ಮಂಗಳೂರು : ಹರಿಕಥಾ ಪರಿಷತ್ (ರಿ.) ಮಂಗಳೂರು ಮತ್ತು ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ–ಅಪರೇಟಿವ್ ಸೊಸೈಟಿ (ಲಿ.) ಮಂಗಳೂರು ಇವುಗಳ ಜಂಟಿ ಸಹಯೋಗದಲ್ಲಿ ಆಯೋಜಿಸುವ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ‘ಹರಿಕಥಾ ಸ್ಪರ್ಧೆ 2024’ಯನ್ನು ದಿನಾಂಕ 25 ಡಿಸೆಂಬರ್ 2024ರಂದು ಬೆಳಿಗ್ಗೆ ಗಂಟೆಗೆ 8-30ಕ್ಕೆ ಕದ್ರಿ ಮಲ್ಲಿಕಟ್ಟೆಯ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಹರಿಕಥಾ ಪರಿಷತ್ ಇದರ ಅಧ್ಯಕ್ಷರಾದ ಶ್ರೀ ಕೆ. ಮಹಾಬಲ ಶೆಟ್ಟಿ ಇವರ ಅಧ್ಯಕ್ಷೆತೆಯಲ್ಲಿ ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ–ಅಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಪಿ. ಉಪೇಂದ್ರ ಆಚಾರ್ಯ ಇವರು ಈ ಸಮಾರಂಭದ ಉದ್ಘಾಟನೆ ಮಾಡಲಿದ್ದಾರೆ. ಪೂರ್ವಾಹ್ನ ಗಂಟೆ 9-20ಕ್ಕೆ ಜ್ಯೂನಿಯರ್ ವಿಭಾಗ ಮತ್ತು ಅಪರಾಹ್ನ 1-00 ಗಂಟೆಗೆ ಸೀನಿಯರ್ ವಿಭಾಗದಲ್ಲಿ ಹರಿಕಥಾ ಸ್ಪರ್ಧೆ ನಡೆಯಲಿದ್ದು, ಶ್ರೀ ಸತ್ಯನಾರಾಯಣ ಐಲ, ಶ್ರೀ ರವಿರಾಜ್ ಒಡಿಯೂರು, ಶ್ರೀ ಜಗದೀಶ್ ಉಪ್ಪಳ ಮತ್ತು ಶ್ರೀ ಕೌಶಿಕ್ ಮಂಜನಾಡಿ ಇವರು ಹಿಮ್ಮೇಳ ಕಲಾವಿದರಾಗಿ ಸಹಕರಿಸಲಿದ್ದಾರೆ.