್ಯ ಅತಿಥಿಳಾಗಿ ಭಾಗವಹಿಸಲಿದ್ದಾರೆ.

