ಸುರತ್ಕಲ್ : ಹೊಸಬೆಟ್ಟು ಗ್ರಾಮ ಸಂಘ (ರಿ.) ಕುಳಾಯಿ-ಹೊಸಬೆಟ್ಟು ಇದರ 66ನೇ ವಾರ್ಷಿಕ ಹರಿಕೀರ್ತನಾ ಮಹೋತ್ಸವವು ನವಗಿರಿ ಕಲ್ಯಾಣ ಮಂಟಪ ಹೊಸಬೆಟ್ಟು ಇಲ್ಲಿ ದಿನಾಂಕ 09-08-2024ರಂದು ಆರಂಭಗೊಂಡು 19-08-2024ರಂದು ಸಂಪನ್ನಗೊಂಡಿತು. ಚಿತ್ರಾಪುರದ ಪುರೋಹಿತ ವೇದಮೂರ್ತಿ ಸಿ. ಲಕ್ಷ್ಮೀಶ ಆಚಾರ್ಯ ಇವರು ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಾಶೀರ್ವಾದಗೈದರು. ಸುಮಾರು 12 ಹರಿದಾಸರುಗಳಿಂದ ಸಂತರ ಹರಿಕೀರ್ತನೆಯು ನಡೆಯಿತು. ಮೊದಲನೇ ದಿನದ ಹರಿಕೀರ್ತನೆಯನ್ನು ಶ್ರೀ ಚಂದ್ರಕಾಂತ್ ಭಟ್ ಮೂಡಬಿದಿರೆ ಇವರು ನಡೆಸಿಕೊಟ್ಟಿದ್ದು, ಉಳಿದ ದಿನಗಳ ಹರಿಕೀರ್ತನೆಯನ್ನು ಶ್ರೀ ಅನಂತಪದ್ಮನಾಭ ಭಟ್ ಕಾರ್ಕಳ, ಡಾ. ಎಸ್.ಪಿ. ಗುರುದಾಸ್ ಮಂಗಳೂರು, ಶ್ರೀ ಶೇಣಿ ಮುರಳಿ ಮಂಗಳೂರು, ಶ್ರೀ ಎಚ್. ಯಜ್ಞೇಶ್ ಹೊಸಬೆಟ್ಟು, ಶ್ರೀ ಪೊಳಲಿ ಜಗದೀಶದಾಸ್, ಶ್ರೀ ಶಿವಶಂಕರದಾಸ್ ಬೆಂಗಳೂರು, ಶ್ರೀಮತಿ ಮಂಜಳಾ ಜಿ. ರಾವ್ ಮಂಗಳೂರು, ಕುಮಾರಿ ಶ್ರದ್ದಾ ಗುರುದಾಸ್ ಮಂಗಳೂರು, ಕುಮಾರಿ ವಸುಪ್ರದ ಜಿ. ಭಟ್ ಉಡುಪಿ, ಶ್ರೀ ಮಧುಸೂದನ ದಾಸರು ಮಂಡ್ಯ ಹಾಗೂ ಕೊನೆಯ ದಿನದ ಸಮಾರೋಪ ಸಮಾರಂಭದ ಹರಿಕಥೆಯನ್ನು ಕಲಾರತ್ನ ಶ್ರೀ ಶಂನಾಡಿಗ ಕುಂಬ್ಳೆ ನಡೆಸಿಕೊಟ್ಟರು ಹಾಗೂ ಸಂಘದ ಕಾರ್ಯದರ್ಶಿ ಶ್ರೀ ಸುಧೀಂದ್ರ ಚಿತ್ರಾಪುರ ಇವರು ವಾರ್ಷಿಕ ಹರಿಕೀರ್ತನಾ ಮಹೋತ್ಸವಕ್ಕೆ ಸಹಕರಿಸಿದವರಿಗೆಲ್ಲರಿಗೂ ಧನ್ಯವಾದ ಸಮರ್ಪಣೆಗೈದರು.
