Subscribe to Updates

    Get the latest creative news from FooBar about art, design and business.

    What's Hot

    ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 31, 2025

    ಮಂಗಳೂರಿನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ನೃತ್ಯ, ಗಾನ ವೈಭವ’

    May 31, 2025

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಹರಿಕಥಾ ಪರಿಷತ್ತಿನ ಮಂಗಳೂರು ವಲಯ ಸದಸ್ಯರ ಸಮಾವೇಶ – ಸಂವಾದ ಗೋಷ್ಠಿ | 29 ಜೂನ್ ರಂದು
    Harikathe

    ಹರಿಕಥಾ ಪರಿಷತ್ತಿನ ಮಂಗಳೂರು ವಲಯ ಸದಸ್ಯರ ಸಮಾವೇಶ – ಸಂವಾದ ಗೋಷ್ಠಿ | 29 ಜೂನ್ ರಂದು

    June 26, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಹರಿಕಥಾ ಪರಿಷತ್ ಮಂಗಳೂರು ಇದರ ಮಂಗಳೂರು ವಲಯ ಸದಸ್ಯರ ಸಮಾವೇಶವು ದಿನಾಂಕ 29-06-2023ರಂದು ಕದ್ರಿಯ ಶ್ರೀಕೃಷ್ಣ ಕಲ್ಯಾಣ ಮಂದಿರದಲ್ಲಿ ನಡೆಯಲಿರುವುದು. ಸಮಾವೇಶದಲ್ಲಿ ಮೊದಲಿಗೆ ಕದ್ರಿ ಕಂಬಳದ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಹಾಗೂ ಕಾವೂರು ಶ್ರೀ ಮುಖ್ಯಪ್ರಾಣ ಭಜನಾ ಮಂಡಳಿ ಇವರಿಂದ ‘ದಾಸ ಸಂಕೀರ್ತನೆ’ ನಡೆಯಲಿರುವುದು. ಬಳಿಕ ‘ಹರಿಕಥಾ ರಂಗ-ನಿರೀಕ್ಷೆಗಳು ಹಾಗೂ ಸವಾಲುಗಳು’ ಎಂಬ ವಿಷಯದಲ್ಲಿ ಸಂವಾದ ಗೋಷ್ಠಿ ನಡೆಯಲ್ಲಿದ್ದು, ಹರಿದಾಸರು ಹಾಗೂ ವಕೀಲರಾದ ಶ್ರೀ ಮಹಾಬಲ ಶೆಟ್ಟಿ ಕೂಡ್ಲು ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪರಿಷತ್ತಿನ ಗೌರವಾಧ್ಯಕ್ಷರಾದ ಧರ್ಮದರ್ಶಿ ಡಾ. ಶ್ರೀ ಹರಿಕೃಷ್ಣ ಪುನರೂರು ಇವರು ನೆರವೇರಿಸಲಿದ್ದಾರೆ.

    ಸಂವಾದ ಗೋಷ್ಠಿಯಲ್ಲಿ ಸಂಪನ್ಮೂಲ ಮಹನೀಯರಾದ ಬಹುಶ್ರುತ ವಿದ್ವಾಂಸರು ಹಾಗೂ ವಿಮರ್ಶಕರಾದ ಡಾ. ಎಂ. ಪ್ರಭಾಕರ ಜೋಶಿ, ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠದ ನಿರ್ದೇಶಕರಾದ ಡಾ. ಧನಂಜಯ್ ಕುಂಬ್ಳೆ, ನಿವೃತ್ತ ಪ್ರಾಂಶುಪಾಲರು ಹಾಗೂ ಯಕ್ಷಗಾನ ಅರ್ಥಧಾರಿಯಾದ ಶ್ರೀ ಸರ್ಪಂಗಳ ಈಶ್ವರ ಭಟ್, ಅರ್ಥಧಾರಿಗಳು ಹಾಗೂ ವಿಮರ್ಶಕರಾದ ಶ್ರೀ ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಕೋಟೆಕಾರಿನ ಡಾ. ಮಾಧವಿ ವಿಜಯಕುಮಾರ್ ಭಾಗವಹಿಸಲಿರುವರು.

