Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನಲ್ಲಿ ಕಲಾಭಿ ಯಕ್ಷಗಾನ ಅಧ್ಯಯನ ಕೇಂದ್ರ ಆರಂಭ

    June 9, 2025

    ಲೋಕರ್ಪಣೆಗೊಂಡ ‘ಕನ್ನಡಿಯಲ್ಲಿ ಕನ್ನಡಿಗ’ ಇದರ 3 ಮತ್ತು 4ನೇ ಸಂಚಿಕೆ

    June 9, 2025

    ಬಡಿಯಡ್ಕದಲ್ಲಿ ಪ್ರಾರಂಭಗೊಂಡ ಯಕ್ಷಗಾನ ತರಬೇತಿ

    June 9, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹರೀಶ್ ಸುಲಾಯ ಒಡ್ಡಂಬೆಟ್ಟು ಆಯ್ಕೆ
    Literature

    ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹರೀಶ್ ಸುಲಾಯ ಒಡ್ಡಂಬೆಟ್ಟು ಆಯ್ಕೆ

    January 30, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಕವಿ, ಅಧ್ಯಾಪಕ, ಸಂಘಟಕ, ಹವ್ಯಾಸಿ ಯಕ್ಷಗಾನ, ನಾಟಕ ಕಲಾವಿದ ಹರೀಶ ಸುಲಾಯ ಒಡ್ಡಂಬೆಟ್ಟು ಇವರನ್ನು ಆಯ್ಕೆಮಾಡಲಾಗಿದೆ ಎಂದು ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವರಾಮ ಕಾಸರಗೋಡು ತಿಳಿಸಿದ್ದಾರೆ.

    ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ದಿನಾಂಕ 27 ಮಾರ್ಚ್ 2025 ಗುರುವಾರದಂದು ನಡೆಯುವ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯಮಟ್ಟದ ಚುಟುಕು ಗೋಷ್ಠಿ, ರಾಜ್ಯ ಮಟ್ಟದ ವಿದ್ಯಾರ್ಥಿ ಚುಟುಕು ಗೋಷ್ಠಿ, ರಾಜ್ಯ ಮಟ್ಟದ ಚುಟುಕು ಕಥಾ ಗೋಷ್ಠಿಯು ಸಾಹಿತ್ಯಿಕ, ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿರುವುದು. ತುಳು, ಕನ್ನಡ ದ್ವಿಬಾಷಾ ಕವಿ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರು ಈಗಾಗಲೇ ‘ಬೆಳಕು’, ‘ಉದಿಪು ಸುರಗಿ’, ‘ದನಿಯಾದ ಹನಿಗಳು’, ‘ಮಿಠಾಯಿ ಡಬ್ಬ’ ಎಂಬ ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿರುವುದಲ್ಲದೆ ಹಲವಾರು ಪುಸ್ತಕಗಳಿಗೆ ಮುನ್ನುಡಿ ಮತ್ತು ಬೆನ್ನುಡಿಗಳನ್ನು ಕೂಡ ಬರೆದಿರುವರು. ಇವರು ಸುಮಾರು ಐದು ಸಾವಿರಕ್ಕಿಂತಲೂ ಹೆಚ್ಚು ಹನಿಗವನ ಮತ್ತು ಚುಟುಕುಗಳನ್ನು ಬರೆಯುವುದರ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ‘ಹಸು ಒಡ್ಡಂಬೆಟ್ಟು’ ಎಂದು ಪ್ರಚಲಿತರಾಗಿದ್ದಾರೆ. ಕೇವಲ ಒಂದೆರಡು ಸಾಲುಗಳಲ್ಲಿಯೇ ಹನಿಗವನ, ಚುಟುಕುಗಳನ್ನು ರಚಿಸುವ ಕೌಶಲ್ಯವನ್ನು ಹೊಂದಿರುವ ಇವರ ರಚನೆಗಳು, ಸಾಹಿತ್ಯ ಕ್ಷೇತ್ರದಲ್ಲಿ ವಿಭಿನ್ನ ಅನ್ನಿಸಿಕೊಂಡು ಒಡ್ಡಂಬೆಟ್ಟು ಶೈಲಿ ಎಂದೇ ಪ್ರಚಾರ ಪಡೆದುಕೊಂಡ ಇವರ ಚುಟುಕುಗಳಿಗೆ ‘ಹಸು ಹನಿ ಕವನಾಮೃತ’ ಎಂಬ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ.

    ಸ್ವತಃ ಕವಿಯಾಗಿರುವ ಇವರು ಹಲವಾರು ಸಾಹಿತ್ಯ ಸಂಘಟಣೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಾ ಹಲವಾರು ಉದಯೋನ್ಮುಖ ಕವಿಗಳಿಗೆ ವೇದಿಕೆಗಳನ್ನು ಒದಗಿಸುವ ಕೆಲಸದ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಶಾಲೆಗಳಲ್ಲಿ ಮಕ್ಕಳಿಗಾಗಿ ಸಾಹಿತ್ಯ ಕಮ್ಮಟಗಳನ್ನು ಮಾಡಿರುತ್ತಾರೆ. ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಮೈಸೂರು ಇದರ ಸ್ಥಾಪಕ – ರಾಜ್ಯ ಪ್ರದಾನ ಸಂಚಾಲಕ ಡಾಕ್ಟರ್ ಎಂ.ಜಿ.ಆರ್. ಅರಸ್ ಅವರ ಮಾರ್ಗದರ್ಶನದಲ್ಲಿ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇದರ ಜಿಲ್ಲಾಧ್ಯಕ್ಷರಾಗಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕಗಳನ್ನು ರಚಿಸಿ ಸಂಘಟಣೆಯ ಮೂಲಕ ಸಾಹಿತ್ಯ ಚಟುವಟಿಕೆಗಳು ಸಕ್ರಿಯವಾಗಿ ನಡೆಯುವಂತೆ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.

