ಮಂಗಳೂರು : ರಾಮಕೃಷ್ಣ ಮಿಷನ್ ಮಂಗಳೂರು ಆಶ್ರಯದಲ್ಲಿ ಹರಿಕಥಾ ಪರಿಷತ್ (ರಿ.) ಮಂಗಳೂರು ಇವರ ವತಿಯಿಂದ ಕರ್ನಾಟಕ ರಾಜ್ಯ ಹಾಗೂ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ‘ಹರಿಕಥಾ ಸ್ಪರ್ಧೆ 2025’ಯನ್ನು ಕಿರಿಯರ ಮತ್ತು ಹಿರಿಯರ ವಿಭಾಗದಲ್ಲಿ ಆಯೋಜಿಸಲಾಗಿದೆ.
ಹರಿಕಥಾ ಕಲೆಯನ್ನು ಉಳಿಸಿ ಬೆಳೆಸಲು ಆದಷ್ಟು ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಹರಿಕಥಾ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೇರೇಪಿಸಬೇಕಾಗಿ ವಿನಂತಿ. ದಿನಾಂಕ 01 ಡಿಸೆಂಬರ್ 2025ರ ಒಳಗೆ ತಮ್ಮ ಕನಿಷ್ಠ ಐದು ನಿಮಿಷ ಅವಧಿಯ ಹರಿಕಥಾ ಪ್ರಸ್ತುತಿಯ ವಿಡಿಯೊ/ ಆಡಿಯೊವನ್ನು ಸ್ಪರ್ಧಾಳುವಿನ, ಹೆಸರು, ತರಗತಿ, ವಿಳಾಸ ಈ ವಿವರಗಳೊಂದಿಗೆ ಈ ಮೊಬೈಲ್ ಸಂಖ್ಯೆಗೆ ವಾಟ್ಸಪ್ ಮೂಲಕ ಕಳಿಸಿಕೊಡಬೇಕು – 9945370655, email : [email protected]
ಆಯ್ಕೆಯಾದ ಸ್ಪರ್ಧಿಗಳಿಗೆ ಡಿಸೆಂಬರ್ ಮೊದಲ ವಾರದಲ್ಲಿ ಆಯ್ಕೆಯಾದ ವಿವರ ತಿಳಿಸಲಾಗುವುದು. ಆಯ್ಕೆಗೊಂಡ ಸ್ಪರ್ಧಿಗಳು ದಿನಾಂಕ 27 ಡಿಸೆಂಬರ್ 2025 ಶನಿವಾರದಂದು ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಆಹ್ವಾನಿತ ಶ್ರೋತೃಗಳ ಮುಂದೆ ಕಿರಿಯ ವಿಭಾಗದ ಸ್ಪರ್ಧಿಗಳು 15 ನಿಮಿಷ ಹಾಗೂ ಹಿರಿಯ ವಿಭಾಗದ ಸ್ಪರ್ಧಿಗಳು 25 ನಿಮಿಷಗಳ ನೇರ ಪ್ರದರ್ಶನ ನೀಡಬೇಕಾಗುವುದು. ಹಿಮ್ಮೇಳವನ್ನು ಆಯೋಜಕರೇ ಒದಗಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 94481 04134, 99453 70655 ಮತ್ತು 94485 46051 ಸಂಖ್ಯೆಗಳನ್ನು ಸಂಪರ್ಕಿಸಿರಿ.