    ಈ ಕಾರ್ಯಕ್ರಮಕ್ಕೆ ಹರಿಕಥಾ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಕೆ. ಮಹಾಬಲ ಶೆಟ್ಟಿ, ಉಪಾಧ್ಯಕ್ಷರಾದ ಶ್ರೀ ಕೆ. ನಾರಾಯಣ ರಾವ್, ಮಂಗಳೂರು ಸಂಚಾಲಕರಾದ ಶ್ರೀ ಸುಧಾಕರ ರಾವ್ ಪೇಜಾವರ, ಪ್ರಧಾನ ಕಾರ್ಯದರ್ಶಿಯಾದ ಶ್ರೀ ತೋನ್ಸೆ ಪುಷ್ಕಳ ಕುಮಾರ್, ಕೋಶಾಧ್ಯಕ್ಷರಾದ ಡಾ. ಎಸ್.ಪಿ. ಗುರುದಾಸ್, ಕಾಸರಗೋಡು ಜಿಲ್ಲಾ ಸಂಚಾಲಕರಾದ ಶ್ರೀ ಶಂನಾಡಿಗ ಕುಂಬ್ಳೆ ಹಾಗೂ ಉಡುಪಿ ಜಿಲ್ಲಾ ಸಂಚಾಲಕರಾದ ಶ್ರೀ ವೈ. ಅನಂತಪದ್ಮನಾಭ ಭಟ್ ಸರ್ವರಿಗೂ ಸ್ವಾಗತ ಕೋರಿದ್ದಾರೆ.

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು : 98446 13010, 94481 04134. 99453 70655, 94485 46051

    Share. Facebook Twitter Pinterest LinkedIn Tumblr WhatsApp Email
    Previous Articleನೆಟ್ಟಿಗೆರೆ ಗ್ರಾಮದಲ್ಲಿ ‘ಎಸ್.ವಿ. ನಾರಾಯಣಸ್ವಾಮಿ ರಾವ್ ಮೆಮೊರಿಯಲ್ ಹಾಲ್’ ಮತ್ತು ‘ನಿಸ್ವಾರ್ಥ ಬದುಕಿನ ಶ್ರೀ ರಾಮಭಕ್ತ’ ಕೃತಿಯ ಲೋಕಾರ್ಪಣೆ | ಜೂನ್ 30ರಂದು
    Next Article ಯಕ್ಷಗಾನ ಗುರು, ಭಾಗವತ ತೋನ್ಸೆ ಜಯಂತ ಕುಮಾರ್ ನಿಧನ
    roovari

    Add Comment Cancel Reply


    Related Posts

    ಮಂಗಳೂರಿನ ಪತ್ರಿಕಾ ಭವನದಲ್ಲಿ ಲೋಕರ್ಪಣೆಗೊಂಡ ‘ಮಹಾಪರ್ವ’ ಅಭಿನಂದನಾ ಸಂಪುಟ

    April 5, 2025

    ಕಾಸರಗೋಡು ಕನ್ನಡ ಗ್ರಾಮದ ಸಾಂಸ್ಕೃತಿಕ ಭವನದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜನೆಗೆ ಆಹ್ವಾನ

    February 10, 2025

    ಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಹರಿಕಥಾ ಸಮ್ಮೇಳನ 2025’ | ಜನವರಿ 19

    January 17, 2025

    ಮಲ್ಲಿಕಟ್ಟೆಯ ಶ್ರೀಕೃಷ್ಣಕಲ್ಯಾಣ ಮಂದಿರದಲ್ಲಿ ಹರಿಕಥಾ ಸ್ಪರ್ಧೆ

    December 28, 2024

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.