ಹರಿಕೀರ್ತನಾ ಮಹೋತ್ಸವದ ಅಂಗವಾಗಿ ದಿನಾಂಕ 11 ಆಗಸ್ಟ್ 2024ರಂದು ಕಾಲೇಜು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಹೊಸಬೆಟ್ಟು ಗ್ರಾಮ ಸಂಘ (ರಿ.) ಮತ್ತು ನವಗಿರಿ ಸೇವಾ ಟ್ರಸ್ಟ್ (ರಿ.) ಹೊಸಬೆಟ್ಟು ಇದರ ವತಿಯಂದ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಶ್ರೀ ರಘುರಾಮ ರಾವ್ ಬೈಕಂಪಾಡಿ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಮುಖ್ಯ ಅತಿಥಿಗಳಾಗಿ ಶ್ರೀ ಕಾವಿನಕಲ್ಲು ಸುರೇಶ್ ರಾವ್ ಹೊಸಬೆಟ್ಟು ಇವರು ಭಾಗವಹಿಸಿದ್ದರು. ಸಂಘದ ಅಧ್ಯಕ್ಷರಾದ ಶ್ರೀ ಜಯಚಂದ್ರ ಹತ್ವಾರ್ ಸ್ವಾಗತಿಸಿದರು. ನವಗಿರಿ ಸೇವಾ ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ಶ್ರೀ ಎಂ. ವೆಂಕಟ್ರಾವ್, ಕಾರ್ಯದರ್ಶಿ ಶ್ರೀ ಎಚ್.ಎಲ್. ರಾವ್ ಹಾಗೂ ಸಂಘದ ಕೋಶಾಧಿಕಾರಿ ಪ್ರಸಿದ್ಧ ಪಿ. ಇವರು ಉಪಸ್ಥಿತರಿದ್ದರು.
ದಿನಾಂಕ 18 ಆಗಸ್ಟ್ 2024ರಂದು ಸ್ಥಳೀಯ ಶಾಲಾ, ಕಾಲೇಜು ಮತ್ತು ಹಿರಿಯರಿಗೆ ಶ್ರೀ ಪುರಂದರದಾಸರ ಕೀರ್ತನಾ ಸ್ಪರ್ಧೆಯು ನಡೆದಿದ್ದು ಸುಮಾರು 165 ಸ್ಪರ್ಧಾಳುಗಳು ಭಾಗವಹಿಸಿದ್ದರು.
ಬಾಲವಾಡಿಯಿಂದ 1ನೇ ತರಗತಿಯ ವಿಭಾಗದಲ್ಲಿ :
ಪ್ರಥಮ ಬಹುಮಾನ: ಐಕ್ಯ ಹತ್ವಾರ್, ವಿದ್ಯಾದಾಯಿನೀ ಆಂಗ್ಲ ಮಾಧ್ಯಮ ಶಾಲೆ ಸುರತ್ಕಲ್.
ದ್ವಿತೀಯ ಬಹುಮಾನ : ಹಿತಾರ್ಥ್, ವಿದ್ಯಾದಾಯಿನೀ ಆಂಗ್ಲ ಮಾಧ್ಯಮ ಶಾಲೆ ಸುರತ್ಕಲ್,
ತೃತೀಯ ಬಹುಮಾನ : ಆಯಿಷ್, ಹೋಲಿ ಫ್ಯಾಮಿಲಿ ಆಂಗ್ಲ ಮಾಧ್ಯಮ ಶಾಲೆ ಸುರತ್ಕಲ್.
2ರಿಂದ 4ನೇ ತರಗತಿಯ ಹುಡುಗರ ವಿಭಾಗ :
ಪ್ರಥಮ ಬಹುಮಾನ: ಆತೀಶ್ ಭಟ್, ವಿದ್ಯಾದಾಯಿನೀ ಆಂಗ್ಲ ಮಾಧ್ಯಮ ಶಾಲೆ ಸುರತ್ಕಲ್
ದ್ವಿತೀಯ ಬಹುಮಾನ: ಯಂಶ್, ವಿದ್ಯಾದಾಯಿನೀ ಆಂಗ್ಲ ಮಾಧ್ಯಮ ಶಾಲೆ ಸುರತ್ಕಲ್
ತೃತೀಯ ಬಹುಮಾನ: ವಿದ್ವತ್ ಮತ್ತು ಶಶಾಂಕ್ ಭಟ್ ವಿದ್ಯಾದಾಯಿನೀ ಆಂಗ್ಲ ಮಾಧ್ಯಮ ಶಾಲೆ ಸುರತ್ಕಲ್.
2ರಿಂದ 4ನೇ ತರಗತಿಯ ಹುಡುಗಿಯರ ವಿಭಾಗ :
ಪ್ರಥಮ ಬಹುಮಾನ : ವಿಶ್ರುತ, ಡಿ.ಪಿ.ಎಸ್. ಎಂ.ಆರ್ತ.ಪಿ.ಎಲ್,
ದ್ವಿತೀಯ ಬಹುಮನ: ಅನ್ವಿತ, ವಿದ್ಯಾದಾಯಿನೀ ಆಂಗ್ಲ ಮಾಧ್ಯಮ ಶಾಲೆ ಸುರತ್ಕಲ್,
ತೃತೀಯ ಬಹುಮಾನ : ಸಾನಿಧ್ಯ ಎಸ್. ಶೆಟ್ಟಿ, ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ ಕಾಟಿಪಳ್ಳ.
