ಮೈಸೂರು : ರೋಟರಿ ಮೈಸೂರು ಮತ್ತು ಇಂಗ್ಲೀಷ್ ಮಾಧ್ಯಮ ಶಾಲೆ ದಟ್ಟಗಳ್ಳಿ ಇವುಗಳ ಸಹಯೋಗದೊಂದಿಗೆ ಧ್ವನಿ ಫೌಂಡೇಷನ್ ಆಯೋಜಿಸುವ ಡಾ. ಶ್ವೇತಾ ಮಡಪ್ಪಾಡಿ ಸಾರಥ್ಯದಲ್ಲಿ ‘ಹಕ್ಕಿ ಹಾಡು’ ಮಕ್ಕಳ ಬೇಸಿಗೆ ಕಲರವ ಶಿಬಿರವನ್ನು ದಿನಾಂಕ 07 ಏಪ್ರಿಲ್ 2025ರಿಂದ 27 ಏಪ್ರಿಲ್ 2025ರವರೆಗೆ ಮೈಸೂರಿನ ದಟ್ಟಗಳ್ಳಿಯ ಮಹಾಮನೆ ಸರ್ಕಲ್ ಹತ್ತಿರ ಜ್ಯೋತಿ ಫರ್ಟಿಲಿಟಿ ಸೆಂಟರ್ ಎದುರು ರೋಟರಿ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ನಾಟಕ, ಅಭಿನಯ, ಮೈಮ್, ಸಂಗೀತ, ನೃತ್ಯ/ಜನಪದ ಕುಣಿತ, ಚಿತ್ರಕಲೆ, ಕರಕುಶಲ, ವಸ್ತುಗಳ ತಯಾರಿ, ಮಣ್ಣಾಟ, ಗ್ರೀಟಿಂಗ್ ಕಾರ್ಡ್ ತಯಾರಿ, ಮುಖವಾಡ ತಯಾರಿ ಇತ್ಯಾದಿ ಕಲಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9483918783 ಮತ್ತು 7019188932 ಸಂಖ್ಯೆಯನ್ನು ಸಂಪರ್ಕಿಸಿರಿ.