ಬೆಂಗಳೂರು : ಭಾರತ ಯಾತ್ರ ಕೇಂದ್ರ ಬೆಂಗಳೂರು ಇದರ ವತಿಯಿಂದ ಡಾ. ಅಜಯ ಕುಮಾರ ಸಿಂಹ ಇವರ ‘ಹರಿಯಲು ಬಿಡು’ ಕವನ ಸಂಕಲನ ಅನಾವರಣ ಕಾರ್ಯಕ್ರಮವನ್ನು ದಿನಾಂಕ 27 ಡಿಸೆಂಬರ್ 2025ರಂದು ಸಂಜೆ 5-30 ಗಂಟೆಗೆ ಬೆಂಗಳೂರು ಕನ್ನಡ ಭವನ ಕರ್ನಾಟಕ ನಾಟಕ ಅಕಾಡೆಮಿಯ ರಂಗ ಚಾವಡಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ನಿವೃತ್ತ ಐ.ಎ.ಎಸ್. ಅಧಿಕಾರಿ ಡಾ. ಬಿರಂಜೀವ ಸಿಂಗ್ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಚಿತ್ರಕಲಾ ಪರಿಷತ್ತು ಅಧ್ಯಕ್ಷರಾದ ಡಾ. ಬಿ.ಎಲ್. ಶಂಕರ್ ಇವರು ಕೃತಿ ಅನಾವರಣ ಮಾಡಲಿದ್ದಾರೆ. ಪ್ರಸಿದ್ಧ ಅನುವಾದಕರಾದ ಡಾ. ವನಮಾಲಾ ವಿಶ್ವನಾಥ ಇವರು ಪುಸ್ತಕ ಪರಿಚಯ ಮಾಡಲಿದ್ದು, ಅನುವಾದಕರಾದ ಡಾ. ಹೆಚ್.ಎಸ್. ಶಿವಪ್ರಕಾಶ್ ಇವರು ಮಾತನಾಡಲಿದ್ದಾರೆ.

