ಹಾಸನ : ರತ್ನಾಕಲಾ ಪದ್ಮ ಕುಟೀರ ಟ್ರಸ್ಟ್ ಮತ್ತು ನಾಟ್ಯಕಲಾ ನಿವಾಸ್ ಹಾಸನ 18ನೇ ವಾರ್ಷಿಕೋತ್ಸವ ಪ್ರಯುಕ್ತ ಪ್ರಸ್ತುತ ಪಡಿಸುವ ‘ಹರಿ ಹರ ಸುತ’ ಮತ್ತು ‘ನಾಟ್ಯ ದಾಸೋಹಂ’ ಭರತನಾಟ್ಯ ಪ್ರದರ್ಶನವನ್ನು ದಿನಾಂಕ 02 ಆಗಸ್ಟ್ 2025ರಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂಜೆ 4-00 ಗಂಟೆಗೆ ‘ಹರಿ ಹರ ಸುತ’ ಮತ್ತು 6-15 ಗಂಟೆಗೆ ‘ನಾಟ್ಯ ದಾಸೋಹಂ’ ಭರತನಾಟ್ಯ ಮೂಲಕ ಹರಿದಾಸ ಸಾಹಿತ್ಯದ ಪರಿಶೋಧನೆಯಲ್ಲಿ ಕರ್ನಾಟಕ ಕಲಾಶ್ರೀ ಶಾರದಾಮಣಿ ಶೇಖರ್, ಕರ್ನಾಟಕ ಕಲಾಶ್ರೀ ರಾಜಶ್ರೀ ಶೆಣೈ, ವಿದ್ಯಾಶ್ರೀ ರಾಧಾಕೃಷ್ಣ, ಮಂಜುಳ ಸುಬ್ರಹ್ಮಣ್ಯ, ಉನ್ನತ್ ಜೈನ್, ಡಾ. ಸಾಗರ್ ಟಿ.ಎಸ್., ಮಂಜರಿಚಂದ್ರ ಪುಷ್ಪರಾಜ್ ಮತ್ತು ರಾಧಿಕಾ ಶೆಟ್ಟಿ ಇವರುಗಳು ನೃತ್ಯ ಪ್ರದರ್ಶನ ನೀಡಲಿದ್ದಾರೆ.