5ರಿಂದ 7ನೇ ತರಗತಿಯ ಹುಡುಗರ ವಿಭಾಗ :
ಪ್ರಥಮ ಬಹುಮಾನ : ರಾಹುಲ್ ಎಂ. ಆಚಾರ್, ವಿದ್ಯಾದಾಯಿನೀ ಆಂಗ್ಲ ಮಾಧ್ಯಮ ಶಾಲೆ ಸುರತ್ಕಲ್,
ದ್ವಿತೀಯ ಬಹುಮಾನ : ತರುಣ್ ಪಿ. ಮಯ್ಯ, ಅಂಕುರ್ ಆಂಗ್ಲ ಮಾಧ್ಯಮ ಶಾಲೆ ಕುಳಾಯಿ,
ತೃತೀಯ ಬಹುಮಾನ : ಸಿದ್ದಪ್ಪ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಬೆಟ್ಟು.
5ರಿಂದ 7ನೇ ತರಗತಿಯ ಹುಡುಗಿಯರ ವಿಭಾಗ :
ಪ್ರಥಮ ಬಹುಮಾನ : ಸಿದೀಕ್ಷಾ ಜಿ. ರಾವ್, ಸುರತ್ಕಲ್,
ದ್ವಿತೀಯ ಬಹುಮಾನ : ಅಂಕಿತಾ, ವಿದ್ಯಾದಾಯಿನೀ ಆಂಗ್ಲ ಮಾಧ್ಯಮ ಶಾಲೆ ಸುರತ್ಕಲ್,
ತೃತೀಯ ಬಹುಮಾನ : ಸಾನ್ವಿ ಭಟ್, ಅಂಕುರ್ ಆಂಗ್ಲ ಮಾಧ್ಯಮ ಶಾಲೆ ಕುಳಾಯಿ.
8ರಿಂದ 10ನೇ ತರಗತಿಯ ವಿಭಾಗ :
ಪ್ರಥಮ ಬಹುಮಾನ : ಪೂರ್ವಿ ರಾವ್, ಡಿ.ಪಿ.ಎಸ್. ಎಂ.ಆರ್ಳ.ಪಿ.ಎಲ್.,
ದ್ವಿತೀಯ ಬಹುಮಾನ : ಪ್ರತ್ಯೂಷಾ ಎ.ಪಿ., ಹೋಲಿ ಫ್ಯಾಮಿಲಿ ಆಂಗ್ಲ ಮಾಧ್ಯಮ ಶಾಲೆ ಸುರತ್ಕಲ್,
ತೃತೀಯ ಬಹುಮಾನ : ಸಾನ್ವಿತಾ ಎಂ., ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆ ಸುರತ್ಕಲ್.
ಕಾಲೇಜು ವಿಭಾಗ :
ಪ್ರಥಮ ಬಹುಮಾನ : ಸುಧೀಕ್ಷಾ ಆರ್. ಸುರತ್ಕಲ್,
ದ್ವಿತೀಯ ಬಹುಮಾನ : ರೋಹನ್ ಎಂ. ಬಂಗೇರ ಹೊಸಬೆಟ್ಟು,
ತೃತೀಯ ಬಹುಮಾನ : ಭಾರ್ಗವಿ ಐತಾಳ್ ಕುಳಾಯಿ.
ಹಿರಿಯರ ವಿಭಾಗ :
ಪ್ರಥಮ ಬಹುಮಾನ : ಶ್ರೀಮತಿ ಸ್ವರ್ಣ ಆರ್.ಕೆ. ಕುಳಾಯಿ,
ದ್ವಿತೀಯ ಬಹುಮಾನ : ಪುನೀತಾ ಶ್ರೀಕಾಂತ್ ಸುರತ್ಕಲ್,
ತೃತೀಯ ಬಹುಮಾನ : ಅನುರಾಧಾ ಸುಬ್ರಹ್ಮಣ್ಯ ಸುರತ್ಕಲ್.
ವಿಜೇತರುಗಳಿಗೆ ಸ್ಪರ್ಧಾ ದಿನವೇ ಬಹುಮಾನಗಳನ್ನು ವಿತರಿಸಲಾಯಿತು.