ಮಂಗಳೂರು : ಹರಿಕಥಾ ಪರಿಷತ್ (ರಿ.) ಮಂಗಳೂರು ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯಗಾಗಿ ‘ಹರಿಕಥಾ ಸ್ಪರ್ಧೆ 2024’ಯನ್ನು ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಯು ಎರಡು ವಿಭಾಗಗಳಲ್ಲಿ ನಡೆಯಲಿದ್ದು, ಕಿರಿಯರ ವಿಭಾಗ : ಆರನೇ ತರಗತಿಯಿಂದ ಹತ್ತನೇ ತರಗತಿವರೆಗೆ ಮತ್ತು ಹಿರಿಯರ ವಿಭಾಗ : ಪದವಿ ಪೂರ್ವ ಹಾಗೂ ಪದವಿ (ಪಿ.ಯು.ಸಿ. ಹಾಗೂ ಡಿಗ್ರಿ)
ನಿಯಮಗಳನ್ನು ಗಮನಿಸಿ :
* ದಿನಾಂಕ 01 ಡಿಸೆಂಬರ್ 2024ರ ಒಳಗೆ ತಮ್ಮ ಹತ್ತರಿಂದ ಹದಿನೈದು ನಿಮಿಷ ಅವಧಿಯ ಹರಿಕಥಾ ಪ್ರಸ್ತುತಿಯ ವಿಡಿಯೊ/ ಆಡಿಯೊವನ್ನು ಸ್ಪರ್ಧಾಳುವಿನ, ಹೆಸರು, ತರಗತಿ, ವಿಳಾಸ ಈ ವಿವರಗಳೊಂದಿಗೆ ಈ ಮೊಬೈಲ್ ಸಂಖ್ಯೆಗೆ ವಾಟ್ಸಪ್ ಮೂಲಕ ಕಳಿಸಿಕೊಡಬೇಕು – 9945370655, email: [email protected]
* ಆಯ್ಕೆಯಾದ ಸ್ಪರ್ಧಿಗಳಿಗೆ ಡಿಸೆಂಬರ್ ಮೂರನೇ ವಾರದಲ್ಲಿ ಮಂಗಳೂರಿನಲ್ಲಿ ಆಹ್ವಾನಿತ ಶೋತೃಗಳ ಮುಂದೆ 25 ನಿಮಿಷಗಳ ನೇರ ಸ್ಪರ್ಧೆ ನಡೆಸಲಾಗುವುದು.
* ವಿಜೇತ ಸ್ಪರ್ಧಿಗಳಿಗೆ ದಿನಾಂಕ 19 ಜನವರಿ 2025ರಂದು ಮಂಗಳೂರು ರಾಮಕೃಷ್ಣ ಮಠದಲ್ಲಿ ನಡೆಯಲಿರುವ ಹರಿಕಥಾ ಸಮ್ಮೇಳನದಲ್ಲಿ ಹರಿಕಥಾ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು.
* ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಶಂಸಾ ಪತ್ರ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಪ್ರಧಾನ ಕಾರ್ಯದರ್ಶಿ, ಹರಿಕಥಾ ಪರಿಷತ್ ( ರಿ.) ಮಂಗಳೂರು. 9448104134, 9945370655, 9448546051.