    ಕಥಾ ಬಿಂದು ಸಾಹಿತ್ಯ ಸಂಸ್ಥೆಯ ಸೌರಭ ರತ್ನ, ಸೃಷ್ಟಿ ಕಲಾ ಭೂಮಿ ಬೆಂಗಳೂರು ಸಂಸ್ಥೆಯಿಂದ ಸೃಷ್ಟಿ ಕಲಾ ಶ್ರೀ ಪ್ರಶಸ್ತಿ, ಕೌಸ್ತುಭ ಮಾಸ ಪತ್ರಿಕೆ ಮೈಸೂರು ಇವರಿಂದ ಕೌಸ್ತುಭ ರತ್ನ ಪ್ರಶಸ್ತಿ, ರಿಥಮ್ ಕಲ್ಚರಲ್ ವಿಂಗ್ಸ್ ಮಂಜೇಶ್ವರ ಇವರಿಂದ ಚುಟುಕು ಕಲಾರತ್ನ ಪುರಸ್ಕಾರ, ದೇಶ ಪ್ರೇಮಿ ಬಳಗ ಮಂಗಳೂರಿನಿಂದ ಗೌರವ ಸನ್ಮಾನ, ಗೋವಾ ಕನ್ನಡ ಸಂಘದಿಂದ ಕರುನಾಡ ಪದ್ಮಶ್ರೀ ಪುರಸ್ಕಾರ, ಕಲ್ಲಚ್ಚು ಪ್ರಕಾಶನದ ಕಲ್ಲಚ್ಚು ವಿಂಶತಿ ಪುರಸ್ಕಾರ, ವಚನ ಸಾಹಿತ್ಯ ಪರಿಷತ್ತು ಬೆಂಗಳೂರಿನಿಂದ ಪುರಸ್ಕಾರ ಹೀಗೆ ಹಲವಾರು ಸಂಘ ಸಂಸ್ಥೆಗಳಿಂದ ಬಿರುದುಗಳನ್ನೂ ಗೌರವ ಸನ್ಮಾನಗಳನ್ನೂ ಪಡೆದುಕೊಂಡಿರುವ ಇವರು ದೆಹಲಿ ಕರ್ನಾಟಕ ಸಂಘದಲ್ಲಿಯೂ ರಾಷ್ಟ್ರೀಯ ಮಟ್ಟದ ಚುಟುಕು ಸಾಹಿತ್ಯ ಕಾರ್ಯಕ್ರಮವನ್ನು ಆಯೋಜಿಸಿರುವುದು ಉಲ್ಲೇಖನೀಯವಾಗಿದೆ. ಪ್ರಸ್ತುತ ಕಾಸರಗೋಡು ಕುಬಣೂರು ಗ್ರಾಮದ ಒಡ್ಡಂಬೆಟ್ಟುವಿನಲ್ಲಿ ಪತ್ನಿ ಡಾ. ಅಪರ್ಣಾ ಆಳ್ವರ ಜೊತೆ ವಾಸವಾಗಿದ್ದಾರೆ. ಮಂಗಳೂರಿನ ತೊಕ್ಕೊಟ್ಟಿನಲ್ಲಿರುವ ಸ್ವಗೃಹದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮತ್ತು ಕಾರ್ಯ ಚಟುವಟಿಕೆಯನ್ನು ಮುಂದುವರಿಸುತ್ತಿದ್ದಾರೆ.

    Literature
    Share. Facebook Twitter Pinterest LinkedIn Tumblr WhatsApp Email
    Previous Articleಧಾರವಾಡದ ಡಾ. ದ.ರಾ. ಬೇಂದ್ರೆ ಭವನದಲ್ಲಿ ‘ಅಮರಸ್ವರ ಸಮಾರೋಹ’ | ಫೆಬ್ರವರಿ 02
    Next Article ವಿದುಷಿ ಶುಭಾ ಸಂತೋಷ್ ಇವರಿಂದ ಆನ್ ಲೈನ್ ಸಂಗೀತ ಕಾರ್ಯಾಗಾರ | ಫೆಬ್ರುವರಿ 8, 9, 15 ಮತ್ತು 16
    roovari

    Add Comment Cancel Reply


    Related Posts

    ಕಾಸರಗೋಡಿನ ಕನ್ನಡ ಭವನದಲ್ಲಿ ಕಯ್ಯಾರ ಕಿಞ್ಞಣ್ಣ ರೈ ಜನ್ಮದಿನೋತ್ಸವ

    June 9, 2025

    ದಲಿತ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆಯಾಗಿ ಡಾ. ಜಯದೇವಿ ಗಾಯಕವಾಡ ಆಯ್ಕೆ

    June 9, 2025

    ಅಕಾಡೆಮಿ ಸಭಾಂಗಣದಲ್ಲಿ ‘ಕಾವ್ಯಾಂ ವ್ಹಾಳೊ-3’ ಕೊಂಕಣಿ ಕವಿಗೋಷ್ಟಿ

    June 9, 2025

    ನಾಡೋಜ ಡಾ. ಸಿದ್ಧಲಿಂಗಯ್ಯನವರ ಪರಿನಿಬ್ಬಾಣ ಸ್ಮರಣಾ ಕಾರ್ಯಕ್ರಮ ಹಾಗೂ ವಿಚಾರ ಸಂಕಿರಣ | ಜೂನ್ 11

    June 9, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.